ನವದೆಹಲಿ: ಏಪ್ರಿಲ್ 6ರಂದು ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲಿದ್ದು ಈ ಪ್ರಯುಕ್ತ ಬಿಜೆಪಿಯ ಹಿರಿಯ ನಾಯಕ ಎಲ್,ಕೆ. ಅಡ್ವಾಣಿ ಜನರಿಗೆ ಧನ್ಯವಾದ ಹೇಳಿ ಬ್ಲಾಗ್ ಬರೆದಿದ್ದಾರೆ.

1991ರಿಂದ ಗಾಂಧೀನಗರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಅಡ್ವಾಣಿ, ತಮ್ಮನ್ನು 6 ಬಾರಿ ಲೋಕಸಭಾ ಸದಸ್ಯನಾಗಿ ಆಯ್ಕೆ ಮಾಡಿದ ಗಾಂಧೀನಗರದಜನತೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.ಇಲ್ಲಿನ ಜನರ ಪ್ರೀತಿ ಮತ್ತು ಬೆಂಬಲ ನನಗೆ ಸಾಕಷ್ಟು ಸಿಕ್ಕಿದೆ ಎಂದಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿ ಸ್ಪರ್ಧಿಸುತ್ತಿಲ್ಲ. ಅಡ್ವಾಣಿ ಬದಲು ಈ ಲೋಕಸಭಾ ಕ್ಷೇತ್ರದಲ್ಲಿ ಅಮಿತ್ ಶಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಬ್ಲಾಗ್ನಲ್ಲಿ ಏನಿದೆ?
ಪಕ್ಷದ ಸಂಸ್ಥಾಪನಾ ದಿನಾಚರಣೆಯ ಈ ಹೊತ್ತಲ್ಲಿ ಬಿಜೆಪಿ ಬೆಂಬಲಿಗರಾದ ನಾವು ನಡೆದು ಬಂದ ದಾರಿ ಬಗ್ಗೆ ಹಿಂತಿರುಗಿ ನೋಡುವುದರ ಜತೆಗೆ ಮುನ್ನಡೆಯಬೇಕು. ಪಕ್ಷದ ಒಳಗೆ ಮತ್ತು ದೇಶದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಪ್ರಜಾಪ್ರಭುತ್ವದ ರೀತಿ ನೀತಿಗಳನ್ನು ಕಾಪಾಡುವುದು ಬಿಜೆಪಿಯ ಶ್ರೇಷ್ಠತೆಯ ಲಕ್ಷಣವಾಗಿದೆ.
ಮಾಧ್ಯಮಗಳು ಸೇರಿದಂತೆ ನಮ್ಮ ದೇಶದ ಸರ್ಕಾರಿ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ, ಸಮಗ್ರತೆ, ನಿಷ್ಪಕ್ಷಪಾತ ಮತ್ತು ದೃಢತೆಯನ್ನು ಕಾಪಾಡುವುದರಲ್ಲಿ ಬಿಜೆಪಿ ಸದಾ ಮುಂಚೂಣಿಯಲ್ಲಿದೆ.ರಾಜಕೀಯ, ಚುನಾವಣಾ ದೇಣಿಗೆ ಮತ್ತು ಚುನಾವಣಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಕಾಪಾಡಲು ಹೆಚ್ಚಿನ ಗಮನ ಹರಿಸಬೇಕು.ಇದು ಭ್ರಷ್ಟಾಚಾರ ಮುಕ್ತ ರಾಜಕೀಯಕ್ಕೆ ಅತ್ಯಗತ್ಯ.ಇದು ನಮ್ಮ ಪಕ್ಷದ ಇನ್ನೊಂದು ಆದ್ಯತೆಯಾಗಿದೆ.
ಚುನಾವಣೆಯನ್ನು ಜನತಂತ್ರದ ಹಬ್ಬ ಎಂದು ಉಲ್ಲೇಖಿಸಿದ ಅಡ್ವಾಣಿ, ಚುನಾವಣೆ ಎಂಬುದು ಪ್ರಜಾಪ್ರಭುತ್ವದಲ್ಲಿರುವ ರಾಜಕೀಯ ಪಕ್ಷ, ಸಮೂಹ ಮಾಧ್ಯಮ, ಚುನಾವಣೆ ಪ್ರಕ್ರಿಯೆ ನಡೆಸುವ ಅಧಿಕಾರಿಗಳಿಗೆ ಇದಕ್ಕಿಂತ ಹೆಚ್ಚಾಗಿ ಮತದಾರರಿಗೆಆತ್ಮಾವಲೋಕನದ ಸಮಯವಾಗಿದೆ.

ವೈವಿಧ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದು ಮುಖ್ಯ . ನಮ್ಮರಾಜಕೀಯ ವಿಷಯಗಳನ್ನು ಒಪ್ಪದೇ ಇರುವವರನ್ನು ನಾವೆಂದಿಗೂ ಶತ್ರುಗಳು ಎಂದು ಪರಿಗಣಿಸಿಲ್ಲ, ಅವರನ್ನು ನಾವು ಹಿತೈಷಿಗಳೆಂದೇ ಪರಿಗಣಿಸಿದ್ದೇವೆ.

ಅದರಂತೆಯೇ ನಮ್ಮ ದೇಶದ ರಾಷ್ಟ್ರೀಯತೆ ವಿಷಯದಲ್ಲಿ ನಮ್ಮೊಂದಿಗೆ ರಾಜಕೀಯವಾಗಿ ವಿರೋಧವಿರುವವರನ್ನು ದೇಶದ್ರೋಹಿ ಎನ್ನಬಾರದು.ಪ್ರತಿಯೊಬ್ಬ ಪ್ರಜೆಗೂ ವೈಯಕ್ತಿಕ ಮತ್ತು ರಾಜಕೀಯ ವಿಷಯಗಳನ್ನು ಹೇಳುವಸ್ವಾತಂತ್ರ್ಯವಿದೆ.
ತನ್ನ ಜೀವನದ ತತ್ವ ಏನೆಂದರೆ ದೇಶ ಮೊದಲು, ನಂತರ ಪಕ್ಷ, ನಾನು ಎಂಬುದು ಕೊನೆಗೆ ಬರಬೇಕು. ಈ ತತ್ವವನ್ನು ನಾನು ಜೀವನದುದ್ದಕ್ಕೂ ಪಾಲಿಸಿದ್ದೇನೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.