ಶ್ರೀಲಂಕಾ ಸ್ಫೋಟ: ರಕ್ಷಣಾ ಕಾರ್ಯದರ್ಶಿ, ಪೊಲೀಸ್ ಮುಖ್ಯಸ್ಥರ ರಾಜೀನಾಮೆಗೆ ಸೂಚನೆ
ಈಸ್ಟರ್ ದಿನ ಶ್ರೀಲಂಕಾದಲ್ಲಿ ನಡೆದ ಸರಣಿ ಸ್ಫೋಟಗಳನ್ನು ತಡೆಯಲು ವಿಫಲವಾಗಿದ್ದಕ್ಕೆ ರಾಜೀನಾಮೆ ನೀಡುವಂತೆ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೊ ಮತ್ತು ಪೊಲೀಸ್ ಮುಖ್ಯಸ್ಥ ಪುಜೀತ್ ಜಯಸುಂದರ್ ಅವರಿಗೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಸೂಚಿಸಿದ್ದಾರೆ.
ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದ ಸಿರಿಸೇನಾ ಅವರು, ಮುಂದಿನ 24 ಗಂಟೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಬದಲಾವಣೆ ಮಾಡುವುದಾಗಿ ಹೇಳಿದ್ದರು.
ಗುಪ್ತಚರ ಮಾಹಿತಿ ಇದ್ದರೂ ದಾಳಿ ತಡೆಯಲು ಅಧಿಕಾರಿಗಳು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಸಿರಿಸೇನಾ ತಿಳಿಸಿದ್ದರು.Last Updated 24 ಏಪ್ರಿಲ್ 2019, 19:56 IST