ಸಾಂಪ್ರದಾಯಿಕ ಶಿಕ್ಷಣ ಮುಗಿಸಿದವರೆಲ್ಲ ಸಾಧಾರಣವಾಗಿ ಉದ್ಯೋಗವನ್ನು ಹುಡುಕಿಕೊಳ್ಳುತ್ತಾರೆ. ಉದ್ಯೋಗಕ್ಕೂ, ಪಡೆದುಕೊಂಡ ಪದವಿಗೂ ಅನೇಕ ಬಾರಿ ನೇರ ಸಂಬಂಧ ಇರುವುದಿಲ್ಲ. ಅರ್ಹತೆ ಇದ್ದರೂ ಇಷ್ಟಪಡುವ ಉದ್ಯೋಗ ಸಿಗದಿರುವುದು ಸಹ ಅನೇಕರ ಅನುಭವ. ಸ್ಪರ್ಧೆಯಲ್ಲಿ ಗೆಲ್ಲದಿದ್ದರೆ ಉದ್ಯೋಗವೂ ಮರೀಚಿಕೆ. ಆದ್ದರಿಂದ, ವೃತ್ತಿಲೋಕಕ್ಕೆ ಕಾಲಿಡುವವರು, ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಉದ್ಯೋಗ ಸಂದರ್ಶನಕ್ಕಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು.

ಈ ಕಾರ್ಯವನ್ನು `ಸಂದರ್ಶನಕ್ಕೆ ಸಿದ್ಧವಾಗುವುದು' ಮತ್ತು `ಸಂದರ್ಶನವನ್ನು ಯಶಸ್ವಿಯಾಗಿ ನಿಭಾಯಿಸುವುದು' ಎಂದು ಎರಡು ಹಂತಗಳಾಗಿ ವಿಂಗಡಿಸಬಹುದು.

ಸಂದರ್ಶನಕ್ಕೆ ಮೊದಲು
ವಿವಿಧ ಮಾಧ್ಯಮಗಳಿಂದ (ವೃತ್ತಪತ್ರಿಕೆ, ಉದ್ಯೋಗ ಕುರಿತ ವಿಶೇಷ ಪತ್ರಿಕೆ, ಅಂತರ್ಜಾಲ, ಟೆಲಿವಿಷನ್, ಸ್ನೇಹಿತರು, ಮಾನವ ಸಂಪನ್ಮೂಲ ಏಜೆನ್ಸಿಗಳು, ಹಿರಿಯ ಅಧಿಕಾರಿಗಳು, ಸಮಾಜ ಸೇವಕರು) ಸಂಗ್ರಹಿಸಿದ ವಿವರಗಳಿಗೆ ಅನುಸಾರವಾಗಿ, ನಿಮ್ಮದೇ ಆದ ಸಿ.ವಿ.ಯನ್ನು (ಬಯೋಡೇಟ) ಸಿದ್ಧ ಮಾಡಿಕೊಳ್ಳಬೇಕು.

ಸಿ.ವಿ. ತಯಾರಿಸುವಾಗ ಗಮನಿಸಬೇಕಾದ ಅಂಶಗಳಲ್ಲಿ ಮುಖ್ಯವಾದವು:
1. ಈ ಕೆಲಸ ನನಗೆ ಇಷ್ಟವೇ?
2. ಈ ಕೆಲಸಕ್ಕೆ ನಾನು ಅರ್ಹನೇ?
3. ಈ ಕೆಲಸವನ್ನು ಕೇವಲ ಜೀವನೋಪಾಯಕ್ಕಾಗಿ ಆರಿಸಿಕೊಳ್ಳುತ್ತಿದ್ದೇನೆಯೇ?
4. ನನ್ನ ಸುತ್ತಲಿನವರ ಬಲವಂತಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆಯೇ?
5. ಈ ವೃತ್ತಿಯಿಂದ ನನ್ನ ವೈಯಕ್ತಿಕ ಆಸೆ ಆಕಾಂಕ್ಷೆಗಳಿಗೆ ಕುಂದುಬರುತ್ತದೆಯೇ ಅಥವಾ ಅದಕ್ಕೆ ಪೂರಕ ಆಗುತ್ತದೆಯೇ?
6. ಈ ಕೆಲಸದಿಂದ ತುಂಬಾ ಹಣ ಗಳಿಸಬಹುದು ಎಂಬುದೇ ಮುಖ್ಯ ಕಾರಣವೇ?
7. ಅಕಸ್ಮಾತ್ತಾಗಿ ಈ ಕೆಲಸ ನನಗೆ ಸಿಕ್ಕಿದರೆ ನಾನು ಇದನ್ನು ನಿಭಾಯಿಸಬಲ್ಲೆನೇ?
8. ಈ ಕೆಲಸ ನನಗೆ ಒಗ್ಗದಿದ್ದರೆ, ಬೇಕಾದಾಗ ಬಿಟ್ಟುಬಿಡಬಹುದೇ?
9. ಈ ಕೆಲಸದ ಅನುಭವವನ್ನು ಆಧರಿಸಿ, ನನಗೆ ಬೇರೆ ಉದ್ಯೋಗ ಸಿಗುತ್ತದೆಯೇ?
10. ಉದ್ಯೋಗಕ್ಕೆ ನಿಗದಿಯಾಗಿರುವ ಕರಾರು, ಶಿಸ್ತು, ಸಂಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನನ್ನಿಂದ ಸಾಧ್ಯವೇ?
11. ಸಂದರ್ಶನಕ್ಕೆ ಹಾಜರಾಗುವುದಕ್ಕೆ ಮೊದಲು ಇತರ ಪೂರಕ ಮಾಹಿತಿಯನ್ನು ಹೇಗೆ ಪಡೆದುಕೊಳ್ಳಬಹುದು?
12. ಸ್ವ ವಿವರಗಳನ್ನು ಮರೆಮಾಚದೆ (ಆರ್ಥಿಕ ಪರಿಸ್ಥಿತಿ/ ಮೀಸಲಾತಿ/ ಅಂಗವೈಕಲ್ಯ/ ವಿಶೇಷ ಗುಣ) ಮೊದಲ ಹಂತದಲ್ಲೇ ಹೇಳುವುದು ಅಗತ್ಯವೇ, ಅನಗತ್ಯವೇ?
ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರಿಸುವ ಪುಸ್ತಕಗಳು, ಕೌನ್ಸಿಲರ್‌ಗಳು, ಅಂತರ್ಜಾಲ ತಾಣಗಳು ಲಭ್ಯವಿವೆ.

ಸಂದರ್ಶನದ ದಿನ
1. ನೀವು ಕಳುಹಿಸಿರುವ ಅರ್ಜಿಯ ಎಲ್ಲ ವಿವರಗಳನ್ನೂ ನೆನಪಿಟ್ಟುಕೊಳ್ಳಿ. ಸಂದರ್ಶಕರು ಎದುರಿಗಿರುವಾಗ, `ಅಲ್ಲಿ ಏನು ಬರೆದಿದ್ದೀನಿ ಅದೇ ಸರಿ, ಈಗ ನಾನು ಹೇಳಿದ್ದು ಸರಿಯಲ್ಲ' ಎನ್ನಬೇಡಿ.

2. ಯಾವುದೇ ಕಾರಣಕ್ಕೂ ಅನಿರ್ದಿಷ್ಟ, ಅನಿಶ್ಚಿತ, ಅಪ್ರಾಮಾಣಿಕ ಹೇಳಿಕೆಗಳನ್ನು ನೀಡಬೇಡಿ. ಒಂದು ಸುಳ್ಳು ಇನ್ನೊಂದು ಸುಳ್ಳಿಗೆ ದಾರಿ ಎನ್ನುವುದು ನೆನಪಿರಲಿ.

3. ನಗು ಮುಖ, ಸರಳತೆ ಎಲ್ಲರನ್ನೂ ಮೆಚ್ಚಿಸುತ್ತದೆ. ಗಾಬರಿಯ ಮುಖಭಾವ ಸಂದರ್ಶಕರಿಗೆ ತಪ್ಪು ಸೂಚನೆಗಳನ್ನು ತಲುಪಿಸುತ್ತದೆ.

4. ನನ್ನನ್ನು ನೀವು ಈ ಕೆಲಸಕ್ಕೆ ಆಯ್ಕೆ ಮಾಡಿದರೆ, ಕ್ರಮೇಣ ಯಾವ ಉನ್ನತ ಮಟ್ಟಕ್ಕೆ ಬಡ್ತಿ ಪಡೆಯಬಹುದು ಎಂದು ಕೇಳಿ. ಇದರಿಂದ ನಿಮಗೆ ಇದೇ ಸಂಸ್ಥೆಯಲ್ಲಿ, ಚೆನ್ನಾಗಿ ಕೆಲಸ ಮಾಡಿ ಮುಂದುವರಿಯುವ ಹಂಬಲವಿದೆ ಎಂದು ಅವರು ತಿಳಿಯುತ್ತಾರೆ.

5. ಮುಂದಿನ ಒಂದು ವರ್ಷದಲ್ಲಿ ನಾನು ಏನೇನು ಹೊಸದು ಕಲಿತಿರುತ್ತೇನೆ ಎಂದು ಕೇಳುವುದರಿಂದ, ನಿಮಗೆ ಕಲಿಯುವ ಆಸೆಯಿದೆ ಎಂದು ತಿಳಿದುಬರುತ್ತದೆ.

6. ಈಗಿರುವ ರೀತಿಯಲ್ಲೇ ಈ ಕೆಲಸ ಮುಂದುವರಿಸಿಕೊಂಡು ಹೋಗಬೇಕೇ ಅಥವಾ ನನಗೆ ಸೂಕ್ತ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆಯೇ ಎಂದು ಪ್ರಶ್ನಿಸಿ. ಈ ಪ್ರಶ್ನೆ, ನಿಮ್ಮ ಮುಂದಾಲೋಚನೆ ಮತ್ತು ಮನೋಭಾವಕ್ಕೆ ಸಂಬಂಧಿಸಿದ್ದು. ಯಾವ ಬದಲಾವಣೆಗೂ ಅವಕಾಶ ಇಲ್ಲದಿದ್ದರೆ ಅದು ನಿಮಗೇ ಸರಿ ಅನ್ನಿಸದಿರಬಹುದು.

7. ನನ್ನ ವೈಯಕ್ತಿಕ ಬೆಳವಣಿಗೆಯೂ ನನಗೆ ಮುಖ್ಯ, ಆದ್ದರಿಂದ ನಿಮ್ಮ ಸಂಸ್ಥೆ ನನ್ನನ್ನು ಯಾವ ಯಾವ ತರಬೇತಿ ಕಾರ್ಯಕ್ರಮಗಳಿಗೆ ನಿಯೋಜಿಸುತ್ತದೆ ಎಂದು ಕೇಳಿ. ಆಗ ನಿಮ್ಮನ್ನು ಸಂದರ್ಶನಕ್ಕೆ ಕರೆದಿರುವ ಸಂಸ್ಥೆ ನಿಮ್ಮ ಬೆಳವಣಿಗೆಗೂ ಆಸಕ್ತಿ ತೋರಿಸುತ್ತದೆಯೇ ಇಲ್ಲವೇ ಎನ್ನುವುದು ತಿಳಿಯುತ್ತದೆ.

8. ಈ ಕೆಲಸದಲ್ಲಿ ನಿಮ್ಮಂದಿಗೆ ಯಾವ ರೀತಿಯ ಸಹೋದ್ಯೋಗಿಗಳು ಇರುತ್ತಾರೆ ಎಂದು ತಿಳಿದುಕೊಳ್ಳಿ. ವಯಸ್ಸಿನಲ್ಲಿ ಹಿರಿಯರು, ಪರಿಣತರು, ದೇಶೀಯರು, ಮಹಿಳಾ ಉದ್ಯೋಗಿಗಳು, ಪ್ರಗತಿಯಲ್ಲಿ ಆಸಕ್ತಿಯಿಲ್ಲದೆ ಏಕತಾನತೆಯನ್ನು ರೂಢಿಸಿಕೊಂಡವರು, ನಿಮಗೆ ಕಲಿಸಬಲ್ಲವರು, ನಿಮ್ಮ ಸ್ವಾತಂತ್ರ್ಯವನ್ನು ಇಷ್ಟಪಡದವರು ಸೇರಿದಂತೆ ಎಂಥಹವರ ಸಹವಾಸದಲ್ಲಿ ನೀವು ಕೆಲಸ ಮಾಡಬೇಕಾಗುತ್ತದೆ ಎಂದು ಅರಿಯಲು ಸಹಾಯ ಆಗುತ್ತದೆ.

9. ಈ ಕೆಲಸಕ್ಕೆ ನಾನು ಆಯ್ಕೆಯಾದರೆ ನನ್ನ ಕಲಿಕೆಯನ್ನು ಎಷ್ಟು ಸಮಯಕ್ಕೆ ಒಮ್ಮೆ ಪರಿಶೀಲಿಸುತ್ತೀರಿ ಎಂದು ಪ್ರಶ್ನಿಸಿ. ನಿಗದಿತ (6 ತಿಂಗಳು, 1 ವರ್ಷ) ಸಮಯಕ್ಕೆ ಸರಿಯಾಗಿ ಪರಿಶೀಲಿಸಿ ಸಲಹೆ ಸೂಚನೆ ನೀಡುವುದು ಒಳ್ಳೆಯ ಸಂಘಟನೆಯ ಲಕ್ಷಣ.

10. ನನ್ನ ಸಾಮರ್ಥ್ಯ, ಕೌಶಲ ಬಳಸಿ ನಾನು ಮಾಡಬೇಕಾಗುವ ಕೆಲಸ ಯಾವುದು? ಈ ಪ್ರಶ್ನೆ, ಅಭ್ಯರ್ಥಿಗೆ ತನ್ನ ಸಾಮರ್ಥ್ಯದ ಇತಿಮಿತಿಯ ಬಗ್ಗೆ ಎಚ್ಚರಿಕೆ ಕೊಡುತ್ತದೆ.

11. ನನ್ನ ಶಕ್ತಿ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಾನು ಸಿದ್ಧನಿರುವಾಗ, ಸಂಸ್ಥೆಯ ಆಡಳಿತ ವರ್ಗ ಮತ್ತು ಇತರ ಸೌಲಭ್ಯಗಳು ಎಷ್ಟರ ಮಟ್ಟಿಗೆ ಸಹಕರಿಸಬಲ್ಲವು? ಹವ್ಯಾಸಗಳನ್ನು ಮುಂದುವರಿಸಲು ಸಾಧ್ಯವೇ?- ನೀವು ಆಯ್ಕೆಯಾಗುವುದು ಖಚಿತವಾದ ಮೇಲೆ ಮಾತ್ರ ಈ ಪ್ರಶ್ನೆ ಸೂಕ್ತ. ಏಕೆಂದರೆ, ನೌಕರರು ಸಂಪೂರ್ಣ ಅವಧಿಯನ್ನು ತಮಗೇ ಮೀಸಲಿಡಬೇಕೆಂದು ಅನೇಕ ಸಂಘಟನೆಗಳು ಕಡ್ಡಾಯ ಮಾಡುತ್ತವೆ.

12. ಈ ಎಲ್ಲ ಪ್ರಶ್ನೆಗಳಿಂದ ನಿಮಗೆ ನನ್ನ ಬಗ್ಗೆ ಒಂದು ನಿರ್ದಿಷ್ಟ ಅಭಿಪ್ರಾಯ ಮೂಡಿರುತ್ತದೆ, ನಿಮ್ಮ ಅನುಭವದಲ್ಲಿ, ನಾನು ಯಾವುದಾದರೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕೇ?- ವಿವೇಚನೆಯನ್ನು ಆಧರಿಸಿ ಈ ಪ್ರಶ್ನೆ

ಕೇಳಬಹುದು. ಅದಕ್ಕೆ ತಕ್ಷಣ ಉತ್ತರ ಸಿಗದಿದ್ದರೂ, ಸಂದರ್ಶಕರ ಮುಖಭಾವದಿಂದಲೇ ನೀವು ಸೂಚನೆಗಳನ್ನು ಗ್ರಹಿಸಬಹುದು.
ಈ 12 ಸಲಹೆಗಳು ಪ್ರತಿ ಜಾಣ ಅಭ್ಯರ್ಥಿಗೂ ಅನ್ವಯಿಸುತ್ತವೆ. ಆದರೆ ಎಲ್ಲ ಸಂದರ್ಶಕರನ್ನೂ ಈ ಪ್ರಶ್ನೆಗಳನ್ನು ಕೇಳಲಾಗದು. ಏನೇ ಆದರೂ ಯಾವುದೇ ಕೆಲಸವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಮೊದಲು ಅದರ ಬಗ್ಗೆ ಸಮಾಧಾನವಾಗಿ ಯೋಚಿಸಿ, ಅನುಮಾನ ಪರಿಹಾರವಾದ ನಂತರವಷ್ಟೇ ಅದನ್ನು ಆರಂಭಿಸಬೇಕು. ವೃತ್ತಿಜೀವನದ ಸವಾಲನ್ನು ಸ್ವೀಕರಿಸಲು ಅಗತ್ಯವಾದ ಗುಣಗಳನ್ನು ಶಿಕ್ಷಣ, ಸಹವಾಸ, ಸಹನೆ ಹಾಗೂ ಸತತ ಪ್ರಯತ್ನದಿಂದ ಬೆಳೆಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.