ಪ್ಯಾರಿಸ್: ಭಾರತದ ರೋಹನ್ ಬೋಪಣ್ಣ ಮತ್ತು ಕ್ರೊವೇಶಿಯಾದ ಫ್ರಾಂಕೊ ಸ್ಕುಗೊರ್ ಜೋಡಿ ಸೋಮವಾರ ಇಲ್ಲಿ ನಡೆದ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಸೋತಿದ್ದರಿಂದ ಫ್ರೆಂಚ್ ಓಪನ್ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು.

ಒಂದು ಗಂಟೆ 17 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 41 ವರ್ಷದ ಬೋಪಣ್ಣ ಮತ್ತು ಸ್ಕುಗೊರ್ ಜೋಡಿ 5-7 3-6 ಸೆಟ್ಗಳ ಅಂತರದಿಂದ ಸ್ಪ್ಯಾನಿಷ್ ಜೋಡಿ ಪ್ಯಾಬ್ಲೊ ಆಂಡೂಜರ್ ಮತ್ತು ಪೆಡ್ರೊ ಮಾರ್ಟಿನೆಜ್ ಎದುರು ಸೋತಿತು.

ಕಳೆದ ವಾರ, ದಿವಿಜ್ ಶರಣ್ ಮತ್ತು ಅಂಕಿತಾ ರೈನಾ ಕ್ರಮವಾಗಿ ಪುರುಷರ ಮತ್ತು ಮಹಿಳಾ ಡಬಲ್ಸ್ ಪಂದ್ಯಗಳ ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಸೋತಿದ್ದರು.

ಸಿಂಗಲ್ಸ್ ವಿಭಾಗದಲ್ಲಿ ಸುಮಿತ್ ನಾಗಲ್, ರಾಮ್ಕುಮಾರ್ ರಾಮನಾಥನ್, ಪ್ರಜ್ನೇಶ್ ಗುಣೇಶ್ವರನ್ ಮತ್ತು ಅಂಕಿತಾ ವಿಫಲರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.