ಬೆಂಗಳೂರು: ರೈಡರ್‌ಗಳ ಕೌಶಲ್ಯಗಳನ್ನು ಓರೆಗೆ ಹಚ್ಚುವ ಹಾಗೂ ದೇಶದಲ್ಲಿ ಮೋಟಾರ್ ಸ್ಪೋರ್ಟ್ಸ್ ಬಗ್ಗೆ ಆಸಕ್ತಿ ಹೆಚ್ಚಿಸುವ ಉದ್ದೇಶದೊಂದಿಗೆ ರೆಡ್ ಬುಲ್ ಡರ್ಟ್ ಬೈಕ್ ರೇಸ್ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮೋಟಾರ್‌ಸೈಕ್ಲಿಸ್ಟ್ ಸಿಎಸ್ ಸಂತೋಷ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಗುರುವಾರ ಬಿಗ್ ರಾಕ್ ಡರ್ಟ್ ಪಾರ್ಕ್‌ನಲ್ಲಿ ರೇಸ್ ನಡೆಯಲಿದ್ದು, ಹಲವು ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಲಿದೆ. ರೆಡ್ ಬುಲ್ ಕಂಪೆನಿಯು ಭಾರತದಲ್ಲಿ ಈ ಹೊಸ ಮಾದರಿಯ ರೇಸ್ ಆಯೋಜಿಸುತ್ತಿದೆ. ಹೀರೊ ಮೋಟಾರ್‌ಸ್ಪೋರ್ಟ್ಸ್ ಕಂಪೆನಿಯು ಇದರೊಂದಿಗೆ ಕೈಜೋಡಿಸಿದೆ’ ಎಂದು ಅವರು ನುಡಿದರು.

ದೇಶದ 32 ಮಂದಿ ಆಯ್ದ ರೈಡರ್‌ಗಳು ಈ ರೇಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಡರ್ಟ್ ಟ್ರ್ಯಾಕ್, ಮೋಟಾರ್ ಕ್ರಾಸ್, ಮರಳು, ದಿನ್ನೆ ಮತ್ತಿತರ ಅಡೆತಡೆಗಳನ್ನು ಹೊಂದಿರುವ ರೇಸ್‌ನಲ್ಲಿ ಎಂಟು ಮಂದಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಅದರಲ್ಲಿ ನಾಲ್ಕು ಮಂದಿಯನ್ನು ಫೈನಲ್‌ಗೆ ಆಯ್ಕೆ ಮಾಡಲಾಗುತ್ತದೆ. ಈ ನಾಲ್ವರಲ್ಲಿ ಒಬ್ಬರು ಚಾಂಪಿಯನ್ ಆಗಿ ಹೊರಹೊಮ್ಮುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.