ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಿದ್ದರು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಅನಂತಕುಮಾರ್ ಅವರ ನಿಧನ ಹಿನ್ನಲೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಸಂಬಂಧ 30 ವರ್ಷಕ್ಕೂ ಹಳೆಯದು. ನಿಮಗೆ ರಾಜಕೀಯದಲ್ಲಿ ಒಳ್ಳೇ ಭವಿಷ್ಯ ಇದೆ ಎಂದು ಹೇಳಿ ಅವರ ಲಾಯರ್ ಕೋಟು ತೆಗೆಸಿದ್ದೆ. ರಾಜ್ಯ ಸುತ್ತಿ ಪಕ್ಷ ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿದೆವು. ಪಕ್ಷಕ್ಕೆ ಅವರ ಕೊಡುಗೆ ಶಬ್ದಗಳಲ್ಲಿ ವರ್ಣಿಸಲು ಅಗುವುದಿಲ್ಲ’ ಎಂದು ಹೇಳಿದರು.

ಮದುವೆಯ ನಂತರ ಮಲ್ಲಿಕಾರ್ಜುನಯ್ಯ ಅವರ ಮನೆಯಲ್ಲಿ ನಾನು, ಅನಂತ್ ಮತ್ತು ಅವರ ಪತ್ನಿ ತೇಜಸ್ವಿನಿ ಒಟ್ಟಿಗೆ ಇದ್ದೇವು. ಕಷ್ಟಪಟ್ಟು ರಾಜ್ಯ ಸುತ್ತಿದರು. ಬೆಂಗಳೂರಿನಲ್ಲಿ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿ, ವಾಜಪೇಯಿ ಮತ್ತು ಮೋದಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದರು.

‘ವಿಮಾನ ನಿಲ್ದಾಣ, ನಮ್ಮ ಮೆಟ್ರೊಗೆ ಕಾರಣಕರ್ತರು ಅನಂತಕುಮಾರ್. ರಾಜ್ಯದಲ್ಲಿ ಬಿಜೆಪಿ ಬೆಳೆದಿದೆ ಅಂದರೆ ಅನಂತಕುಮಾರ್ ಕಾರಣ. ನಮಗೆ ಮತ್ತೊಬ್ಬ ಅನಂತಕುಮಾರ್ ಸಿಗಲು ಆಗುವುದಿಲ್ಲ. ಸರಳ, ಸಜ್ಜನಿಕೆಯ ವ್ಯಕ್ತಿಯನ್ನು ಕಳೆದುಕೊಂಡು ರಾಜ್ಯ ಮತ್ತು ದೇಶ ಬಡವಾಗಿದೆ. ಕುಟುಂಬ ವರ್ಗದವರಿಗೆ ನೋವು ತಡೆದುಕೊಳ್ಳುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.

ಇವನ್ನೂ ಓದಿ...

*ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತ್ಕುಮಾರ್ ಇನ್ನಿಲ್ಲ

*ವಿಶಿಷ್ಟ ಆಲೋಚನೆಗಳ ಸಂಘಟನಾ ಚತುರ

*ನಾಳೆ ಮಧ್ಯಾಹ್ನ 1ಕ್ಕೆ ಚಾಮರಾಜಪೇಟೆಯಲ್ಲಿ ಅಂತ್ಯಸಂಸ್ಕಾರ

*ಸರ್ಕಾರಿ ಕಚೇರಿ, ಬ್ಯಾಂಕ್, ಶಿಕ್ಷಣ ಸಂಸ್ಥೆಗಳಿಗೆ ರಜೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.