ತ್ರಿಶ್ಯೂರ್,ಕೇರಳ: ಮಲಯಾಳಂನಪ್ರಸಿದ್ಧ ಲೇಖಕಿ ಅಶಿತಾ (63) ತ್ರಿಶ್ಯೂರ್‌ನ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

ಅಶಿತಾ ಅವರು ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರು ಕಂಡುಬಂದ ಕಾರಣ ಮಂಗಳವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1956 ಏಪ್ರಿಲ್ 5ರಂದು ತ್ರಿಶ್ಯೂರ್‌ನ ಪಳಯನ್ನೂರ್‌ನಲ್ಲಿ ಅವರು ಜನಿಸಿದ್ದರು. ಸಣ್ಣಕಥೆ, ಕವನ, ಮಕ್ಕಳ ಸಾಹಿತ್ಯ ಮತ್ತು ಭಾಷಾಂತರ ಕೃತಿಗಳನ್ನು ಅಶಿತಾ ರಚಿಸಿದ್ದಾರೆ.

’ಒರು ಸ್ತ್ರೀಯುಂ ಪರಯಾತದ್‘, ‘ಅಪೂರ್ಣ ವಿರಾಮಂಗಳ್‘, ’ಅಶಿತಾಯುಡೆ ಕಥಕಳ್‘ ಇವು ಅಶಿತಾ ಅವರ ಪ್ರಮುಖ ಕೃತಿಗಳು.

ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಲಲಿತಾಂಬಿಕಾ ಅಂತರ್ಜನಂ ಪ್ರಶಸ್ತಿ, ಇಡಶ್ಶೇರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.