ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 11ರಿಂದ 60ರವರೆಗಿನ ಪ್ರತಿಭೆಗಳು

Published 23 ಜುಲೈ 2024, 14:46 IST
Last Updated 23 ಜುಲೈ 2024, 14:46 IST
ಅಕ್ಷರ ಗಾತ್ರ

ನವದೆಹಲಿ: ವಯಸ್ಸು ಎನ್ನುವುದು ಒಂದು ಸಂಖ್ಯೆ ಮಾತ್ರ. ಅದರಲ್ಲೂ ಒಲಿಂಪಿಕ್ ಕೂಟದ ವಿಷಯದಲ್ಲಿ ಇದು ಅಕ್ಷರಶಃ ನಿಜವಾಗುತ್ತದೆ. 

ಏಕೆಂದರೆ; ಒಲಿಂಪಿಕ್ಸ್ ವೇದಿಕೆಯು ಎಲ್ಲ ವಯೋಮಾನದವರೆಗೂ ಅವಕಾಶ ಕಲ್ಪಿಸಿದೆ. ಇದೀಗ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ 11 ವರ್ಷದವರಿಂದ 60ರ ವಯಸ್ಸಿನವರೆಗಿನ ಸ್ಪರ್ಧಿಗಳು ಕಣದಲ್ಲಿದ್ದಾರೆ.

ಝೇಂಗ್‌ ಹೊವೊ (ಚೀನಾ, ಸ್ಕೇಟ್‌ಬೋರ್ಡಿಂಗ್)

ಸ್ಜೇಟ್‌ಬೋರ್ಡಿಂಗ್‌ ಸ್ಪರ್ಧಾಳು ಚೀನಾದ ಝೇಂಗ್ ಹೊವೊಗೆ ಈಗ 11 ವರ್ಷ ಮತ್ತು 11 ತಿಂಗಳು. ಈ ಬಾಲಕಿಯು ಸದ್ಯದ ಒಲಿಂಪಿಕ್ ಕೂಟದಲ್ಲಿ ಅತ್ಯಂತ ಕಿರಿಯ ಕ್ರೀಡಾಪಟು. ಒಟ್ಟಾರೆ ಒಲಿಂಪಿಕ್ ಇತಿಹಾಸದಲ್ಲಿ ಎರಡನೇಯವರು. 1896ರಲ್ಲಿ ನಡೆದಿದ್ದ ಕೂಟದಲ್ಲಿ ಸ್ಪರ್ಧಿಸಿದ್ದ ಗ್ರೀಕ್ ಜಿಮ್ನಾಸ್ಟ್ ದಿಮಿಟ್ರಿಯೊಸ್ ಲಾಂದ್ರಾಸ್ (10 ವರ್ಷ, 218ದಿನಗಳು) ಮೊದಲ ಸ್ಥಾನದಲ್ಲಿದ್ದಾರೆ. 

ಬುಡಾಪೆಸ್ಟ್ ಮತ್ತು ಶಾಂಘೈನಲ್ಲಿ ನಡೆದಿದ್ದ ಕ್ವಾಲಿಫಿಕೇಷನ್ ಸ್ಪರ್ಧೆಗಳಲ್ಲಿ ಅವರು ಪ್ಯಾರಿಸ್‌ಗೆ ಅರ್ಹತೆ ಗಿಟ್ಟಿಸಿದ್ದರು. ಏಳನೇ ವಯಸ್ಸಿನಲ್ಲಿದ್ದಾಗಲೇ ಝೇಂಗ್ ಮೋಜಿಗಾಗಿ ಸ್ಕೇಟ್‌ಬೋರ್ಡಿಂಗ್ ಆಡಲು ಆರಂಭಿಸಿದ್ದರು. 

‘ಸ್ಕೇಟಿಂಗ್ ಬೋರ್ಡಿಂಗ್ ಆಟ ಮಜವಾಗಿರುತ್ತದೆ ಎಂದು ಯಾರೋ ಹೇಳಿದ್ದರು. ಅದಕ್ಕಾಗಿ ಆಡಲು ಆರಂಭಿಸಿದ್ದೆ. ನನಗೆ ನಿಜಕ್ಕೂ ಅದರಿಂದ ಬಹಳ ಆನಂದವಾಗಿತ್ತು’ ಎಂದು ಝೇಂಗ್ ಹೇಳಿದ್ದಾರೆ. ಇದೇ ಆಗಸ್ಟ್ 11ರಂದು 12ನೇ ವರ್ಷಕ್ಕೆ ಕಾಲಿಡುವರು. 

ಸ್ಕೇಟ್ ಬೋರ್ಡ್ ಕ್ರೀಡೆಯನ್ನು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆ ಮಾಡಲಾಗಿತ್ತು. 

ಜಿಲ್ ಇರ್ವಿಂಗ್ (ಕೆನಡಾ, ಈಕ್ವೆಸ್ಟ್ರಿಯನ್)

ಕೆನಡಾದ ಈಕ್ವೆಸ್ಟ್ರಿಯನ್ ತಂಡದಲ್ಲಿರುವ ಜಿಲ್ ಇರ್ವಿಂಗ್ ಅವರಿಗೆ ಈಗ 61 ವರ್ಷ. ಈ ಕೂಟದಲ್ಲಿ ಸ್ಪರ್ಧಿಸುತ್ತಿರುವ ಅತಿ ಹಿರಿಯ ಕ್ರೀಡಾಪಟುವಾಗಿದ್ದಾರೆ. 

ಆಸ್ಟ್ರೇಲಿಯಾದ ಮೇರಿ ಹನಾ ಅವರು 1996ರಿಂದೀಚೆಗೆ ಆರು ಒಲಿಂಪಿಕ್ಸ್‌ಗಳಲ್ಲಿ ಸ್ಪರ್ಧಿಸಿದ್ದಾರೆ. ಅವರಿಗೆ ಈಗ 69 ವರ್ಷ ಈ ಬಾರಿಯೂ ತಮ್ಮ ದೇಶದ ಈಕ್ವೆಸ್ಟ್ರಿಯನ್ ತಂಡದಲ್ಲಿ (ಡ್ರೆಸಾಜ್) ಮೀಸಲು ವಿಭಾಗದಲ್ಲಿದ್ಧರೆ.  ಆದರೆ ಅವರು ಪ್ಯಾರಿಸ್‌ನಲ್ಲಿ ಸ್ಪರ್ಧಾಕಣಕ್ಕೆ ಇಳಿಯುವುದು ಅನುಮಾನವೆನ್ನಲಾಗಿದೆ. ತಂಡದಲ್ಲಿರುವ ಯಾರಾದರೂ ಗಾಯಗೊಂಡು ಹೊರಬಿದ್ದರೆ ಮಾತ್ರ ಅವರು ಕಣಕ್ಕಿಳಿಯಬೇಕಾಗಬಹುದು ಎನ್ನಲಾಗಿದೆ.

1920ರಲ್ಲಿ ಆ್ಯಂಟ್‌ವರ್ಪ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಸ್ವೀಡನ್ ದೇಶದ ಶೂಟರ್ ಆಸ್ಕರ್ ಸ್ವಾನ್ ಅವರಿಗೆ 72 ವರ್ಷವಾಗಿತ್ತು. ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಅತಿ ಹಿರಿಯ ಕ್ರೀಡಾಪಟುವಾಗಿದ್ದಾರೆ. 

ಇರ್ವಿಂಗ್ ಅವರಷ್ಟೇ ಅಲ್ಲ.  ಪ್ಯಾರಿಸ್ ಕೂಟದಲ್ಲಿ 50 ವರ್ಷ ದಾಟಿದ ಇನ್ನೂ ಕೆಲವರು ಸ್ಪರ್ಧಿಸುತ್ತಿದ್ದಾರೆ. ಮಾರಿಯೊ ಡೆಸ್‌ಲಾರಿರ್ಸ್ (ಕೆನಡಾದ ಈಕ್ವೆಸ್ಟ್ರಿಯನ್; 59), ಕಾರ್ಲಸ್ ಹೆಸ್ಟರ್ (ಗ್ರೇಟ್‌ ಬ್ರಿಟನ್ ಈಕ್ವೆಸ್ಟ್ರಿಯನ್; 57), ನಿನೊ ಸಲುಕವೇಜ್ (ಜಾರ್ಜಿಯಾದ ಶೂಟರ್: 55), ಆ್ಯಂಡಿ ಮ್ಯಾಕ್‌ಡೊನಾಲ್ಡ್ (ಗ್ರೇಟ್‌ ಬ್ರಿಟನ್ ಸ್ಕೇಟ್‌ಬೋರ್ಡರ್; 50)

ಧೀನಿಧಿ  ದೇಸಿಂಗು (ಈಜುಪಟು; ಭಾರತ)

ಬೆಂಗಳೂರಿನ 14 ವರ್ಷದ ಈಜುಪಟು ಧೀನಿಧಿ ದೇಸಿಂಗು ಅವರು ಪ್ಯಾರಿಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಅತಿ ಕಿರಿಯ ವಯಸ್ಸಿ ಕ್ರೀಡಾಪಟುವಾಗಿದ್ದಾರೆ. 

1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಭಾಗವಿಸಿದ್ದ ಈಜು ಪಟು ಆರತಿ ಸಹಾ (11 ವರ್ಷ) ಅವರ ನಂತರದ ಸ್ಥಾನದಲ್ಲಿ ಧೀನಿಧಿ ಇದ್ದಾರೆ. 

ಭಜನ್ ಕೌರ್ (ಆರ್ಚರಿ; 18ವರ್ಷ), ಈಶಾ ಸಿಂಗ್ (ಶೂಟಿಂಗ್ 19) ಅವರು ಕಿರಿಯ ಸ್ಪರ್ಧಿಗಳಾಗಿದ್ದಾರೆ.  

ರೋಹನ್ ಬೋಪಣ್ಣ (ಟೆನಿಸ್; 44)

ಕರ್ನಾಟಕದ ರೋಹನ್ ಬೋಪಣ್ಣ ಅವರು ಭಾರತ ತಂಡದಲ್ಲಿರುವ ಅತ್ಯಂತ ಹಿರಿಯ ಆಟಗಾರ. ಈ ಕೂಟದಲ್ಲಿ ಬೋಪಣ್ಣ ಅವರು ಶ್ರೀರಾಮ್ ಬಾಲಾಜಿ ಅವರೊಂದಿಗೆ ಪುರುಷರ ಡಬಲ್ಸ್‌ನಲ್ಲಿ ಆಡಲಿದ್ಧಾರೆ.  2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೋಪಣ್ಣ ಅವರು ಮಹೇಶ್ ಭೂಪತಿಯವರೊಂದಿಗೆ ಆಡಿದ್ದರು. 

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೋಪಣ್ಣ ಅವರು ಲಿಯಾಂಡರ್ ಪೇಸ್ ಜೊತೆಗೂಡಿ ಆಡಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ ಅವರು ಸಾನಿಯಾ ಮಿರ್ಜಾ ಜೊತೆಗೆ ಕಣಕ್ಕಿಳಿದಿದ್ದರು. 

1924ರ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಸಿಡ್ನಿ ಜೇಕಬ್ಸ್‌ (44ವರ್ಷ, 267ದಿನಗಳು) ಟೆನಿಸ್‌ನಲ್ಲಿ ಆಡಿದ್ದ ಹಿರಿಯ ಆಟಗಾರನಾಗಿದ್ದಾರೆ. ಭಾರತದ ಸ್ಕೀಟ್ ಶೂಟರ್ ಭೀಮಸಿಂಗ್ ಬಹಾದ್ದೂರ್ (66ವರ್ಷ) ಅವರು 1976ರ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿದಿದ್ದರು. 

ಈ ಬಾರಿ ಭಾರತದ ಟಿಟಿ ಆಟಗಾರ ಅಚಂತ ಶರತ್ ಕಮಲ್ (42 ವರ್ಷ) ಅವರು ಐದನೇ ಒಲಿಂಫಿಕ್ಸ್‌ ಆಡಲು ಸಿದ್ಧವಾಗಿದ್ದಾರೆ. ಆರ್ಚರಿಪಟು ತರುಣದೀಪ್ ರಾಯ್ (40 ವರ್ಷ) ಕೂಡ ನಾಲ್ಕನೇ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.

Jill Irving
Jill Irving
Dhinidhi Desinghu of karnataka created a new national record in the 200m IM for Group III Girls at 47th Junior National Aquatic Championships at Basavanagudi Aquatic Centre in Bengaluru on Thursday. DH Photo/ B H Shivakumar
Dhinidhi Desinghu of karnataka created a new national record in the 200m IM for Group III Girls at 47th Junior National Aquatic Championships at Basavanagudi Aquatic Centre in Bengaluru on Thursday. DH Photo/ B H Shivakumar
India’s Tennis Player Rohan Bopanna addressing after he Unveiling the new logo of 5th World Coffee Conference- 2023 and he become brand ambassador during the curtain raiser at a hotel in Bengaluru on Monday. DH Photo/ B H Shivakumar
India’s Tennis Player Rohan Bopanna addressing after he Unveiling the new logo of 5th World Coffee Conference- 2023 and he become brand ambassador during the curtain raiser at a hotel in Bengaluru on Monday. DH Photo/ B H Shivakumar

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT