ಯುಪಿಎ ಅವಧಿಯಲ್ಲಿ ಎಜಿಬಿ ಶಿಪ್‌ಯಾರ್ಡ್ ₹22,842 ಕೋಟಿ ಬ್ಯಾಂಕ್ ವಂಚನೆ: ಸಿಬಿಐ
ಮುಂಬೈ: ಗುಜರಾತ್ ಮೂಲದ ಎಜಿಬಿ ಶಿಪ್‌ಯಾರ್ಡ್ ಕಂಪನಿಯ ₹22,842 ಕೋಟಿ ವಂಚನೆಯು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಅಧಿಕಾರದಲ್ಲಿದ್ದಾಗ ನಡೆದಿದೆ. 2005ರಿಂದ 2012ರ ನಡುವೆ ಹಗರಣ ವಂಚನೆ ಆಗಿರುವುದಾಗಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಮಂಗಳವಾರ ಹೇಳಿದೆ. ಎಜಿಬಿ ಶಿಪ್‌ಯಾರ್ಡ್ ಕಂಪನಿಯಿಂದ ಎಸ್‌ಬಿಐ ಹಾಗೂ ಇತರ ಬ್ಯಾಂಕ್‌ಗಳಿಗೆ ಆಗಿದೆ ಎನ್ನಲಾದ ₹ 22 ಸಾವಿರ ಕೋಟಿ ವಂಚನೆ ಪ್ರಕರಣದಲ್ಲಿ ಮೊದಲ ದೂರು ದಾಖಲಿಸಲು ಐದು ವರ್ಷ ತೆಗೆದುಕೊಂಡಿದ್ದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಸಮರ್ಥಿಸಿಕೊಂಡಿದ್ದರು.Last Updated 15 ಫೆಬ್ರುವರಿ 2022, 14:57 IST