ಕುರಿಗಾಹಿ ಹುಡುಗ ಗೋಲ್ ಕೀಪರ್ ಆದದ್ದು
ಬಿರಾನ್ವಾಂಡ್ ಹನ್ನೆರಡನೇ ವಯಸ್ಸಿನಲ್ಲಿದ್ದಾಗ ಕುಟುಂಬ ಸರಬೈಸ್ ಎಂಬಲ್ಲಿ ನೆಲೆಗೊಂಡಿತು. ಸ್ಥಳೀಯ ಫುಟ್ ಬಾಲ್ ತಂಡದ ಪರವಾಗಿ ಸ್ಟ್ರೈಕರ್ ಆಗಿ ಆಡುತ್ತಿದ್ದಾಗ ಒಮ್ಮೆ ಗಂಭೀರ ಗಾಯವಾಯಿತು. ಅಲ್ಲಿಂದಾಚೆಗೆ ಫುಟ್ ಬಾಲ್ ಸ್ಟ್ರೈಕರ್ ಆಗುವ ಕನಸಿಗೆ ತಣ್ಣೀರು. ಅದರಿಂದ ಕಲ್ಲವಿಲಗೊಳ್ಳದ ಬಿರಾನ್ವಾಂಡ್ ಗೋಲ್ ಕೀಪರ್ ಆಗಿ ಪಳಗಲು ಪಣತೊಟ್ಟ. ತಾನು ಅಭ್ಯಾಸ ಮಾಡುತ್ತಿದ್ದ ತಂಡದ ಗೋಲ್ ಕೀಪರ್ ಒಮ್ಮೆ ಗಾಯಗೊಂಡಾಗ ಈತನಿಗೆ ಆಡುವ ಅವಕಾಶ ಸಿಕ್ಕಿತು.Last Updated 29 ಜೂನ್ 2018, 6:47 IST