ಇಂಡಿಯನ್ ವೆಲ್ಸ್, ಅಮೆರಿಕ: ವಿಶ್ವದ ಅಗ್ರ ಕ್ರಮಾಂಕದ ಆಟಗಾರ ನೊವಾಕ್ ಜೊಕೊವಿಚ್, ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ಬುಧವಾರ ನಿರಾಸೆ ಕಂಡರು. ಮೂರನೇ ಸುತ್ತಿನ ಪಂದ್ಯದಲ್ಲಿ ಅವರನ್ನು ಜರ್ಮನಿಯ ಫಿಲಿಪ್ ಕೊಹಲ್ಶ್ರೀವರ್ 6–4, 6–4 ರಿಂದ ಮಣಿಸಿದರು.

ಆಸ್ಟ್ರೇಲಿಯಾ ಓಪನ್ನಲ್ಲಿ ದಾಖಲೆಯ ಏಳನೇ ಪ್ರಶಸ್ತಿ ಗೆದ್ದ ನಂತರ ಇದೇ ಮೊದಲ ಬಾರಿ ಜೊಕೊವಿಚ್ ಅಂಗಣಕ್ಕೆ ಇಳಿದಿದ್ದರು. ವಿಶ್ವ ಕ್ರಮಾಂಕ ದಲ್ಲಿ 39ನೇ ಸ್ಥಾನದಲ್ಲಿರುವ ಜರ್ಮನಿ ಆಟಗಾರನ ಎದುರು ಮಂಕಾದರು.

ಸ್ಪೇನ್ನ ರಫೆಲ್ ನಡಾಲ್ ಅರ್ಜೆಂಟೀನಾದ ಡೀಗೊ ಸ್ವಾರ್ಟ್ಸ್ಮನ್ ಅವರನ್ನು 6–3, 6–1ರಿಂದ ಮಣಿಸಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಮತ್ತೊಂದು ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್ ತಮ್ಮದೇ ದೇಶದ ಸ್ಟಾನ್ ವಾವ್ರಿಂಕ ಎದುರು 6–3, 6–4ರಲ್ಲಿ ಗೆದ್ದರು.

ಒಸಾಕ, ಹಲೆಪ್ಗೆ ಸೋಲು: ಮಹಿಳೆ ಯರ ವಿಭಾಗದಲ್ಲಿ ವಿಶ್ವ ಕ್ರಮಾಂಕದಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿರುವ ನವೊಮಿ ಒಸಾಕ ಮತ್ತು ಸಿಮೋನ ಹಲೆಪ್ ಕೂಡ ನಿರಾಸೆ ಅನುಭವಿಸಿದರು. ಒಸಾಕ ಅವರನ್ನು ಬೆಲಿಂದಾ ಬೆನ್ಸಿಕ್ 6–3, 6–1ರಿಂದ ಮಣಿಸಿದರೆ ಹಲೆಪ್ 2-6, 6-3, 2-6ರಿಂದ ಜೆಕ್ ಗಣರಾಜ್ಯದ ಮರ್ಕೆಟಾ ಒಂಡ್ರಸೋವ ಎದುರು ಸೋತರು.

ಕರೊಲಿನಾ ಪ್ಲಿಸ್ಕೋವ, ವೀನಸ್ ವಿಲಿಯಮ್ಸ್, ಏಂಜೆಲಿಕ್ ಕರ್ಬರ್, ಗಾರ್ಬೈನ್ ಮುಗುರುಜಾ ಹಾಗೂ ಎಲಿನಾ ಸ್ವಿಟೋಲಿನ ಮುಂದಿನ ಹಂತಕ್ಕೆ ಲಗ್ಗೆ ಇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.