ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Ibrahim sutara

ADVERTISEMENT

Budget ಭಾಷಣದಲ್ಲಿ ಬಳಸಿದ ವಚನ, ಕವಿಗಳ ವಾಣಿ, ಚಿಂತಕರ ನುಡಿ, ಸಿನಿಮಾ ಹಾಡುಗಳಿವು

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ದಾಖಲೆಯ 15ನೇ ಬಾರಿಯ ರಾಜ್ಯ ಬಜೆಟ್‌ ಭಾಷಣದಲ್ಲಿ ವಚನಕರಾರ ಸಾಲುಗಳು, ಕವಿಗಳ ವಾಣಿ, ಚಿಂತಕರ ನುಡಿ, ಸಿನಿಮಾ ಹಾಡುಗಳ ಸಾಲುಗಳು ಆಯಾ ಸಂದರ್ಭದಲ್ಲಿ ಹಾದುಹೋದವು.
Last Updated 16 ಫೆಬ್ರುವರಿ 2024, 10:48 IST
Budget ಭಾಷಣದಲ್ಲಿ ಬಳಸಿದ ವಚನ, ಕವಿಗಳ ವಾಣಿ, ಚಿಂತಕರ ನುಡಿ, ಸಿನಿಮಾ ಹಾಡುಗಳಿವು

ಸಲಾಂ ಮಾಡ್ತೇವಿ ಭಾವೈಕ್ಯದ ವಾಣೀಗೆ

ಒಂದೆಡೆ ಹಿಜಾಬ್‌. ಇನ್ನೊಂದೆಡೆ ಕೇಸರಿ ಶಾಲು. ಸಮಾಜದಲ್ಲಿನ ಒಡಕುಗಳು ಶಾಲಾಕಾಲೇಜುಗಳಲ್ಲೂ ಕಾಣಿಸಿಕೊಂಡಿರುವ ದಿನಗಳಲ್ಲಿ ‘ಭಾರತದ ಬಹುತ್ವ ಪರಂಪರೆ’ ಹಾಗೂ ಆ ಪರಂಪರೆಯ ಪ್ರಯೋಗಶಾಲೆಗಳಂತಿದ್ದ ಊರುಗಳು ಸಂಘರ್ಷದ ಸಮವಸ್ತ್ರ ತೊಟ್ಟುಕೊಂಡಂತಿವೆ. ‘ಬಹುತ್ವ ಭಾರತ’ ಎಲ್ಲಿ ಕಳೆದುಹೋಯಿತು? ಈ ಪ್ರಶ್ನೆಗೆ ಉತ್ತರರೂಪದಂತಿದೆ ಘಟಪ್ರಭೆಯ ಮಡಿಲಿನ ಮಹಾಲಿಂಗಪುರ. ಅದು ಇಬ್ರಾಹಿಂ ಸುತಾರ ಅವರನ್ನು ರೂಪಿಸಿದ ಪರಿಸರ; ಸುತಾರ ಅವರಿಂದ ಮತ್ತಷ್ಟು ಸಮೃದ್ಧಗೊಂಡ ಪರಿಸರ. ಪ್ರಕ್ಷುಬ್ಧ ಸಮಾಜಕ್ಕೆ ತಂಪನೆರೆವ ‘ಮಹಾಲಿಂಗಪುರ ಮಾದರಿ’ ಎಲ್ಲರ ದಾರಿಯೂ ಆಗಬೇಕಿದೆ...
Last Updated 12 ಫೆಬ್ರುವರಿ 2022, 19:30 IST
ಸಲಾಂ ಮಾಡ್ತೇವಿ ಭಾವೈಕ್ಯದ ವಾಣೀಗೆ

ಲತಾ, ಸುತಾರ ಕೊಡುಗೆ ಅಪಾರ: ನಾಗರಾಜ ಭಜಂತ್ರಿ

ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಮತ್ತು ಭಾವೈಕ್ಯ ಪ್ರವಚನಕಾರ ಇಬ್ರಾಹಿಂ ಸುತಾರ ಅವರಿಗೆ ಪಟ್ಟಣದ ಶಿವಶರಣ ನೂಲಿ ಚಂದಯ್ಯ ಕೊರಮ ಸಮಾಜ ಯುವಕ ಮಂಡಳದ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದರು.
Last Updated 7 ಫೆಬ್ರುವರಿ 2022, 13:55 IST
ಲತಾ, ಸುತಾರ ಕೊಡುಗೆ ಅಪಾರ: ನಾಗರಾಜ ಭಜಂತ್ರಿ

ಇಬ್ರಾಹಿಂ ಸುತಾರ: ಭಾವೈಕ್ಯ ಪಸರಿಸಿದ ಪ್ರವಚನಕಾರ

ಇಬ್ರಾಹಿಂ ಸುತಾರ ಅವರ ಪ್ರವಚನ ಕೇಳಿದ್ದ ಜನ ಮನೆ ಕಟ್ಟಿಸಿಕೊಟ್ಟರು!
Last Updated 5 ಫೆಬ್ರುವರಿ 2022, 19:30 IST
ಇಬ್ರಾಹಿಂ ಸುತಾರ: ಭಾವೈಕ್ಯ ಪಸರಿಸಿದ ಪ್ರವಚನಕಾರ

ಕೋಮು ಸೌಹಾರ್ದತೆಯ ಮಹತ್ವವನ್ನು ಸಾರಿದ ಸುತಾರ: ಸಿಎಂ ಬೊಮ್ಮಾಯಿ ಸಂತಾಪ

ಸರ್ವಧರ್ಮ ಪ್ರವಚನಾಕಾರ, ಪ್ರದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 5 ಫೆಬ್ರುವರಿ 2022, 6:26 IST
ಕೋಮು ಸೌಹಾರ್ದತೆಯ ಮಹತ್ವವನ್ನು ಸಾರಿದ ಸುತಾರ: ಸಿಎಂ ಬೊಮ್ಮಾಯಿ ಸಂತಾಪ

ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ ಇಬ್ರಾಹಿಂ ಸುತಾರ ಅಂತ್ಯಕ್ರಿಯೆ

ಪ್ರವಚನಕಾರ ಇಬ್ರಾಹಿಂ ಸುತಾರ ಅವರ ಅಂತ್ಯಕ್ರಿಯೆ ಮಹಾಲಿಂಗಪುರದ ಅವರ ತೋಟದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.
Last Updated 5 ಫೆಬ್ರುವರಿ 2022, 5:46 IST
ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ ಇಬ್ರಾಹಿಂ ಸುತಾರ ಅಂತ್ಯಕ್ರಿಯೆ

ಕನ್ನಡದ ಕಬೀರ, ಮಹಾಲಿಂಗಪುರದ ಇಬ್ರಾಹಿಂ ಸುತಾರ ಅವರ ಅಪರೂಪದ ಫೋಟೊಗಳು

ವೈದಿಕ, ವಚನ ಹಾಗೂ ಸೂಫಿ ಪರಂಪರೆ ಆಶಯಗಳ ಹದ ಪಾಕವನ್ನು ಭಜನೆ, ಪ್ರವಚನ, ಸಂವಾದಗಳ ಮೂಲಕ ಉಣಬಡಿಸಿ ಹಿಂದೂ–ಮುಸ್ಲಿಮರ ನಡುವೆ ಭಾವೈಕ್ಯತೆಯ ಕಂಪು ಪಸರಿಸಿದ್ದ ಕೃಷ್ಣೆಯ ನಾಡಿನ ಕಬೀರ, ಮಹಾಲಿಂಗಪುರದ ಇಬ್ರಾಹಿಂ ಸುತಾರ ಇನ್ನಿಲ್ಲ. ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.ಕೋಮು ದ್ವೇಷ, ಜಾತಿ–ಧರ್ಮದ ಅಮಲು ಮಾನವತೆಯನ್ನು ಮಂಕಾಗಿಸಿರುವ ವಿಪ್ಲವದ ಈ ದಿನಗಳಲ್ಲಿ ಜನಸಾಮಾನ್ಯರ ನಡುವಿದ್ದ ಈ ಕಬೀರ ದಿಢೀರನೆ ಕಣ್ಮರೆಯಾಗಿದ್ದಾರೆ.ಮಹಾಲಿಂಗಪುರದಲ್ಲಿ ಬಡಗಿ ವೃತ್ತಿ ಮಾಡುತ್ತಿದ್ದ ನಬಿಸಾಹೇಬ್ ಹಾಗೂ ಅಮೀನಾಬಿ ದಂಪತಿ ಪುತ್ರ ಇಬ್ರಾಹಿಂ ಸುತಾರ (ಜನ್ಮ ದಿನ: ಮೇ 10, 1940) ಅವರಿಗೆ ಮನೆಯಲ್ಲಿನ ಬಡತನದ ಪರಿಸ್ಥಿತಿ ಓದಲು ಉತ್ತೇಜಕವಾಗಿರಲಿಲ್ಲ. ಮೂರನೇ ತರಗತಿಗೆ ಶಿಕ್ಷಣ ಅಪೂರ್ಣಗೊಂಡಿತು. ಊರಿನ ಬಹುಸಂಖ್ಯಾತರ ಉದ್ಯೋಗ ನೇಕಾರಿಕೆಯನ್ನೇ ಸುತಾರ ಕಲಿತರು. ಬದುಕಿಗೆ ಅದೇ ದಾರಿಯಾಯಿತು.ಬಾಲ್ಯದಲ್ಲಿ ಮಸೀದಿಗೆ ಹೋಗಿ ಅಲ್ಲಿ ಧರ್ಮಗುರುಗಳ ಮಾರ್ಗದರ್ಶನದಲ್ಲಿ ನಮಾಜು, ಪ್ರಾರ್ಥನೆ ಕಲಿತು ಕುರಾನ್ ಅಧ್ಯಯನ ಮಾಡಿದರು. ಈ ವೇಳೆ ಬೇರೆ ಧರ್ಮಗಳ ಸಾರ ಅರಿಯುವ ಆಶಯ ಮೊಳಕೆಯೊಡೆಯಿತು. ಅದಕ್ಕೆ ಊರಿನ ಸಾಧುನ ಗುಡಿಯಲ್ಲಿದ್ದ ಭಜನಾ ಸಂಘ ಒತ್ತಾಸೆ ನೀಡಿತು. ಅಲ್ಲಿನ ಧಾರ್ಮಿಕರ ಸಾಂಗತ್ಯದಲ್ಲಿ ತತ್ವಪದ, ವಚನಗಳನ್ನು ಕಲಿತರು. ಉಪನಿಷತ್ತಿನ ಸಾರ ಅರಿತುಕೊಂಡರು. ರಮ್ಜಾನ್ ವೇಳೆ ಮುಂಜಾನೆ ಜನರನ್ನು ಎಬ್ಬಿಸಲು ಹಳ್ಳಿಗಳಿಗೆ ಹಾಡುತ್ತಾ ಹೋಗುತ್ತಿದ್ದ ತಂಡದಲ್ಲಿ ಸಂಚರಿಸಿ ಜೀವನಾನುಭವ ಪಡೆದುಕೊಂಡ ಅವರು, ಮಹಾಲಿಂಗಪುರದಲ್ಲಿ ಬಸವಾನಂದ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಪ್ರತಿ ವರ್ಷ ಒಂದು ತಿಂಗಳು ಕಾಲ ಬೆಳಿಗ್ಗೆ ಹಾಗೂ ಸಂಜೆ ನಡೆಯುತ್ತಿದ್ದ ಪ್ರವಚನ ಕೇಳುತ್ತಿದ್ದರು. ‘ಅಲ್ಲಿನ ಧಾರ್ಮಿಕ ಚಿಂತನೆಗಳು ನನ್ನಲ್ಲಿನ ತಿಳಿವಳಿಕೆ ವಿಸ್ತರಿಸಲು ನೆರವಾಯಿತು’ ಎಂದು ಸುತಾರ ಸ್ಮರಿಸಿಕೊಳ್ಳುತ್ತಿದ್ದರು‘ದೇವರು, ಧರ್ಮ, ಆರಾಧನೆಯ ವಿಧಾನ ಬೇರೆ ಬೇರೆಯಾದರೂ ಸತ್ಯ ಒಂದೇ ಎಂಬ ಸಂಗತಿ ಅರಿವಿಗೆ ಬಂದಿತು. ಜೊತೆಗೆ ತತ್ವಪದಗಳ ಅರಿವು, ನಿಜಗುಣ ಶಿವಯೋಗಿಗಳ ಶಾಸ್ತ್ರ, ಭಗವದ್ಗೀತೆಯ ಅಧ್ಯಯನ ಭವದ ಅರಿವು ವಿಸ್ತಾರಗೊಳಿಸಿತು’ ಎಂದು ವಿನಮ್ರವಾಗಿ ಹೇಳುತ್ತಿದ್ದರು.
Last Updated 5 ಫೆಬ್ರುವರಿ 2022, 5:05 IST
ಕನ್ನಡದ ಕಬೀರ, ಮಹಾಲಿಂಗಪುರದ ಇಬ್ರಾಹಿಂ ಸುತಾರ ಅವರ ಅಪರೂಪದ ಫೋಟೊಗಳು
err
ADVERTISEMENT

ಇಬ್ರಾಹಿಂ ಸುತಾರ ಸಂದರ್ಶನ| ಧರ್ಮಗುರುಗಳಿಗೆ ಸಾಮರಸ್ಯದ ತರಬೇತಿ ಬೇಕು

Last Updated 5 ಫೆಬ್ರುವರಿ 2022, 3:45 IST
fallback

ಹೃದಯಾಘಾತದಿಂದ ಪ್ರವಚನಕಾರ ಇಬ್ರಾಹಿಂ ಸುತಾರ ನಿಧನ

ಸಂತೆಯಲ್ಲಿ ನಿಂತ ಕಬೀರ ಇನ್ನಿಲ್ಲ
Last Updated 5 ಫೆಬ್ರುವರಿ 2022, 3:32 IST
ಹೃದಯಾಘಾತದಿಂದ ಪ್ರವಚನಕಾರ ಇಬ್ರಾಹಿಂ ಸುತಾರ ನಿಧನ

ಧರ್ಮಗುರುಗಳಿಗೆ ಬೇಕು ಸಾಮರಸ್ಯದ ತರಬೇತಿ: ಇಬ್ರಾಹಿಂ ಸುತಾರ

ಕನ್ನಡದ ಕಬೀರ ಎಂದೇ ಖ್ಯಾತರಾದ ಇಬ್ರಾಹಿಂ ಸುತಾರ ಅವರು ಮೊನ್ನೆ ಮಾತಿಗೆ ಸಿಕ್ಕರು. ನಾಡಿನ ಕೋಮು ಸಾಮರಸ್ಯ ಪರಂಪರೆಗೆ ಕನ್ನಡಿ ಹಿಡಿದರು. ಸಾಮರಸ್ಯದ ಎಳೆಗಳು ಈಗ ತುಂಡರಿಸಿ ಹೊರಟಿರುವುದಕ್ಕೆ ಮರುಗಿದರು. ಧರ್ಮದ ಬಾವುಟ ಹಿಡಿದು ಹೊರಟವರ ಕಿವಿಯನ್ನೂ ಹಿಂಡಿದರು...
Last Updated 4 ಏಪ್ರಿಲ್ 2021, 3:05 IST
ಧರ್ಮಗುರುಗಳಿಗೆ ಬೇಕು ಸಾಮರಸ್ಯದ ತರಬೇತಿ: ಇಬ್ರಾಹಿಂ ಸುತಾರ
ADVERTISEMENT
ADVERTISEMENT
ADVERTISEMENT