ಕ್ವಾಲಾಲಂಪುರ: ಎರಡು ಬಾರಿಯ ಚಾಂಪಿಯನ್ ಭಾರತ ತಂಡವು, ಬಿಹಾರದ ರಾಜಗಿರ್ನಲ್ಲಿ ನಡೆಯಲಿರುವ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಪಂದ್ಯದಲ್ಲಿ ನವೆಂಬರ್ 11 ರಂದು ಮಲೇಷ್ಯಾ ತಂಡವನ್ನು ಎದುರಿಸಲಿದೆ.

ಟೂರ್ನಿಯಲ್ಲಿ ಆತಿಥೇಯ ಭಾರತ ಸೇರಿದಂತೆ ಆರು ತಂಡಗಳು ಭಾಗವಹಿಸಲಿವೆ. ಚೀನಾ, ಮೂರು ಬಾರಿಯ ವಿಜೇತರಾದ ಕೊರಿಯಾ, ಎರಡು ಸಲದ ಚಾಂಪಿಯನ್ ಜಪಾನ್, ಮಲೇಷ್ಯಾ ಮತ್ತು ಥಾಯ್ಲೆಂಡ್ ಕಣದಲ್ಲಿರುವ ಇತರ ತಂಡಗಳಾಗಿವೆ.

ಏಷ್ಯನ್ ಹಾಕಿ ಫೆಡರೇಷನ್ ಟೂರ್ನಿಯ ವೇಳಾಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಫೈನಲ್ ನವೆಂಬರ್ 20ರಂದು ನಡೆಯಲಿದೆ. ಭಾರತ 2016ರಲ್ಲಿ ಸಿಂಗಪುರದಲ್ಲಿ ಮೊದಲ ಬಾರಿ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು. ಕಳೆದ ಬಾರಿ ರಾಂಚಿಯಲ್ಲಿ ನಡೆದ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮರಳಿ ಪಡೆದಿತ್ತು.

ಭಾರತವು ನವೆಂಬರ್ 12ರಂದು ಕೊರಿಯಾ ವಿರುದ್ಧ, 14ರಂದು ಥಾಯ್ಲೆಂಡ್ ವಿರುದ್ಧ, 16ರಂದು ಚೀನಾ ವಿರುದ್ಧ ಮತ್ತು 17ರಂದು ಜಪಾನ್ ವಿರುದ್ಧ ಆಡಲಿದೆ.

ರೌಂಡ್ರಾಬಿನ್ ಪಂದ್ಯಗಳ ನಂತರ ಮೊದಲ ನಾಲ್ಕು ಸ್ಥಾನ ಗಳಿಸುವ ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿವೆ. ಸೆಮಿಫೈನಲ್ ಪಂದ್ಯಗಳು 19ರಂದು ನಡೆಯಲಿವೆ. 20ರಂದು ಫೈನಲ್ ಪಂದ್ಯ ನಿಗದಿಯಾಗಿದೆ.

ಪ್ರಾಚೀನ ನಗರ ರಾಜಗೀರ್ನ (ರಾಜಗೃಹ) ಕ್ರೀಡಾಂಗಣವನ್ನು ಹೊಸದಾಗಿ ನಿರ್ಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.