ಬ್ರಿಸ್ಬೇನ್: ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದ ಪಂದ್ಯಗಳಲ್ಲಿ ಮಿಂಚಿದ ನೊವಾಕ್ ಜೊಕೊವಿಚ್, ಚೊಚ್ಚಲ ಎಟಿಪಿ ಕಪ್ ಟೆನಿಸ್ ಟೂರ್ನಿಯಲ್ಲಿ ಸರ್ಬಿಯಾ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿಸಲು ನೆರವಾದರು.

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಸರ್ಬಿಯಾ 2–1ರಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸಿತು.

ಸಿಂಗಲ್ಸ್ ಪಂದ್ಯದಲ್ಲಿ ಗಾಯೆಲ್ ಮೊಂಫಿಲ್ಸ್ ಅವರನ್ನು ನೇರ ಸೆಟ್ಗಳಿಂದ ಮಣಿಸಿದ್ದ ನೊವಾಕ್, ಡಬಲ್ಸ್ನಲ್ಲಿ ವಿಕ್ಟರ್ ಟ್ರೊಯಿಕಿ ಜೊತೆಗೂಡಿ ಆಡಿದ್ದರು.

ನೊವಾಕ್ ಮತ್ತು ವಿಕ್ಟರ್ 6–3, 6–7, 10–3ರಲ್ಲಿ ಫ್ರಾನ್ಸ್ನ ನಿಕೊಲಸ್ ಮಹುತ್ ಮತ್ತು ಎಡ್ವರ್ಡ್ ರೋಜರ್ ವಸೆಲಿನ್ ಅವರನ್ನು ಪರಾಭವಗೊಳಿಸಿದರು.

ಈ ಗೆಲುವಿನೊಂದಿಗೆ ಸರ್ಬಿಯಾ ತಂಡವು ‘ಎ’ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

‘ಬಿ’ ಗುಂಪಿನ ಪಂದ್ಯದಲ್ಲಿ ಸ್ಪೇನ್ ತಂಡ 3–0ಯಿಂದ ಉರುಗ್ವೆಯನ್ನು ಸೋಲಿಸಿತು. ಮತ್ತೊಂದು ಹಣಾಹಣಿಯಲ್ಲಿ ಜಪಾನ್ 2–1ಯಿಂದ ಜಾರ್ಜಿಯಾ ಎದುರು ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.