ಮೆಸ್ಸಿ, ರೊನಾಲ್ಡೊ ಅವರಂತೆ ವಿರಾಟ್ ಕೊಹ್ಲಿ ‘ಆಧುನಿಕ ಶ್ರೇಷ್ಠ’ ಆಟಗಾರ: ಓಜಾ
ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಅವರು ಬ್ಯಾಟ್ಸ್‌ಮನ್ ಆಗಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇನ್ನುಮುಂದೆ ತಮ್ಮ ತಂಡದ ಜೊತೆ ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲಲು ಯೋಚಿಸಲಿದ್ದಾರೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅಭಿಪ್ರಾಯಪಟ್ಟಿದ್ದಾರೆ. ಸ್ಪೋರ್ಟ್ಸ್ ಟುಡೆ ಜೊತೆ ಮಾತನಾಡಿರುವ ಅವರು, ಕೊಹ್ಲಿಯವರನ್ನು ಆಧುನಿಕ ಕಾಲಘಟ್ಟದ ಶ್ರೇಷ್ಠ ಆಟಗಾರ ಎಂದು ಹೇಳಿದ್ದು, ಪ್ರಶಸ್ತಿಗಳನ್ನು ಗೆಲ್ಲುವತ್ತ ಅವರು (ಕೊಹ್ಲಿ) ಹೊಂದಿರುವ ಹಸಿವನ್ನು ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಉಸೇನ್ ಬೋಲ್ಟ್ ಜೊತೆಗೆ ಹೋಲಿಸಿದ್ದಾರೆ. ‘ವಿರಾಟ್ ಕೊಹ್ಲಿ ಆಧುನಿಕ ಶ್ರೇಷ್ಠ ಆಟಗಾರ. ಈ ಕಾಲಘಟ್ಟದ ಶ್ರೇಷ್ಠ ಕ್ರೀಡಾಳುಗಳಾಗಿ ನೀವು ಮೆಸ್ಸಿಯವರತ್ತ, ರೊನಾಲ್ಡೊ ಅವರತ್ತ, ಬೋಲ್ಟ್ ಅವರತ್ತ ನೋಡುತ್ತೀರಿ. ಅವರು ತಮ್ಮದೇ ಆದ ಸ್ಪರ್ಧೆಯನ್ನು ಹೊಂದಿದ್ದಾರೆ. ಎಲ್ಲವನ್ನೂ ಗೆಲ್ಲಲು ಬಯಸುತ್ತಾರೆ. ಅವರು ತಮ್ಮ ಹಾದಿಯಲ್ಲಿ ಸಾಗುವಾಗ, ಪ್ರತಿಯೊಂದನ್ನೂ ಗೆಲ್ಲಲು ನೋಡುತ್ತಿರುತ್ತಾರೆ. ಅದೇರೀತಿ ವಿರಾಟ್ ಕೊಹ್ಲಿ ಅಲೋಚಿಸಬೇಕು. ಒಬ್ಬ ಬ್ಯಾಟ್ಸ್‌ಮನ್ ಆಗಿ ನಾನು ಸಾಕಷ್ಟು ಸಾಧಿಸಿದ್ದೇನೆ. ಇದೀಗ ನಾಯಕನಾಗಿ ನಾನು ವಿಶ್ವಕಪ್ ಗೆಲ್ಲಬೇಕು. ಐಸಿಸಿ ಪಂದ್ಯಾವಳಿಗಳು ಮತ್ತು ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕು’ ಎಂದು ಅವರು ಚಿಂತಿಸಬೇಕು. ಐಪಿಎಲ್‌ನಲ್ಲಿ ‘ನಾನಿದನ್ನು ಸಾಧಿಸುತ್ತೇನೆ’ ಎಂದು ಅವರ ಮನಸ್ಸೂ ಅವರಿಗೆ ಹೇಳಲಿದೆ’ ಎಂದಿದ್ದಾರೆ.Last Updated 2 ನವೆಂಬರ್ 2020, 11:29 IST