ತಿರುವನಂತಪುರಂ: ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶದ ಬಗ್ಗೆ ಕೇರಳಸರ್ಕಾರದನಿಲುವು ವಿರೋಧಿಸಿ ಶಬರಿಮಲೆ ಕರ್ಮ ಸಮಿತಿ ಅಯ್ಯಪ್ಪ ಜ್ಯೋತಿ ಬೆಳಗುವ ಕಾರ್ಯಕ್ರಮ ಹಮ್ಮಿಕೊಂಡಿದೆ.ಕೇರಳದ ಪಿಣರಾಯಿ ವಿಜಯನ್ ಸರ್ಕಾರ ಜನವರಿ 1ರಂದು ವನಿತಾ ಮದಿಲ್ ಕಾರ್ಯಕ್ರಮ ಆಯೋಜಿಸಿದ್ದು, ಅದಕ್ಕೆ ಪ್ರತಿಯಾಗಿ ಕರ್ಮ ಸಮಿತಿ ಬುಧವಾರ ಸಂಜೆಅಯ್ಯಪ್ಪ ಜ್ಯೋತಿ ಬೆಳಗುವಕಾರ್ಯಕ್ರಮ ಆಯೋಜಿಸಿದೆ.

ಇಂದು ಸಂಜೆ 6 ಗಂಟೆಯಿಂದ 7 ಗಂಟೆವರೆಗೆ ಮಹಿಳೆಯರು ಮತ್ತು ಪುರುಷರುರಸ್ತೆಯ ಎಡಬದಿಯಲ್ಲಿ ಸಾಲಾಗಿ ನಿಂತು ಹಣತೆ ಹಚ್ಚಿದ್ದಾರೆ.ತಿರುವನಂತಪುರಂನಿಂದ ಕಾಸರಗೋಡುವರೆಗೆ ಈ ರೀತಿ ದೀಪ ಹಚ್ಚಲಾಗಿದೆ.

ಶಬರಿಮಲೆಯ ಸಂಪ್ರದಾಯ ಮತ್ತು ನಂಬಿಕೆಗಳನ್ನು ರಕ್ಷಿಸಿ ಎಂಬ ಘೋಷಣೆ ಕೂಗಿ ಅಯ್ಯಪ್ಪ ಜ್ಯೋತಿ ಬೆಳಗುವ ಕಾರ್ಯಕ್ರಮ ಆರಂಭವಾಗಿದೆ.
ತಿರುವನಂತಪುರಂನ ವಿಧಾನಸೌಧದ ಮುಂದೆ ಬಿಜೆಪಿ ಮುಷ್ಕರ ಹೂಡಿರುವ ಚಪ್ಪರದ ಮುಂದೆ ಹಣತೆ ಹಚ್ಚುವ ಮೂಲಕ ಒ.ರಾಜಗೋಪಾಲನ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಬಿಜೆಪಿ,ಆರ್‌ಎಸ್‌ಎಸ್, ಎನ್‍ಎಸ್ಎಸ್,ಸಂಘಪರಿವಾರ ಮೊದಲಾದ ಸಂಘಟನೆಗಳು ಮತ್ತು ಅರಮನೆಯ ಕುಟುಂಬಗಳು ಅಯ್ಯಪ್ಪ ಜ್ಯೋತಿ ಕಾರ್ಯಕ್ರಮದಲ್ಲಿ ಭಾಗವಹಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.