ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

City Life

ADVERTISEMENT

ಸಂಗತ: ನಗರ ಜನರ ಮಾಲ್‌ ಎಂಬ ಮಾಯಾಬಜಾರ್‌!

ನಗರವಾಸಿಗಳ ಬದುಕಿನ ಅವಿಭಾಜ್ಯ ಅಂಗವಾಗಿರುವ ಮಾಲ್‌ಗಳಿಂದ ಅನುಕೂಲಗಳಷ್ಟೇ ಅನನುಕೂಲಗಳೂ ಇವೆ
Last Updated 7 ಜನವರಿ 2024, 19:08 IST
ಸಂಗತ: ನಗರ ಜನರ ಮಾಲ್‌ ಎಂಬ ಮಾಯಾಬಜಾರ್‌!

ಕಥೆ: ನೀರ ಮೇಲಣ ಹೆಜ್ಜೆ

ಹೊತ್ತು ಹುಟ್ಟುವ ಹೊತ್ತಿಗಾಗಲೇ ಹೊಸಾ ಬಡಾವಣೆಯಲ್ಲಿ ವಾಕ್ ಮುಗಿಸಿ ಪಾರ್ಕಿನ ಬೆಂಚು ಕಲ್ಲೊಂದರಲ್ಲಿ ಕೂತಿದ್ದ ಪುಟ್ಟಾಲಯ್ಯನನ್ನು ಕಂಡವರು ಎಂದಿನಂತೆ ಮಾತಾಡಿಸಿಯೋ ಇಲ್ಲಾ ಮುಗುಳ್ನಕ್ಕೋ ತಟಾಯುತ್ತಿದ್ದರೆ ಪುಟ್ಟಾಲಯ್ಯನ ಕಣ್ಣುಗಳು ಮಾತ್ರ ದಗ್ಗೀರಜ್ಜನಿಗಾಗಿ ತಡಕಾಡುತ್ತಿದ್ದವು. ಪಾರ್ಕಿನ ಆಚೆ ಬದಿಯಲ್ಲಿ ಮೈ ತುಂಬಾ ಕಾಯಿಡಿದಿದ್ದ ಬೆಲವತ್ತದ ಮರದಲ್ಲಿದ್ದ ಹಕ್ಕಿಗಳಿಗಿನ್ನೂ ಬೆಳಕರಿದಿಲ್ಲವೇನೋ ಎಂಬಂತೆ ಗೊಗ್ಗರು ದನಿ ಮಾತಾಡಿಕೊಳ್ಳುತ್ತಿದ್ದವು. ಅದರಿಂದ ವಾರಾಸಿಗೆ ಕೊಂಚ ದೂರದಲ್ಲಿದ್ದ ಅರಳಿ ಹಾಗೂ ಬೇವಿನ ಜೋಡಿ ಮರಗಳನ್ನು ಜೋಡಿಯೊಂದು ಮಡಿಯುಟ್ಟು ಸುತ್ತಾಕಿ ಅವುಗಳ ಬುಡದಲ್ಲಿದ್ದ ನಾಗರ ಕಲ್ಲಿಗೆ ಶರಣು ಮಾಡಿಕೊಳ್ಳುತ್ತಿತ್ತು. ಅವುಗಳಾಚೆಗಿದ್ದ ಆಕಾಶ ಮಲ್ಲಿಗೆ ಮರದ ತುಂಬಾ ಚೋಟುದ್ದದ ಬಿಳಿಯ ಹೂಗಳು ಎಳೆ ಬಿಸಿಲಿನ ಚಕ್ಕಳಗುಳಿಗೆ ನಗಾಡುತ್ತಿರುವಂತೆ ಕಾಣುತ್ತಿದ್ದವು. ಒಂದು ಚಣ ಅತ್ತಲೇ ದಿಟ್ಟಿಸತೊಡಗಿದ ಪುಟ್ಟಾಲಯಯ್ಯನ ಮನಸು ಮಾತ್ರ, `ಅಜ್ಜ ಕಾಣಿಸ್ಕಂಡು ಏನಿಲ್ಲಾಂದ್ರೂ ಹತ್ತತ್ರ ಎರಡು ವಾರಾಗ್ತಾ ಬಂತು ಅಕಸ್ಮಾತ್...’ ಅಂತ ದಗ್ಗೀರಜ್ಜನಿಗಾಗಿ ಕಾತರಿಸುತ್ತಿತ್ತು. ಹಂಗನಿಸಿದ್ದೇ ತಡ ಪುಟ್ಟಾಲಯ್ಯ ಎದ್ದವನೇ ಹಾಕಿದ್ದ ಟೋಪಿ ಸ್ವೆಟರ್‌ಗಳನ್ನು ಬಿಚ್ಚಿ ಹೆಗಲಿಗಾಕಿಕೊಂಡು ಸೀದಾ ದಗ್ಗೀರಜ್ಜನ ಮನೆಯ ದಾರಿ ಹಿಡಿದ.
Last Updated 20 ಡಿಸೆಂಬರ್ 2020, 2:53 IST
ಕಥೆ: ನೀರ ಮೇಲಣ ಹೆಜ್ಜೆ

ನಗರದ ಬದುಕು ಇಷ್ಟಭದ್ರತೆಯದ್ದೇ ಕಷ್ಟ

ಶಿಕ್ಷಣ, ಉದ್ಯೋಗದ ಸಲುವಾಗಿ ಮಹಾನಗರಗಳಿಗೆ ವಲಸೆ ಬರುವ ಯುವತಿಯರು ಸುರಕ್ಷತೆ ವಿಷಯದಲ್ಲಿ ಆತಂಕಿತರಾಗಿರುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಬದುಕು ಕಟ್ಟಿಕೊಳ್ಳಲು ಬಂದಿರುವ ಯುವತಿಯರು ವಾಸ್ತವ್ಯದ ಬಗ್ಗೆಯೂ ಚಿಂತಿತರಾಗಿದ್ದು, ಅವರಿಗೆ ಭದ್ರತೆ ಒದಗಿಸಲು ನಗರಾಡಳಿತ ‘ಸುರಕ್ಷಿತ ನಗರ’ ಯೋಜನೆ ಕೈಗೊಳ್ಳುವ ಜರೂರಿದೆ.
Last Updated 8 ನವೆಂಬರ್ 2019, 19:30 IST
ನಗರದ ಬದುಕು ಇಷ್ಟಭದ್ರತೆಯದ್ದೇ ಕಷ್ಟ
ADVERTISEMENT
ADVERTISEMENT
ADVERTISEMENT
ADVERTISEMENT