ಜೀವನಪೂರ್ತಿ ಕ್ರಿಕೆಟ್ ಧ್ಯಾನಿಸಿದ ಪಿಎಸ್ವಿ: ಜಿ.ಆರ್. ವಿಶ್ವನಾಥ್
ಬೆಂಗಳೂರು: ‘ಪಿ.ಎಸ್. ವಿಶ್ವನಾಥ್ ಅವರಿಗೆ ಕ್ರಿಕೆಟ್ ಸರ್ವಸ್ವವೂ ಆಗಿತ್ತು. ಜೀವನದುದ್ದಕ್ಕೂ ಕ್ರಿಕೆಟ್ ಆಟವನ್ನೇ ಧ್ಯಾನಿಸಿದರು. ಅವರಿಗೆ ಪ್ರತಿಭೆಗಳನ್ನು ಗುರುತಿಸುವ ಕಲೆ ಸಿದ್ಧಿಸಿತ್ತು. ನಾನು ಸ್ಕ್ವೇರ್ ಕಟ್ ಮತ್ತು ಲೇಟ್ ಕಟ್ ಆಡಬಲ್ಲೆ ಎಂದು ಅವರಿಗೆ ಆಗಲೇ ಗೊತ್ತಿತ್ತು’ ಎಂದು ಕ್ರಿಕೆಟ್ ದಂತಕಥೆ ಜಿ.ಆರ್. ವಿಶ್ವನಾಥ್ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.
ಅವರಿಗೆ ಬಾಲ್ಯದಲ್ಲಿ ಕೋಚ್ ಆಗಿದ್ದ ಪಿ.ಎಸ್. ವಿಶ್ವನಾಥ್ (97) ಶುಕ್ರವಾರ ಬೆಳಗಿನ ಜಾವ ನಿಧನರಾದರು. Last Updated 4 ಮಾರ್ಚ್ 2023, 5:45 IST