ಯುವ ಮನಸು; ಹೊಸ ಕನಸು| ವಾದ್ಯ ಭಂಡಾರ ತೆರೆಯುವ ಸಂಕಲ್ಪ
ಗುರುಹಿರಿಯರ ಆಶೀರ್ವಾದದಿಂದ ಸಿತಾರ್, ಸೂರ್ಬಹರ್, ತಾರ್ ಶೆಹನಾಯಿ, ಇಸರಾಜ್, ದಿಲ್ರುಬಾ ಪಂಚವಾದ್ಯ ನುಡಿಸುವ ವಿರಳಾತಿ ವಿರಳ ಕಲಾವಿದ ಎನಿಸಿಕೊಂಡಿದ್ದು ನನ್ನ ಪುಣ್ಯ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ನನ್ನ ಸಂಕಲ್ಪ. ಸಂಗೀತ ವಾದ್ಯಗಳ ವೈಜ್ಞಾನಿಕ ಅಧ್ಯಯನಕ್ಕಾಗಿ ರಾಷ್ಟ್ರೀಯ ಫೆಲೋಶಿಪ್ ದೊರೆತಿದ್ದು 2020ರಲ್ಲಿ ಹೊಸ ಹುಡುಕಾಟದತ್ತ ಹೆಜ್ಜೆ ಇಡುತ್ತಿದ್ದೇನೆ. ಕಮಾನು (ಬೋವಿಂಗ್) ವಾದ್ಯಗಳ ನುಡಿಸಾಣಿಕೆ ಹಾದಿಯಲ್ಲಿ ಒಮ್ಮೆಲೇ ತೂರಿಬರುವ ಅಪಸ್ವರ (ವಾಲ್ಫ್ ನೋಟ್ಸ್) ನಿವಾರಿಸುವ ಸವಾಲು ನನ್ನೆದುರಿಗಿದೆ.Last Updated 28 ಡಿಸೆಂಬರ್ 2019, 19:30 IST