ಯುಗವು ಮರೆತ ಕವಿ ಈಶ್ವರ ಸಣಕಲ್
ಈಶ್ವರ ಸಣಕಲ್ಲರ ಸಾವು ನನಗೆ ಮಾತ್ರ ಕಾಡುತ್ತಿತ್ತು. ನಲ್ಲಿಯ ನೀರು ತುಂಬುತ್ತಲೋ, ಬಟ್ಟೆ ಒಗೆಯುತ್ತಲೋ ಕಂಡ ಆ ಮನೆಯ ಹೆಣ್ಣುಮಕ್ಕಳ ನೆನಪೂ ಮಸುಕು ಮಸುಕು. ಈಗವರು ಎಲ್ಲಿದ್ದಾರೋ ಗೊತ್ತಿಲ್ಲ. ಸಣಕಲ್ಲರ ಪತ್ನಿಯ ಮುಖವನ್ನು ಬಾಗಿಲಿನ ಆಚೆಗೆ ಕಂಡವರು ವಿರಳ. ಕೊನೆಗೆ, ನನ್ನ ಅಂತರ್ಮನದ ಹಂಬಲದ ಕಾರಣಕ್ಕೋ ಏನೋ ಸಣಕಲ್ಲ ಅವರ ಮಗಳು ಮಧುಮತಿ ಸಿಕ್ಕಿದರು. ಕಳೆದ ಬೇಸಿಗೆಯಲ್ಲಿ ಧಾರವಾಡದಲ್ಲಿದ್ದೆ. ಫೋನಾಯಿಸಿದ ಕೂಡಲೇ ಮನೆಗೆ ಬಂದ ಮಧುಮತಿಯನ್ನು ಕೂಡಿಸಿ ನನ್ನ ಅತ್ತಿಗೆ ಉಣಬಡಿಸಿದರು. ಇಂದು ಈ ಓಣಿಯ ಅನ್ನದ ಋಣ ಇತ್ತೆಂದು ಕಾಣುತ್ತದೆ ಎಂದು ಭಾವುಕರಾಗಿದ್ದರು.Last Updated 16 ನವೆಂಬರ್ 2019, 19:30 IST