ನವದೆಹಲಿ: ಭಾರತದ ರಕ್ಷಣೆ ಆಟಗಾರ್ತಿ ಉದಿತಾ ದುಹಾನ್ ಅವರು ಹಾಕಿ ಇಂಡಿಯಾ ಮಹಿಳೆಯರ ಲೀಗ್ನ ಹರಾಜು ಪ್ರಕ್ರಿಯೆಲ್ಲಿ ಅತಿ ಹೆಚ್ಚು ಮೌಲ್ಯ ಪಡೆದಿದ್ದಾರೆ. ಮಂಗಳವಾರ ಅವರು ₹32 ಲಕ್ಷ ಮೊತ್ತಕ್ಕೆ ಶ್ರಾಚಿ ರರ್ ಬೆಂಗಾಲ್ ಟೈಗರ್ಸ್ ತಂಡದ ಪಾಲಾಗಿದ್ದಾರೆ.

ಡಚ್ (ನೆದರ್ಲೆಂಡ್ಸ್) ಆಟಗಾರ್ತಿ, ಡ್ರ್ಯಾಗ್ ಫ್ಲಿಕ್ ಪರಿಣಿತೆ ಯಿಬ್ಬಿ ಜಾನ್ಸೆನ್ ಅವರು ಎರಡನೇ ಅತಿ ಹೆಚ್ಚು ಮೊತ್ತ (₹29 ಲಕ್ಷ)ಕ್ಕೆ ಒಡಿಶಾ ವಾರಿಯರ್ಸ್ ಪಾಲಾಗಿದ್ದಾರೆ.

ಭಾರತದ ಆಟಗಾರ್ತಿಯರಲ್ಲಿ ಲಾಲ್ರೆಮ್ಸಿಯಾಮಿ ಅವರು ₹25 ಲಕ್ಷ ಮೊತ್ತಕ್ಕೆ ಶ್ರಾಚಿ ಬೆಂಗಾಲ್ ಟೈಗರ್ಸ್ ಪಾಲಾಗಿದ್ದಾರೆ. ಸುನೆಲಿಟಾ ಟೊಪ್ಪೊ ಅವರನ್ನು ₹24 ಲಕ್ಷಕ್ಕೆ ಡೆಲ್ಲಿ ಎಸ್ಜಿ ಪೈಪರ್ಸ್ ತಂಡ ಪಡೆದುಕೊಂಡಿದೆ. ಸಂಗೀತಾ ಕುಮಾರಿ ಅವರು ₹22 ಲಕ್ಷಕ್ಕೆ ಇದೇ ತಂಡದ ಪಾಲಾಗಿದ್ದಾರೆ.

ವಿದೇಶದ ಹಲವು ಆಟಗಾರ್ತಿಯರೂ ಬಿಡ್ನಲ್ಲಿ ವಿವಿಧ ತಂಡಗಳ ಪರ ಆಡಲು ಸಜ್ಜಾಗಿದ್ದರೆ. ಬೆಲ್ಜಿಯಂನ ಚಾರ್ಲೊಟ್ ಇಂಗೆಲ್ಬರ್ಟ್ (₹16 ಲಕ್ಷಕ್ಕೆ ಸೂರ್ಮಾ ಹಾಕಿ ಕ್ಲಬ್), ಜರ್ಮನಿಯ ಚಾರ್ಲೊಟೆ ಸ್ಟಫನ್ಹಾರ್ಸ್ಟ್ (₹16 ಲಕ್ಷಕ್ಕೆ ಸೂರ್ಮಾ ಹಾಖಿ ಕ್ಲಬ್), ಆಸ್ಟ್ರೇಲಿಯಾದ ಜೋಸ್ಲಿನ್ ಬರ್ಟ್ರಾಮ್ (₹15 ಲಕ್ಷಕ್ಕೆ ಒಡಿಶಾ ವಾರಿಯರ್ಸ್) ಇವರಲ್ಲಿ ಪ್ರಮುಖರು.

ಭಾರತದ ಅನುಭವಿ ಆಟಗಾರ್ತಿ ವಂದನಾ ಕಟಾರಿಯಾ ₹10.5 ಲಕ್ಷಕ್ಕೆ ಶ್ರಾಚಿ ಬೆಂಗಾಲ್ ಟೈಗರ್ಸ್ ತಂಡದ ಪಾಲಾಗಿದ್ದಾರೆ.

ಭಾರತ ತಂಡದ ನಾಯಕಿ ಸಲೀಮಾ ಟೆಟೆ (₹20 ಲಕ್ಷ), ಇಶಿಕಾ ಚೌಧರಿ (₹16 ಲಕ್ಷ) ಮತ್ತು ನೇಹಾ ಗೋಯಲ್ (₹10 ಲಕ್ಷ) ಅವರನ್ನು ಒಡಿಶಾ ವಾರಿಯರ್ಸ್ ತಂಡ ಬಿಡ್ನಲ್ಲಿ ಪಡೆದಿದೆ.

ಭಾರತ ತಂಡದ ಮಾಜಿ ನಾಯಕಿ ಸವಿತಾ (₹20 ಲಕ್ಷ), ಶರ್ಮಿಲಾ ದೇವಿ (₹10ಲಕ್ಷ) ಮತ್ತು ನಿಕ್ಕಿ ಪ್ರಧಾನ್ (₹12 ಲಕ್ಷ) ಅವರು ಸೂರ್ಮಾ ಹಾಕಿ ಕ್ಲಬ್ ಪರ ಆಡಲಿದ್ದಾರೆ.

ಡೆಲ್ಲಿ ಎಸ್ಜಿ ಫೈಪರ್ಸ್ ತಂಡವು ಅಂತರರಾಷ್ಟ್ರೀಯ ಆಟಗಾರ್ತಿ ನವನೀತ್ ಕೌರ್ (₹19 ಲಕ್ಷ), ಯುವ ಗೋಲ್ ಕೀಪರ್ ಬಿಚುದೇವಿ ಖರಿಬಮ್ (₹16 ಲಕ್ಷ) ಮತ್ತು ದೀಪಿಕಾ (₹20 ಲಕ್ಷ) ಅವರನ್ನು ಬಿಡ್ನಲ್ಲಿ ತನ್ನದಾಗಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.