ಮುಂಬೈ: ಭಾರತದ ಏಕದಿನ ಕ್ರಿಕೆಟ್ ತಂಡದ ನಾಯಕತ್ವ ಬದಲಾವಣೆ ಕುರಿತು ವಿರಾಟ್ ಕೊಹ್ಲಿ ಹೇಳಿಕೆಗೆ ಮಾಜಿ ಕ್ರಿಕೆಟಿಗಪ್ರಗ್ಯಾನ್ ಓಜಾ ತಿರುಗೇಟು ನೀಡಿದ್ದಾರೆ.

'ರುಚಿಕರ ಅಡುಗೆ ತಯಾರಿಸುವಾಗ ಓರ್ವ ಉತ್ತಮ ಬಾಣಸಿಗನಿಗೆ ಹೊರಗೆ ಏನನ್ನು ಪ್ರದರ್ಶಿಸಬೇಕು ಮತ್ತು ಏನನ್ನು ಪ್ರದರ್ಶಿಸಕೂಡದು ಎಂಬುದು ಗೊತ್ತಿರುತ್ತದೆ. ಅಡುಗೆ ಮನೆ ಮತ್ತು ರೆಸ್ಟೂರೆಂಟ್‌ನ ಘನತೆ ಆತನ ಮೇಲೆ ಅವಲಂಬಿತವಾಗಿರುತ್ತದೆ' ಎಂದು ಐಪಿಎಲ್ ಗವರ್ನಿಂಗ್ ಕೌನ್ಸಿಲ್‌ನ ಸದಸ್ಯರೂ ಆಗಿರುವ ಪ್ರಗ್ಯಾನ್ ಓಜಾ ಟ್ವೀಟ್ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ, ತಮ್ಮನ್ನು ಏಕದಿನ ತಂಡದ ನಾಯಕತ್ವದಿಂದ ಕೈಬಿಡುವ ಕುರಿತು ಮಂಡಳಿಯು ಕೇವಲ 90 ನಿಮಿಷಗಳ ಮುನ್ನ ಸಂಪರ್ಕಿಸಿತ್ತು ಎಂದು ಹೇಳಿದ್ದರು. ಇದರ ಬೆನ್ನಲ್ಲೇ 'ಉತ್ತಮ ಬಾಣಸಿಗ'ನ ಬಗ್ಗೆ ಟ್ವಿಟರ್‌ನಲ್ಲಿ ಪ್ರಗ್ಯಾನ್ ಓಜಾ ಪೋಸ್ಟ್ ಮಾಡಿದ್ದಾರೆ.

ಕೊಹ್ಲಿ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬಿಸಿಸಿಐ ನೋಡಿಕೊಳ್ಳಲಿದೆ: ಗಂಗೂಲಿ

ಈ ಮೂಲಕ ಬಿಸಿಸಿಐ ಮತ್ತು ತಮ್ಮ ನಡುವಿನ ವಿಚಾರವನ್ನು ಕೊಹ್ಲಿ ಬಹಿರಂಗ ಪಡಿಸಬಾರದಿತ್ತು ಎಂದು ಪರೋಕ್ಷವಾಗಿ ಪ್ರಗ್ಯಾನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.