ನವದೆಹಲಿ: ಉತ್ತರ ಪ್ರದೇಶದಲ್ಲಿ ಕಾನೂನು ಸುಧಾರಿಸಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಅಲ್ಲಿನ ಪೊಲೀಸರು ಹೇಳಿದ್ದರು.ಆದರೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ದ ಅಂಕಿ ಅಂಶಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಅಲ್ಪ ಸಂಖ್ಯಾತರು ಮತ್ತು ದಲಿತರ ಮೇಲೆ ಹೆಚ್ಚು ದೌರ್ಜನ್ಯ ನಡೆದಿದೆ.

ಕಳೆದ ಮೂರು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಮತ್ತು ದಲಿತರ ಮೇಲೆ ನಡೆದ ಹಲ್ಲೆ ಪ್ರಕರಣಗಳ ಸಂಖ್ಯೆ ಇಡೀ ದೇಶದಲ್ಲಿ ನಡೆದ ಹಲ್ಲೆ ಪ್ರಕರಣಗಳ ಸಂಖ್ಯೆಯ ಶೇ. 43ರಷ್ಟು ಇದೆ ಎಂದು ಎನ್‌ಎಚ್‌ಆರ್ ಅಂಕಿ ಅಂಶದಲ್ಲಿದೆಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇದರಲ್ಲಿ ಗುಂಪು ಹಲ್ಲೆ ಪ್ರಕರಣಗಳೂ ಸೇರಿವೆ.

2016 ಮತ್ತು 2019 (ಜೂನ್ 15)ರ ವರೆಗಿನ ಅವಧಿಯಲ್ಲಿ ದಲಿತರು/ಅಲ್ಪ ಸಂಖ್ಯಾತರ ಮೇಲೆ ನಡೆದ ದೌರ್ಜನ್ಯಗಳಸಂಖ್ಯೆ ಎನ್‌ಎಚ್‌ಆರ್‌ಸಿ ಪ್ರಕಾರ 2,008. ಇದರಲ್ಲಿ ಉತ್ತರ ಪ್ರದೇಶದಲ್ಲಿ869 ಪ್ರಕರಣಗಳು ದಾಖಲಾಗಿವೆ.

ಇಂತಾ ಪ್ರಕರಣಗಳಲ್ಲಿ ಉತ್ತರ ಪ್ರದೇಶದ್ದು ಸಿಂಹ ಪಾಲು ಇದ್ದರೂ ಇತ್ತೀಚೆಗೆಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. 2016-17 ಮತ್ತು 2018-19ರ ಅವಧಿಯಲ್ಲಿ ಇಂತಾ ಪ್ರಕರಣಗಳ ಸಂಖ್ಯೆಶೇ.54ರಷ್ಟು ಇಳಿಕೆಯಾಗಿದೆ.

ಅಂದಹಾಗೆ ಎನ್‌ಎಚ್‌ಆರ್‌ಸಿ ಪ್ರಕಾರ ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಶೇ.41ರಷ್ಟು ಜಾಸ್ತಿಯಾಗಿದೆ. 2016-1 7ರಲ್ಲಿ ಪ್ರಕರಣಗಳ ಸಂಖ್ಯೆ 221 ಇತ್ತು. 2018-19ರ ಅವಧಿಯಲ್ಲಿ ಇದು 311ಕ್ಕೆ ಏರಿದೆ.

ಸಂಸತ್ತಿನಲ್ಲಿ ತಮಿಳುನಾಡಿನ ಐಯುಎಂಎಲ್ ಪಕ್ಷದ ಸಂಸದ ಕೆ.ನವಾಜ್‌ಕನಿ ಅವರು ಕೇಳಿದ ಪ್ರಶ್ನೆಗೆ ಜುಲೈ 16ರಂದು ಗೃಹವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವಜಿ.ಕಿಶನ್ ರೆಡ್ಡಿ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ಇದೆ. ಕಳೆದ ಮೂರು ವರ್ಷಗಳಲ್ಲಿ ಗುಂಪು ಹಲ್ಲೆ ಸೇರಿದಂತೆ ದಲಿತ ಮತ್ತು ಅಲ್ಪ ಸಂಖ್ಯಾತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ವಿವರಗಳನ್ನು ನೀಡುವಂತೆ ನವಾಜ್‌ಕನಿ ಸರ್ಕಾರವನ್ನು ಒತ್ತಾಯಿಸಿದ್ದರು.

ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಕಡಿಮೆಯಾಗುತ್ತಿದ್ದರೂ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ

ಎನ್‌ಎಚ್‌ಆರ್‌ಸಿ ಅಂಕಿ ಅಂಶಗಳನ್ನು ನೋಡಿದರೆ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.

2016- 17ರ ಅವಧಿಯಲ್ಲಿ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಬಗ್ಗೆ 117 ಪ್ರಕರಣಗಳು ದಾಖಲಾಗಿವೆ. 2017-18ರಲ್ಲಿ 67 ಪ್ರಕರಣಗಳು ದಾಖಲಾಗಿದ್ದು 2018-19ರಲ್ಲಿ 79 ಪ್ರಕರಣಗಳು ದಾಖಲಾಗಿವೆ.ಪ್ರಸ್ತುತ ವರ್ಷ (ಏಪ್ರಿಲ್ 1ರಿಂದ ಜೂನ್ 15)ವರೆಗೆ ಅಲ್ಪ ಸಂಖ್ಯಾತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಸಂಖ್ಯೆ 5 ಎಂದು ಎನ್‌ಎಚ್‌ಆರ್‌ಸಿ ಅಂಕಿ ಅಂಶ ಹೇಳುತ್ತಿದೆ.

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಹೇಳುವುದಾದರೆ ಕಳೆದ ಮೂರು ವರ್ಷದಲ್ಲಿ ಶೇ.33 ರಷ್ಟು ಪ್ರಕರಣಗಳು ಜಾಸ್ತಿಯಾಗಿವೆ.2016-17ರಲ್ಲಿ 505 ಪ್ರಕರಣಗಳು ದಾಖಲಾಗಿದ್ದು 2018- 19 ರಲ್ಲಿ ಇದು 672ಕ್ಕೇರಿದೆ.ಅಂದರೆ ಪ್ರತಿ ದಿನ ಎರಡು ಪ್ರಕರಣಗಳು ದಾಖಲಾಗುತ್ತಿವೆ.ಈ ವರ್ಷ (ಜೂನ್ 15ರವರೆಗೆ) ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಸಂಖ್ಯೆ 99!

ಉತ್ತರ ಪ್ರದೇಶದಲ್ಲಿ ದಲಿತರ ಮತ್ತು ಅಲ್ಪ ಸಂಖ್ಯಾತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಸಂಖ್ಯೆ 869 ಎಂದು ಎನ್‌ಎಚ್‌ಆರ್‌ಸಿ ಹೇಳುತ್ತಿದೆ.ಏತನ್ಮಧ್ಯೆ, ಹತ್ತಿರದಲ್ಲಿರುವ ರಾಜಸ್ಥಾನದಲ್ಲಿ 131 ಪ್ರಕರಣಗಳು ದಾಖಲಾಗಿವೆ. ಅಂಕಿ ಅಂಶಗಳ ತುಲನೆ ಮಾಡಿದರೆ ರಾಜಸ್ಥಾನಕ್ಕಿಂತ ಉತ್ತರ ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ 738 ಜಾಸ್ತಿ ಇದೆ.

ಹಿಂದಿ ಭಾಷಿಗರ ಪ್ರದೇಶದಲ್ಲಿಯೇ ದೌರ್ಜನ್ಯ ಜಾಸ್ತಿ
ಎನ್‌ಎಚ್‌ಆರ್‌ಸಿ ಅಂಕಿ ಅಂಶವನ್ನು ಸೂಕ್ಷ್ಮವಾಗಿ ನೋಡಿದರೆ ಹಿಂದಿ ಭಾಷಿಗರಿರುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತ/ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಜಾಸ್ತಿ ಇದೆ.

ಉತ್ತರ ಪ್ರದೇಶ, ರಾಜಸ್ತಾನ, ಬಿಹಾರ, ಹರ್ಯಾಣ ಮತ್ತು ಮಧ್ಯ ಪ್ರದೇಶದಲ್ಲಿ ಅಲ್ಪ ಸಂಖ್ಯಾತ/ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ದೇಶದಲ್ಲಿನ ಒಟ್ಟು ದೌರ್ಜನ್ಯ ಪ್ರಕರಣಗಳ ಶೇ. 64ರಷ್ಟು ಇದೆ.ಈ ರಾಜ್ಯಗಳೊಂದಿಗೆ ದೆಹಲಿ, ಗುಜರಾತ್ ಮತ್ತು ಉತ್ತರಾಖಂಡವನ್ನು ಸೇರಿಸಿದರೆ ದೌರ್ಜನ್ಯ ಪ್ರಕರಣಗಳ ಪ್ರಮಾಣ ಶೇ.75ರಷ್ಟಾಗುತ್ತದೆ.

ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶಪುದುಚ್ಚೇರಿಯನ್ನೂಪರಿಗಣಿಸಿದರೆ ಕಳೆಗದ ಮೂರು ವರ್ಷಗಳಲ್ಲಿ ದಲಿತ/ ಅಲ್ಪ ಸಂಖ್ಯಾತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಒಟ್ಟು ಪ್ರಕರಣಗಳ ಸಂಖ್ಯೆಯ ಶೇ.9.5 ಅಷ್ಟೇ.

8 ಈಶಾನ್ಯ ರಾಜ್ಯಗಳಲ್ಲಿ ಇಂತಾ ಪ್ರಕರಣ ಸಂಖ್ಯೆ ಶೇ.0.54 ಇದ್ದು ಪೂರ್ವ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ಒಡಿಶಾವನ್ನು ಜತೆಗೆ ಗಣನೆಗೆ ತೆಗೆದುಕೊಂಡರೆ ಪ್ರಕರಣಗಳ ಸಂಖ್ಯೆ ಶೇ. 5.17ರಷ್ಟಿದೆ.

ದಿ ವೈರ್ವರದಿಪ್ರಕಾರ 2016-17ರಲ್ಲಿ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಬಗ್ಗೆ 117 ಮತ್ತು ದಲಿತರ ಮೇಲಿನ ದೌರ್ಜನ್ಯ ಬಗ್ಗೆ 505 ಪ್ರಕರಣಗಳು ದಾಖಲಾಗಿವೆ.ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯದ 117 ಪ್ರಕರಣಗಳಲ್ಲಿ ಉತ್ತರ ಪ್ರದೇಶದಿಂದ 42 ಪ್ರಕರಣಗಳು ದಾಖಲಾಗಿವೆ.ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 221 ಪ್ರಕರಣಗಳು ದಾಖಲಾಗಿರುವುದು ಉತ್ತರ ಪ್ರದೇಶದಿಂದಲೇ ಎಂಬುದು ಗಮನಿಸಬೇಕಾದ ಅಂಶ.

2017 -18ರ ಅವಧಿಯಲ್ಲಿ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಶೇ. 42ರಷ್ಟು ಕಡಿಮೆಯಾಗಿದೆ.ಅಂದರೆ 2106-17ರಲ್ಲಿ 117 ಪ್ರಕರಣಗಳು ದಾಖಲಾಗಿದ್ದು 2017-18ರಲ್ಲಿ 67 ಪ್ರಕರಣಗಳು ದಾಖಲಾಗಿವೆ.2016-17ರಲ್ಲಿ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು 42 ಆಗಿತ್ತು, 2017-18ರಲ್ಲಿ ಇದು 8 ಆಗಿ ಇಳಿದಿದೆ.

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಶೇ.8 ರಷ್ಟು ಇಳಿದಿದೆ (505 ಇದ್ದದ್ದು 464 ಆಗಿ ಇಳಿದಿದೆ). ಉತ್ತರ ಪ್ರದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 221ರಿಂದ 221 (ಶೇ.2.7) ಆಗಿ ಇಳಿದಿದೆ.

2017- 18ರಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಸಂಖ್ಯೆ 464 ಇದ್ದು 2018-19ರಲ್ಲಿ ಇದು 672 ( ಶೇ.44) ಆಗಿ ಏರಿಕೆಯಾಗಿದೆ.

ಏಪ್ರಿಲ್ 2019- ಜೂನ್ 2019ರ ಅವಧಿಯಲ್ಲಿ ದೇಶದಲ್ಲಿ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣ 5 ಮತ್ತು ದಲಿತರ ಮೇಲಿನ ದೌರ್ಜನ್ಯ ಬಗ್ಗೆ 99 ಪ್ರಕರಣಗಳು ದಾಖಲಾಗಿವೆ.ಇದೇ ಅವಧಿಯಲ್ಲಿಉತ್ತರ ಪ್ರದೇಶದಲ್ಲಿ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ಬಗ್ಗೆ 1 ಪ್ರಕರಣ ದಾಖಲಾಗಿದ್ದು, ದಲಿತರ ಮೇಲಿನ ದೌರ್ಜನ್ಯ ಬಗ್ಗೆ 52 ಪ್ರಕರಣಗಳು ದಾಖಲಾಗಿವೆ.

ಕಳೆದ ವರ್ಷ ಹೇಟ್ ಕ್ರೈಮ್ ವಾಚ್ ಮತ್ತು ನ್ಯೂಸ್ ಕ್ಲಿಕ್ ಡಾಟ್ ಇನ್ ಪ್ರಕಟಿಸಿದ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿ ಅತೀ ಹೆಚ್ಚು ದ್ವೇಷ ಕೃತ್ಯಗಳು ನಡೆದಿವೆ.ಇದರಲ್ಲಿ ಶೇ.75ರಷ್ಟು ಸಂತ್ರಸ್ತರು ಅಲ್ಪ ಸಂಖ್ಯಾತ ಸಮುದಾಯದವರಾಗಿದ್ದಾರೆ.

ವಿಸೂ: ಇಲ್ಲಿ ಹೇಳಿರುವ ಅಂಕಿ ಅಂಶಗಳು ಎನ್‌ಎಚ್‌ಆರ್‌ಸಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯಾಗಿದೆ.ದೇಶದಲ್ಲಿರುವ ದಲಿತ ಮತ್ತು ಅಲ್ಪ ಸಂಖ್ಯಾತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ನಿರ್ದಿಷ್ಟ ಸಂಖ್ಯೆ ಇಷ್ಟೇ ಎಂದು ಈ ಮೂಲಕ ಹೇಳಲಾಗುವುದಿಲ್ಲ.ಯಾಕೆಂದರೆ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ.ಹಾಗಾಗಿ ಎನ್‌ಎಚ್‌ಆರ್‌ಸಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಗಿಂತ ದೇಶದಲ್ಲಿ ನಡೆದ ದಲಿತ/ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಜಾಸ್ತಿಯೇ ಆಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.