ನವದೆಹಲಿ: ‘ದೇಶದ ಆರ್ಥಿಕ ಪರಿಸ್ಥಿತಿಯು ತೀವ್ರ ಚಿಂತಾಜನಕ ಹಾಗೂ ಆತಂಕಕಾರಿಯಾಗಿದೆ’ ಎಂದು ಮಾಜಿ ಪ್ರಧಾನಿ, ಕಾಂಗ್ರೆಸ್ನ ಹಿರಿಯ ನಾಯಕ ಮನಮೋಹನ್ಸಿಂಗ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಭಾನುವಾರ ಮಾತನಾಡಿರುವ ಅವರು, ’ದ್ವೇಷ ರಾಜಕಾರಣ’ವನ್ನು ಬದಿಗಿಟ್ಟು ಕೇಂದ್ರ ಸರ್ಕಾರ ಆರ್ಥಿಕ ಚೇತರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಾಕಿತು ಮಾಡಿದ್ದಾರೆ.

ಆರ್ಥಿಕ ವಿಷಯದಲ್ಲಿನ ತಪ್ಪು ನೀತಿ, ನಿರ್ಧಾರಗಳೇ ಆರ್ಥಿಕ ಕುಸಿತಕ್ಕೆ ಕಾರಣವಾಗಿವೆ. ’ಇದು ಮಾನವ ನಿರ್ಮಿತ ಬಿಕ್ಕಟ್ಟು’. ಈ ಬಗ್ಗೆ ಆರ್ಥಿಕ ತಜ್ಞರ, ಅನುಭವಿಗಳ ಧ್ವನಿಯನ್ನೂ ಆಲಿಸಿ, ಸಲಹೆಗಳನ್ನು ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.

ಸಮಗ್ರ ಆಡಳಿತದಲ್ಲಿನ ತಪ್ಪು ನಿರ್ವಹಣೆಯೇ ಆರ್ಥಿಕ ಹಿಂಜರಿತಕ್ಕೆ ಕಾರಣ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವೇ ಹೊಣೆ ಎಂದುಮನಮೋಹನ ಸಿಂಗ್ದೂರಿದ್ದಾರೆ.

ಇಂದಿನ ಆರ್ಥಿಕ ಪರಿಸ್ಥಿತಿಯು ಬಹಳ ಆತಂಕಕಾರಿಯಾಗಿದೆ. ಕಳೆದ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರವು ಶೇ 5ರಷ್ಟಿದ್ದು, ಇದು ಆರ್ಥಿಕ ಹಿಂಜರಿತದ ಸಂಕೇತ ಎಂದೂ ಹೇಳಿದ್ದಾರೆ.

ಭಾರತವು ಹೆಚ್ಚು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಮೋದಿ ಸರ್ಕಾರದ ಸಮಗ್ರವಾದ ನಿರ್ವಹಣೆಯಲ್ಲಿನ ತಪ್ಪು ನಿರ್ವಹಣೆಯೇ ಮಂದಗತಿಯ ಬೆಳವಣಿಗೆಗೆ ಕಾರಣವಾಗಿದೆ ಎಂದು ಅವರು ಆಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.