ಲಂಡನ್: ವಿಂಬಲ್ಡನ್ 2011 ಮಹಿಳೆಯರ ಡಬಲ್ಸ್‌ನಲ್ಲಿ ಮೊದಲ ಸುತ್ತಿನಲ್ಲಿ ಜಯ ಗಳಿಸಿದ ಬಳಿಕ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಸಹಆಟಗಾರ್ತಿ ಮತ್ತು ಮಗನ ಜೊತೆ ಫೋಟೊಗೆ ಪೋಸ್ ಕೊಟ್ಟು ಸಂಭ್ರಮಿಸಿದರು.

ತಮ್ಮ ಮಗನನ್ನು ಸ್ಪೈಡರ್‌ಮ್ಯಾನ್ ಎಂದು ಕರೆದಿರುವ ಮಿರ್ಜಾ, ನಮ್ಮನ್ನು ಪ್ರೋತ್ಸಾಹಿಸುತ್ತಿರುವುದಾಗಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಅಮೆರಿಕದ ಬೆಥನಿ ಮಾಟೆಕ್ ಸ್ಯಾಂಡ್ಸ್ ಅವರ ಜೊತೆ ಮೊದಲ ಸುತ್ತಿನಲ್ಲಿ ಗುರುವಾರ ಡೆಸಿರೆ ಕ್ರಾವ್‌ಜಿಕ್ ಮತ್ತು ಅಲೆಕ್ಸಾ ಗುವಾರಚಿ ಜೋಡಿಯನ್ನು ಮಣಿಸಿದರು.

7-5. 6-3 ನೇರ ಸೆಟ್‌ಗಳಿಂದ ಅಲೆಕ್ಸಾ-ಡೆಸಿರೆ ಜೋಡಿಯನ್ನು ಸೋಲಿಸಿದ ಸಾನಿಯಾ-ಬೆಥನಿ ಜೋಡಿ ಎರಡನೇ ಸುತ್ತಿಗೆ ಅರ್ಹತೆ ಗಳಿಸಿದ್ದಾರೆ. ಶುಕ್ರವಾರ(ಇಂದು) ರೋಹನ್ ಬೋಪಣ್ಣ ಜೊತೆ ಮಿಶ್ರ ಡಬಲ್ಸ್‌ನ ಮೊದಲನೇ ಸುತ್ತು ಆಡಲಿದ್ದಾರೆ. ರಾಮ್‌ಕುಮಾರ್ ರಾಮನಾಥನ್ ಮತ್ತು ಅಂಕಿತಾ ರೈನಾ ಜೋಡಿಯ ವಿರುದ್ಧ ಸೆಣೆಸಲಿದ್ದಾರೆ.

ವಿಡಿಯೊ: ಸ್ಟಾರ್ಟಪ್ ಬಾತುಕೋಳಿಯಂತಿದ್ದರೆ ಹುಲಿ ಬಾಯಿಂದ ನುಣುಚಿಕೊಳ್ಳಬಹುದು!

ಪಂದ್ಯದುದ್ದಕ್ಕೂ ಸಾನಿಯಾರ ಮಗ ಈಝಾನ್ ಮಿರ್ಜಾ ಮಲ್ಲಿಕ್ ಗಮನ ಸೆಳೆದಿದ್ದು ವಿಶೇಷವಾಗಿತ್ತು. ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಸಾನಿಯಾ ಮಗನ ಜೊತೆಗೆ ಫೋಟೊಗೆ ಪೋಸ್ ನೀಡಿ ಸಂಭ್ರಮಿಸಿದರು. ಸ್ಪೈಡರ್‌ಮ್ಯಾನ್ ಗೊಂಬೆಯನ್ನು ಜೊತೆಗೆ ಇರಿಸಿಕೊಂಡು ಕುಳಿತಿದ್ದ ಈಝಾನ್ ಮುಗುಳ್ನಗು ಕ್ರೀಡಾಭಿಮಾನಿಗಳ ಹೃದಯವನ್ನು ಗೆದ್ದಿದೆ. ಸಾನಿಯಾರ ಜಯಕ್ಕೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಈಝಾನ್ ಕ್ಯೂಟ್ನೆಸ್‌ಅನ್ನು ಹೊಗಳಿದ್ದಾರೆ.

ನಟಿ ಅನುಷ್ಕಾ ಶರ್ಮಾ ಸಾನಿಯಾರ ಪೋಸ್ಟ್ ಲೈಕ್ ಮಾಡಿದ್ದು, 'ತುಂಬ ಸುಂದರವಾದ ಫೋಟೊ' ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊರ್ವ ನಟಿ ಅತಿಯಾ ಶೆಟ್ಟಿ, ಸಿನಿಮಾ ನಿರ್ಮಾಪಕ ಪುನೀತ್ ಮಲ್ಹೋತ್ರಾ, ಛಾಯಾಚಿತ್ರಕಾರ ಅವಿನಾಶ್ ಗವರಿಕರ್ ಮತ್ತಿತರರು ಅಭಿನಂದನೆ ತಿಳಿಸಿದ್ದಾರೆ.

ವಿಶ್ವ ಭೂಪಟ: ಚರ್ಚೆಗೆ ಗ್ರಾಸವಾದ ಮಹಾಭಾರತದ ಮೊಲ ಮತ್ತು ಆಲದಮರದ ಎಲೆಗಳ ಕಥೆ

ಫ್ರೆಂಚ್‌ನ ಟೆನ್ನಿಸ್ ಆಟಗಾರ್ತಿ ಮತ್ತು ಮಾಜಿ ವಿಂಬಲ್ಡನ್ ಸಿಂಗಲ್ಸ್ ಚಾಂಪಿಯನ್ ಮರಿನಾ ಬಾರ್ಟೊಲಿ, 'ಓಹ್ ಮೈ ಗಾಡ್, ಮಿತ್ರರೆ ಮುಂದಿನ ಪಂದ್ಯಕ್ಕೆ ನನಗೂ ಬರಬೇಕೆನಿಸುತ್ತಿದೆ. ಈ ಚಿತ್ರ ತುಂಬ ಇಷ್ಟವಾಯಿತು' ಎಂದು ಕಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.