ಜಮ್ಮು–ಕಾಶ್ಮೀರ: ಬ್ಯಾಂಕ್ ಮ್ಯಾನೇಜರ್ ಮೇಲೆ ಉಗ್ರರ ದಾಳಿ, ಹತ್ಯೆ
ಶ್ರೀನಗರ: ರಾಜಸ್ಥಾನದ ಹನುಮಾನ್‌ಗಡ ಮೂಲದ ಬ್ಯಾಂಕ್ ಮ್ಯಾನೇಜರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಗುರುವಾರ ಈ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅರೇಹ್ ಮೋಹನ್‌ಪೊರಾದ ಇಲಾಕೆ ದೆಹಾತಿ ಬ್ಯಾಂಕ್‌ನ (Ellaqui Dehati Bank) ವ್ಯವಸ್ಥಾಪಕ ವಿಜಯ್ ಕುಮಾರ್ ಅವರನ್ನು ಬ್ಯಾಂಕ್ ಆವರಣದೊಳಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದು, ತನಿಖೆ ಕೈಗೊಂಡಿದ್ದಾರೆ.Last Updated 2 ಜೂನ್ 2022, 7:03 IST