ಸಿಕೆಲ್‌ಸೆಲ್ ಅನೀಮಿಯಾ: ವಂಶವಾಹಿ ಸಮಸ್ಯೆಯಿದ್ದರೂ ವಂಶೋದ್ಧಾರ ಸಾಧ್ಯ
ಸಿಕಲ್‌ಸೆಲ್ ಅನೀಮಿಯಾ ಕೇಳಿದ್ದೀರಲ್ವಾ. ಸರಳವಾಗಿ ಹೇಳುವುದಾದರೆ ರಕ್ತ ಸಂಬಂಧಿ ಸಮಸ್ಯೆ ಅದು. ದುಂಡಗಿರಬೇಕಾದ ರಕ್ತಕಣಗಳು ಅಸಹಜವಾಗಿದ್ದು ಕುಡುಗೋಲಿನ ಆಕಾರ ಹೊಂದಿರುತ್ತವೆ. ಇಂಥ ಅಸಹಜತೆ ಇಡೀ ದೇಹದ ಮೇಲೆ ಪರಿಣಾಮ ಬೀರಿ ಯಾತನಾಮಯ ಪರಿಸ್ಥಿತಿ ತಂದೊಡ್ಡುತ್ತದೆ. ಇದು ಆನುವಂಶಿಕ ಕಾಯಿಲೆ. ಈ ಸಮಸ್ಯೆ ಇರುವ ವ್ಯಕ್ತಿಗಳು ಮಕ್ಕಳನ್ನು ಹೊಂದಿದರೆ ಮಕ್ಕಳಿಗೂ ಈ ಕಾಯಿಲೆ ವರ್ಗಾವಣೆ ಆಗುವ ಸಾಧ್ಯತೆ ಹೆಚ್ಚು. ಹಾಗಿದ್ದರೆ ಈ ದಂಪತಿ ಮಗು ಹೊಂದುವ ಆಸೆಯನ್ನೇ ಬಿಡಬೇಕೇ? ಖಂಡಿತಾ ಇಲ್ಲ. ಇದಕ್ಕೆ ಪರಿಹಾರವಿದೆ. ಅಂದರೆ ರೋಗ ಸಾಧ್ಯತೆಯ ಮೂಲವನ್ನೇ ಕೆದಕಿ, ಆನುವಂಶಿಕ ರೋಗನಿರ್ಣಯದ ಮೂಲಕ ನವಜಾತ ಶಿಶುವು ರೋಗ ಮುಕ್ತವಾಗಬಹುದು ಎನ್ನುತ್ತಾರೆ ಬೆಂಗಳೂರಿನ ಆಸ್ಪತ್ರೆಯ ವೈದ್ಯರು.Last Updated 1 ಏಪ್ರಿಲ್ 2022, 7:43 IST