ರೈತ ಮುಖಂಡರೊಂದಿಗಿನ ಐದನೇ ಸಭೆಯು ವಿಫಲ: ಡಿ. 9ಕ್ಕೆ ಮತ್ತೊಂದು ಸುತ್ತಿನ ಮಾತುಕತೆ
ರೈತ ಸಂಘಟನೆಗಳ ಮುಖಂಡರೊಂದಿಗೆ ಶನಿವಾರ ನಡೆದ ಐದನೇ ಸುತ್ತಿನ ಮಾತುಕತೆ ಯಶಸ್ವಿಯಾಗದೆ, ಡಿಸೆಂಬರ್ 9ರಂದು ಮತ್ತೊಂದು ಸಭೆಯನ್ನು ನಡೆಸಲು ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ನಿಮ್ಮೆಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆ ಮುಂದುವರಿಯುತ್ತದೆ ಮತ್ತು 'ಇದಕ್ಕೆ ಯಾವುದೇ ಅಡೆತಡೆಯು ಇಲ್ಲ' ಎಂದು ಆಕ್ರೋಶಗೊಂಡಿದ್ದ ರೈತರಿಗೆ ಭರವಸೆ ನೀಡಿದ್ದಾರೆ. ವಿಜ್ಞಾನ ಭವನದಲ್ಲಿ ನಡೆದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕನಿಷ್ಠ ಬೆಂಬಲ ಬೆಲೆಯು ಮುಂದುವರಿಯುತ್ತದೆ. ಅದಕ್ಕೆ ಯಾವುದೇ ಅಡೆತಡೆ ಇಲ್ಲ ಎಂದು ನಾವು ತಿಳಿಸಿದ್ದೇವೆ. ಈ ಬಗ್ಗೆ ಅನುಮಾನಗಳಿದ್ದರೆ ಅದು ಆಧಾರರಹಿತ. ಯಾರಿಗಾದರೂ ಅನುಮಾನಗಳಿದ್ದರೆ ಅದನ್ನು ಪರಿಹರಿಸಲು ಸರ್ಕಾರ ಸಿದ್ಧವಿದೆ. ರಾಜ್ಯಗಳಲ್ಲಿ ಮಂಡಿಯ ಮೇಲೆ ಪರಿಣಾಮ ಬೀರುವ ಉದ್ದೇಶ ನಮಗಿಲ್ಲ, ಅವು ಕಾನೂನಿನ ಮೂಲಕವೂ ಪರಿಣಾಮ ಬೀರುವುದಿಲ್ಲ. ಎಪಿಎಂಸಿಗಳ ಬಗ್ಗೆ ಯಾರಾದರೂ ತಪ್ಪು ಕಲ್ಪನೆ ಹೊಂದಿದ್ದರೆ, ಅದನ್ನು ಸರಿಪಡಿಸಲು ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದೆ' ಎಂದು ತಿಳಿಸಿದ್ದಾರೆ.Last Updated 5 ಡಿಸೆಂಬರ್ 2020, 23:26 IST