ಬೆಂಗಳೂರು: ‘ನೋಡಿ ಇವತ್ತು ಏನಾಗುತ್ತೋ ಏನೋ ಅಂತ ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇರಿಸಿಕೊಂಡೇ ಬಂದಿದ್ದೇನೆ’ ಎಂದು ಸ್ಪೀಕರ್ ರಮೇಶ್ಕುಮಾರ್ ವಿಷಾದದಿಂದ ಹೇಳಿದರು. ಮಾತ್ರವಲ್ಲ, ತಮ್ಮ ಮಾರ್ಷಲ್ ಒಬ್ಬರನ್ನು ಕರೆದು, ‘ತಗೊಳಪ್ಪಾ, ಇದನ್ನು ಯಡಿಯೂರಪ್ಪ ಅವರಿಗೆ ತೋರಿಸು’ ಎಂದರು.

ತಮ್ಮ ಮೇಲೆ ಮಾಡಿರುವ ಆರೋಪಗಳು ಮತ್ತು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ರಮೇಶ್ಕುಮಾರ್ ಖೇದ ವ್ಯಕ್ತಪಡಿಸಿದರು.

‘ನಾನು ಅರಸು ಅವರ ಗರಡಿಯಲ್ಲಿ ಪಳಗಿದವನು. ಗೋಪಾಲಗೌಡ, ಕೆ.ಎಚ್.ರಂಗನಾಥ್ ಅಂಥವರ ಆದರ್ಶ ಅಳವಡಿಸಿಕೊಂಡವನು. ನೆಟ್ಟಗೆ ರಾಜೀನಾಮೆ ಪತ್ರ ಬರೆಯಲು ಬರದವರಿಂದ ಹೇಗೆ ಬದುಕಬೇಕು ಎಂಬುದನ್ನು ಹೇಳಿಸಿಕೊಳ್ಳಬೇಕಿಲ್ಲ’ ಎಂದರು.

‘ನೀವು ಮಾಡಿದ್ದು ಸಭಾ ನಿಂದನೆ.ಯಾರೂ ಹಾಗೆ ಮಾತನಾಡುವ ಹಾಗಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.