ಕಲಬುರ್ಗಿ: ಬಹುತೇಕ ಸ್ಪರ್ಧೆಗಳಲ್ಲಿ ಪದಕಗಳ ಬೇಟೆಯಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಬಾಲಕ ಹಾಗೂ ಬಾಲಕಿಯರು ಸಮಗ್ರ ಪ್ರಶಸ್ತಿ ಗೆದ್ದು ಕೊಂಡರು.
ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ, ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟವು.

ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕೂಟದ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಾಲಕರು 26 ಪದಕ ಜಯಿಸಿದರೆ, ಬಾಲಕಿಯರು 23 ಪದಕ ಗೆದ್ದರು.

3,000 ಮೀ., 5,000 ಮೀ. ಹಾಗೂ 3 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಬಂಗಾರ ಗೆದ್ದ ದಕ್ಷಿಣ ಕನ್ನಡ ಜಿಲ್ಲೆಯ ಚಿತ್ರಾ ದೇವಾಡಿಗ ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿಗೆ ಮುತ್ತಿಟ್ಟರೆ, 1,500 ಮೀ., 3,000 ಮೀ. ನಲ್ಲಿ ಚಿನ್ನ ಹಾಗೂ 800 ಮೀ. ಓಟದಲ್ಲಿ ಬೆಳ್ಳಿಗೆದ್ದ ಬೆಂಗಳೂರು ದಕ್ಷಿಣ ಜಿಲ್ಲೆಯ ಮೋಕ್ಷಿತ್ ಎಸ್. ಬಾಲಕರ ವಿಭಾಗದ ವೈಯಕ್ತಿಕ ಪ್ರಶಸ್ತಿ ಜಯಿಸಿದರು.

ಎರಡು ದಾಖಲೆ ನಿರ್ಮಾಣ: 4x400 ಮೀ. ರಿಲೆಯ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಹಾಗೂ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ ಜಿಲ್ಲೆ ನೂತನ ಕೂಟ ದಾಖಲೆ ನಿರ್ಮಿಸಿದವು.

ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹುಡುಗರು 3.23 ನಿಮಿಷದಲ್ಲಿ ಗುರಿ ಮುಟ್ಟಿ ನೂತನ ಕೂಟ ದಾಖಲೆ ಬರೆದರು. 2014ರಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಬಾಲಕರು 3.26 ನಿಮಿಷದಲ್ಲಿ ಗುರಿ ಮುಟ್ಟಿ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು. 2013ರಲ್ಲಿ ಮೈಸೂರಿನ ಬಾಲಕಿಯರು 4.04 ನಿಮಿಷದಲ್ಲಿ ಗುರಿ ಮುಟ್ಟಿ ನಿರ್ಮಿಸಿದ್ದ ದಾಖಲೆಯನ್ನು 4.02 ನಿಮಿಷದಲ್ಲಿ ಕ್ರಮಿಸಿದ ಬೆಂಗಳೂರು ಉತ್ತರ ಜಿಲ್ಲೆಯ ವಿದ್ಯಾರ್ಥಿನಿಯರು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು.

100 ಮೀ. ಓಟವನ್ನು 10.8 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ವಲ್ ಮಂದಣ್ಣ ಕೆ.ಆರ್. ವೇಗದ ಓಟಗಾರನಾಗಿ ಹೊರಹೊಮ್ಮಿದರೆ, 12.1 ಸೆಕೆಂಡುಗಳಲ್ಲಿ ಓಟ ಪೂರ್ಣಗೊಳಿಸಿದ ಬೆಂಗಳೂರು ಉತ್ತರ ಜಿಲ್ಲೆಯ ದಾನೇಶ್ವರಿ ಎ.ಟಿ. ವೇಗದ ಓಟಗಾರ್ತಿ ಎನಿಸಿದರು.

ಫಲಿತಾಂಶ ವಿವರ: ಬಾಲಕರ ವಿಭಾಗ 100 ಮೀ.: ಪ್ರಜ್ವಲ್ ಮಂದಣ್ಣ ಕೆ.ಆರ್. (ದಕ್ಷಿಣ ಕನ್ನಡ, 10.8 ಸೆಕೆಂಡ್)–1; ಮಿಲಾನ್ ಗೌರವ್ (ಉಡುಪಿ, 11 ಸೆ.)–2; ಅಮನ್ ಅರುಣ್ (ದಕ್ಷಿಣ ಕನ್ನಡ, 11 ಸೆ.)–3.

110 ಮೀ. ಹರ್ಡಲ್ಸ್: ಶ್ರವಣ್ ಉಲ್ಲಾಳ್ (ದಕ್ಷಿಣ ಕನ್ನಡ, 15.2 ಸೆಕೆಂಡ್)–1; ಅಮನ್ ಅರುಣ್ (ದಕ್ಷಿಣ ಕನ್ನಡ, 15.5 ಸೆ.)–2; ಅಮೋಘ್ (ತುಮಕೂರು, 15.9 ಸೆ.)–3.

4x400 ರಿಲೆ: ಮಂಗಳೂರು (3.23 ನಿಮಿಷ)–1; ಮೈಸೂರು (3.30 ನಿ.)–2; ಉಡುಪಿ (3.32 ನಿ.)–3.

ಪೋಲ್ವಾಲ್ಟ್: ಯೋಗೇಶ್ ಪಟಗಾರ (ದಕ್ಷಿಣ ಕನ್ನಡ, 3.70 ಮೀಟರ್)–1; ಮಂಜುನಾಥ್ ಕೆ. ಗೌಡ (ಉತ್ತರ ಕನ್ನಡ, 3 ಮೀ.)–2; ಮನೋಜ್ ಪಿ. ಗೌಡ (ಉತ್ತರ ಕನ್ನಡ, 2.90 ಮೀ.)–3.

ಹ್ಯಾಮರ್ ಥ್ರೊ: ಯಮನೂರಪ್ಪ ಆರ್.ವಿ. (ದಕ್ಷಿಣ ಕನ್ನಡ, 46.68 ಮೀ.)–1; ಪ್ರವೀಣ್ ವಿ. ಕಳ್ಳಿ (ದಕ್ಷಿಣ ಕನ್ನಡ, 44.65 ಮೀ.)–2; ಸತೀಶ್ ಎ. (ಶಿವಮೊಗ್ಗ, 39.10 ಮೀ.)–3.

5 ಕಿ.ಮೀ. ಕ್ರಾಸ್ ಕಂಟ್ರಿ: ಧರೆಪ್ಪ ಮಗ್ದುಮ್ (ಬೆಳಗಾವಿ, 17.11 ನಿಮಿಷ)–1; ಸಂಗನಗೌಡ ಬಿರಾದಾರ (ವಿಜಯಪುರ, 17.17 ನಿ.)–2; ಮುತ್ತಪ್ಪ ದೊಡ್ಡಪ್ಪಗೋಳ (ಬಾಗಲಕೋಟೆ, 17.18 ನಿ.)–3.

ಬಾಲಕಿಯರ ವಿಭಾಗ: 100 ಮೀ.: ದಾನೇಶ್ವರಿ ಎ.ಟಿ. (ಬೆಂಗಳೂರು ಉತ್ತರ, 12.1 ಸೆಕೆಂಡ್)–1; ಕಾವೇರಿ ಎಲ್.ಪಿ. (ಬೆಂಗಳೂರು ಉತ್ತರ, 12.4 ಸೆ.)–2; ಸರೋಜಾ ಪುಷ್ಪರಾಜಶೆಟ್ಟಿ (ದಕ್ಷಿಣ ಕನ್ನಡ, 12.6 ಸೆ.)–3.

100 ಮೀ. ಹರ್ಡಲ್ಸ್: ಧ್ರುತಿ ಸಿ. (ಬೆಂಗಳೂರು ದಕ್ಷಿಣ, 15.1 ಸೆಕೆಂಡ್)–1; ಪೂಜಾ (ಬೆಂಗಳೂರು ಉತ್ತರ, 16 ಸೆ.)–2; ಧನುಷಾ ಎಂ.ಆರ್. (ಬೆಂಗಳೂರು ಉತ್ತರ, 16.01 ಸೆ.)–3.

4x400 ರಿಲೆ: ಬೆಂಗಳೂರು ಉತ್ತರ (4.02 ನಿಮಿಷ)–1; ದಕ್ಷಿಣ ಕನ್ನಡ (4.05 ನಿ.)–2; ಮೈಸೂರು (4.20 ನಿ.)–3.

ಪೋಲ್ವಾಲ್ಟ್: ರಕ್ಷಿತಾ (ದಕ್ಷಿಣ ಕನ್ನಡ, 2.20 ಮೀ.)–1; ನೂತನಾ ದೇವಾಡಿಗ (ಉತ್ತರ ಕನ್ನಡ, 2.20 ಮೀ.)–2; ಕಾವ್ಯ ಚನ್ನಯ್ಯ (ಉತ್ತರ ಕನ್ನಡ, 1.90 ಮೀ.)–3.

ಹ್ಯಾಮರ್ ಥ್ರೊ: ಅಮ್ರಿನ್ (ದಕ್ಷಿಣ ಕನ್ನಡ, 33.73 ಮೀ.)–1; ಕರಿಷ್ಮಾ ಸನೀಲ್ (ಉಡುಪಿ, 24.97 ಮೀ.)–2; ರಶ್ಮಿ ಕೆ. (ಕೊಡಗು, 24.88 ಮೀ.)–3.
3 ಕಿ.ಮೀ. ಕ್ರಾಸ್ ಕಂಟ್ರಿ: ಚಿತ್ರಾ ದೇವಾಡಿಗ (ದಕ್ಷಿಣ ಕನ್ನಡ, 12.25 ನಿ.)–1; ಸಿಂಚನಾ ಬಿ.ಎಸ್. (ದಕ್ಷಿಣ ಕನ್ನಡ, 12.34 ನಿ.)–2; ಪ್ರಿಯಾ ಎಲ್.ಡಿ. (ದಕ್ಷಿಣ ಕನ್ನಡ, 12.45 ನಿ.)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.