ಲಂಡನ್ : ರಾಜಮನೆತನದ ಜವಾಬ್ದಾರಿಗಳಿಂದ ಮುಕ್ತರಾಗುವುದಾಗಿ ಘೋಷಿಸಿರುವ ರಾಜಕುಮಾರ ಹ್ಯಾರಿ ಹಾಗೂ ಪತ್ನಿ ಮೇಘನ್ ಮರ್ಕೆಲ್ ಮಂಗಳವಾರ ರಾಜಮನೆತನದ ತುರ್ತು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ವಿಷಯದಲ್ಲಿ ಅಂತಿಮ ನಿರ್ಣಯ ಕೈಗೊಳ್ಳುವವರೆಗೂ, ಹ್ಯಾರಿ ದಂಪತಿ ಕೆನಡಾ ಹಾಗೂ ಬ್ರಿಟನ್‌ನಲ್ಲಿ ತಮ್ಮ ಸಮಯ ಕಳೆಯಲು ರಾಣಿ ಎರಡನೇ ಎಲಿಜಬೆತ್ ಒಪ್ಪಿಗೆ ನೀಡಿದ್ದಾರೆ.

ಇದಾದ ಬಳಿಕ ಹ್ಯಾರಿ ದಂಪತಿ ಕುರಿತು ಬ್ರಿಟನ್‌ನ ಮಾಧ್ಯಮಗಳು ಪುನಃ ಟೀಕೆ ಮಾಡಿವೆ. ‘ಇದರ ಅರ್ಥವೆಂದರೆ ಹ್ಯಾರಿ ಹಾಗೂ ಮೇಘನ್ ಗೆದ್ದಿದ್ದಾರೆ!’ ಎಂದು ರಾಜಮನೆತನದ ವಿಶ್ಲೇಷಕ ಫಿಲಿಪ್ ಡಾಂಪಿಯರ್ ಅವರು ‘ಡೈಲಿ ಎಕ್ಸ್‌ಪ್ರೆಸ್’ನಲ್ಲಿ ಬರೆದಿದ್ದಾರೆ.

‘ಹ್ಯಾರಿ ಹಾಗೂ ಮೇಘನ್‌ರ ಸ್ವಾರ್ಥದ ಬೇಡಿಕೆಗಳಿಗೆ ರಾಣಿ ಮಣಿದಿದ್ದಾರೆ’ ಎಂದು ‘ದಿ ಸನ್’ ತನ್ನ ಸಂಪಾದಕೀಯದಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.