ನ್ಯೂಯಾರ್ಕ್:ಮಹಿಳಾ ಟೆನಿಸ್ ಸಂಸ್ಥೆಯ (ಡಬ್ಲ್ಯುಟಿಎ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೀವ್ ಸಿಮನ್ ಅವರು ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ಗೆ ಬೆಂಬಲ ಸೂಚಿಸಿದ್ದಾರೆ.

ಭಾನುವಾರ ನಡೆದಿದ್ದ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದ ವೇಳೆ ಸೆರೆನಾ ಅಶಿಸ್ತು ತೋರಿದ್ದರಿಂದ ಅಂಪೈರ್ ಕಾರ್ಲೋಸ್ ರಾಮೊಸ್ ‘ಗೇಮ್ ಪೆನಾಲ್ಟಿ’ ವಿಧಿಸಿದ್ದರು. ಇದರಿಂದ ಕೆರಳಿದ್ದ ಸೆರೆನಾ ‘ನೀನು ಕಳ್ಳ, ಮಹಾನ್ ಸುಳ್ಳುಗಾರ’ ಎಂದು ರಾಮೊಸ್ ಅವರನ್ನು ನಿಂದಿಸಿದ್ದರು.

ಪುರುಷರು ರ್ಯಾಕೆಟ್ ಮುರಿದರೆ, ಅಂಗಳದಲ್ಲಿ ಬರಿ ಮೈಯಲ್ಲಿ ಕುಳಿತುಕೊಂಡರೆ ಅದು ಅಶಿಸ್ತು ಅನಿಸುವುದಿಲ್ಲ. ಮಹಿಳೆಯರು ರ್ಯಾಕೆಟ್ ಮುರಿದರೆ, ಪಂದ್ಯದ ವೇಳೆ ಜೆರ್ಸಿ ತೆಗೆದರೆ ತಪ್ಪಾಗುತ್ತದೆ. ಅದಕ್ಕಾಗಿ ದಂಡವನ್ನೂ ಹಾಕುತ್ತಾರೆ. ಇದು ಅಸಮಾನತೆಯಲ್ಲವೇ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಮನ್ ‘ಕ್ರೀಡೆಯಲ್ಲಿ ಎಲ್ಲರೂ ಸಮಾನರು. ಪುರುಷ ಮತ್ತು ಮಹಿಳೆ ಎಂಬ ಭೇದಭಾವ ಯಾರಲ್ಲೂ ಇರಬಾರದು. ತಾರತಮ್ಯ ಧೋರಣೆಯನ್ನು ನಾವು ಸಹಿಸುವುದಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.