ಟೋಕಿಯೊ: ಮಹಿಳೆಯರ ಫೆನ್ಸಿಂಗ್‌ನಲ್ಲಿ ಭಾರತದ ಸಿ.ಎ ಭವಾನಿ ದೇವಿ ಅವರು ನಾದಿಯಾ ಬೆನ್ ಅಜಿಜಿ ವಿರುದ್ಧ 15–3 ಅಂತರದ ಗೆಲುವು ದಾಖಲಿಸಿದ್ದಾರೆ.

ಚೆನ್ನೈನ ಭವಾನಿ ದೇವಿ ಒಲಿಂಪಿಕ್ಸ್ ಕೂಟಕ್ಕೆ ಆಯ್ಕೆಯಾದ ಭಾರತದ ಮೊದಲ ಫೆನ್ಸರ್ ಎನಿಸಿಕೊಂಡಿದ್ದಾರೆ. ಮೊದಲ ಬಾರಿಯೇ ಉತ್ತಮ ಪ್ರದರ್ಶನ ನೀಡಿ ಗೆಲುವಿನ ಶುಭಾರಂಭ ಮಾಡಿದ್ದಾರೆ.

ಓದಿ:ಫೆನ್ಸಿಂಗ್: ಭವಾನಿಗೆ ಟೋಕಿಯೊ ಒಲಿಂಪಿಕ್ಸ್ ಟಿಕೆಟ್

ಮೊದಲ ಮೂರು ನಿಮಿಷಗಳಲ್ಲಿ ಒಂದೂ ಪಾಯಿಂಟ್ ಗಳಿಸುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಬಳಿಕ 8–0 ಲೀಡ್ ಪಡೆದು ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಂಡರು. ಎರಡನೇ ಅವಧಿಯಲ್ಲಿ ಪೂರ್ಣ ಹಿಡಿತ ಸಾಧಿಸಿದ ಅವರು 6 ನಿಮಿಷ 14 ಸೆಕೆಂಡ್‌ಗಳಲ್ಲಿ ಜಯ ದಾಖಲಿಸಿದರು.

ಏಷ್ಯಾ ಮತ್ತು ಒಷಿನಿಯಾ ವಲಯದಿಂದ ಲಭ್ಯ ಇರುವ ಎರಡು ಸ್ಥಾನಗಳ ಪೈಕಿ ಒಂದರಲ್ಲಿ ಭವಾನಿ ಅವರು ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.