ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಶಾಹೀನ್ ಅಫ್ರಿದಿ ಅವರನ್ನು ದಿಗ್ಗಜ ವೇಗಿ ವಾಸಿಂ ಅಕ್ರಂ ಅವರೊಂದಿಗೆ ಹೋಲಿಕೆ ಮಾಡುವ ಬಗ್ಗೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಅಕ್ಟೋಬರ್ 14ರಂದು ಅಹಮದಾಬಾದ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ 7 ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಪಂದ್ಯದ ವೇಳೆ ಅಫ್ರಿದಿ ಅವರನ್ನು ಅಕ್ರಂ ಅವರಿಗೆ ಹೋಲಿಸುವ ಕುರಿತು ಮಾತನಾಡಿರುವ ರವಿಶಾಸ್ತ್ರಿ, 'ಶಾಹಿನ್ ಅಫ್ರಿದಿ ಅವರಿನ್ನೂ ವಾಸಿಂ ಅಕ್ರಂ ಅವರ ಮಟ್ಟಕ್ಕೆ ತಲುಪಿಲ್ಲ. ಹೊಸ ಚೆಂಡಿನಲ್ಲಿ ಬೇಗನೆ ವಿಕೆಟ್ ಪಡೆಯಬಲ್ಲರು ಎಂಬುದನ್ನು ಬಿಟ್ಟರೆ ಶಾಹೀನ್ ಅವರಲ್ಲಿ ಅಂತಹ ವಿಶೇಷತೆ ಏನಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.
.ಭಾರತದ ಬೂಮ್ರಾ ನೋಡಿ ಕಲಿಯಿರಿ: ಪಾಕ್ ವೇಗಿ ಅಫ್ರಿದಿಗೆ ವಕಾರ್ ಯೂನಿಸ್ ಸಲಹೆ.
ಈ ಹಿಂದೆ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿದ್ದ ರವಿಶಾಸ್ತ್ರಿ, 'ಶಾಹೀನ್ ಉತ್ತಮ ಬೌಲರ್ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಅಷ್ಟು ದೊಡ್ಡ ಮಟ್ಟದ ರೇಟಿಂಗ್ ನೀಡುವ ಅಗತ್ಯವಿಲ್ಲ. ಶಾಹೀನ್ ಈ ಕಾಲದ ಶ್ರೇಷ್ಠ ಬೌಲರ್ ಎಂಬುದನ್ನು ನಿಲ್ಲಿಸಿ. ಸತ್ಯ ಒಪ್ಪಿಕೊಳ್ಳಬೇಕಿದೆ' ಎಂದಿದ್ದಾರೆ.

23 ವರ್ಷದ ಶಾಹೀನ್ ಈ ಬಾರಿಯ ವಿಶ್ವಕಪ್‌ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ 139 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆದ ಕಳೆದ ವಿಶ್ವಕಪ್‌ನಲ್ಲಿ ಅವರು 5 ಪಂದ್ಯಗಳಿಂದ 16 ವಿಕೆಟ್ ಪಡೆದಿದ್ದರು. ಏಕದಿನ ಮಾದರಿಯಲ್ಲಿ ಒಟ್ಟಾರೆ 47 ಪಂದ್ಯಗಳಲ್ಲಿ ಆಡಿರುವ ಅವರು 90 ವಿಕೆಟ್ ಕಬಳಿಸಿದ್ದಾರೆ.

ಪಾಕ್ ತಂಡವನ್ನು 356 ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಿರುವ ವಾಸಿಂ ಅಕ್ರಂ 502 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (532) ಹಾಗೂ ಅಕ್ರಂ ಮಾತ್ರವೇ ಏಕದಿನ ಮಾದರಿಯಲ್ಲಿ 500ಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು.
.World Cup | IND vs PAK: ಪಾಕ್ ವಿರುದ್ಧ ಭಾರತಕ್ಕೆ 7 ವಿಕೆಟ್ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.