ಬಾಕ್ಸಿಂಗ್ ದಂತಕಥೆ ನಿಕೋಲಾ ಆ್ಯಡಮ್ಸ್ ನಿವೃತ್ತಿ
ಒಲಿಂಪಿಕ್ಸ್ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ನ ಮಹಿಳಾ ಬಾಕ್ಸರ್ ನಿಕೋಲಾ ಆ್ಯಡಮ್ಸ್ ಅವರು ಅನಾರೋಗ್ಯದ ಕಾರಣ ಬಾಕ್ಸಿಂಗ್ಗೆ ನಿವೃತ್ತಿ ಘೋಷಿಸಿದ್ದಾರೆ.
37 ವರ್ಷದ ನಿಕೋಲಾ ಅವರು ತಮ್ಮ ವೈದ್ಯರ ಸಲಹೆ ಮೇರೆಗೆ ನಿವೃತ್ತಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಕಣ್ಣಿನಲ್ಲಿ ತೊಂದರೆ ಇದ್ದು, ಬಾಕ್ಸಿಂಗ್ ಮುಂದುವರಿಸಿದರೆ ದೃಷ್ಟಿಯನ್ನೇ ಕಳೆದುಕೊಳ್ಳುವ ಅಪಾಯವಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಯಾರ್ಕ್ಶೈರ್ ಇವನಿಂಗ್ ಪೋಸ್ಟ್ ಪತ್ರಿಕೆಯು ವರದಿ ಮಾಡಿದೆ.Last Updated 6 ನವೆಂಬರ್ 2019, 20:15 IST