ಹಿರೋಶಿಮಾ: ಅಗ್ರಶ್ರೇಯಾಂಕದ ಆಟಗಾರ್ತಿ ಜಾಂಗ್ ಶೂಯಿ ಅವರು ಡಬ್ಲ್ಯುಟಿಎ ಜಪಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಚೀನಾದ ಶೂಯಿ 7–5, 6–3ರಲ್ಲಿ ಪೋಲೆಂಡ್ನ ಮಗ್ದಲೆನಾ ಫ್ರೆಚ್ ಅವರನ್ನು ಮಣಿಸಿದರು.

ಇನ್ನೊಂದು ಪಂದ್ಯದಲ್ಲಿ ಕೆನಡಾದ ಯೂಜ್ನಿ ಬೌಷಾರ್ಡ್ ಆಘಾತ ಕಂಡರು. ಅವರು 4–6, 4–6ರಿಂದ ಜಪಾನ್ನ ನವೊ ಹಿಬಿನೊ ಎದುರು ಸೋತರು.

ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಕ್ಯಾಥರಿನಾ ಕೊಜಲೊವಾ 6–2, 6–3ರಲ್ಲಿ ಯುಕ್ಸುವಾನ್ ಜಾಂಗ್ ಎದುರೂ, ಜರಿನಾ ದಿಯಾಸ್ 6–2, 6–1ರಲ್ಲಿ ಸಾರಾ ಸೊರ್ರಿಬೆಸ್ ಟೊರ್ಮೊ ವಿರುದ್ಧವೂ, ಅಮಂಡಾ ಅನಿಸಿಮೊವಾ 6–1, 6–1ರಲ್ಲಿ ಜನಾ ಫೆಟ್ ಮೇಲೂ, ಮಗ್ದಾ ಲಿನೆಟ್ 6–4, 6–1ರಲ್ಲಿ ಜೊಹಾನ್ನ ಲಾರ್ಸನ್ ವಿರುದ್ಧವೂ, ತಮರಾ ಜಿದಾನ್ಸೆಕ್ 6–2, 6–4ರಲ್ಲಿ ಅರಿನಾ ರೊಡಿಯೊನೊವಾ ಮೇಲೂ, ಕ್ವಿಯಾಂಗ್ ವಾಂಗ್ 3–6, 6–1, 6–3ರಲ್ಲಿ ಪ್ರಿಸಿಲ್ಲಾ ಹೊನ್ ಎದುರೂ, ಮ್ಯಾಂಡಿ ಮಿನೆಲ್ಲಾ 6–3, 6–4ರಲ್ಲಿ ಕುರುಮಿ ನಾರಾ ಮೇಲೂ, ಸು ವೀ ಹ್ಸೀ 4–6, 6–1, 6–3ರಲ್ಲಿ ಪೊಲೊನಾ ಹರ್ಕೊಗ್ ವಿರುದ್ಧವೂ ವಿಜಯಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.