ಲಂಡನ್: ಅಗ್ರ ಶ್ರೇಯಾಂಕದ ಆಟಗಾರ್ತಿ ಆಸ್ಟ್ರೇಲಿಯಾದ ಆ್ಯಷ್ಲಿ ಬಾರ್ಟಿ ಹಾಗೂ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಸೆಣಸಲಿದ್ದಾರೆ.

ಮಂಗಳವಾರ ರಾತ್ರಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬಾರ್ಟಿ ತಮ್ಮದೇ ದೇಶದ ಅಜ್ಲಾ ತಮ್ಲಾನೊವಿಕ್ ಎದುರು 6-1, 6-3ರಿಂದ ಗೆದ್ದರು.

ಮತ್ತೊಂದು ಪಂದ್ಯದಲ್ಲಿ ಆ್ಯಂಜೆಲಿಕ್ ಕೆರ್ಬರ್ 6-2, 6-3ರಿಂದ ಜೆಕ್ ಗಣರಾಜ್ಯದ ಕರೋಲಿನಾ ಮುಚೊವಾ ಎದುರು ಜಯ ಸಾಧಿಸಿ ನಾಲ್ಕರ ಘಟ್ಟ ತಲುಪಿದರು.

33 ವರ್ಷದ ಕೆರ್ಬರ್ ಅವರು ಬಾರ್ಟಿ ಎದುರು ಆಡಿರುವ ಐದು ಪಂದ್ಯಗಳ ಪೈಕಿ ಮೂರರಲ್ಲಿ ಜಯ ಸಾಧಿಸಿದ್ದು, ಆತ್ಮವಿಶ್ವಾಸದಲ್ಲಿದ್ದಾರೆ.

ಮಹಿಳಾ ಸಿಂಗಲ್ಸ್ ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೊವಾ ಮತ್ತು ಬೆಲಾರೂಸ್‌ನ ಅರಿನಾ ಸಬಲೆಂಕಾ ಮುಖಾಮುಖಿಯಾಗಲಿದ್ದಾರೆ.

ಮಂಗಳವಾರ ನಡೆದ ಎಂಟರಘಟ್ಟದ ಹಣಾಹಣಿಯಲ್ಲಿ ಪ್ಲಿಸ್ಕೊವಾ 6-2, 6-2ರಿಂದ ಸ್ವಿಟ್ಜರ್ಲೆಂಡ್‌ನ ವಿಕ್ಟೊರಿಯಾ ಗೋಲುಬಿಚ್ ಅವರನ್ನು ಮಣಿಸಿದರು.

ಸಬಲೆಂಕಾ ಇನ್ನೊಂದು ಪಂದ್ಯದಲ್ಲಿ ಟ್ಯೂನಿಷಿಯಾದ ಆನ್ಸ್ ಜಬೆವುರ್ ಅವರನ್ನು 6-4, 6-3ರಿಂದ ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.