ಎಚ್ಚರ, ನಿಂತ ಭೂಮಿಯೇ ಕರಕಲಾದೀತು: ಹಿಜಾಬ್ ವಿವಾದದ ಕುರಿತು ವೈದೇಹಿ ಬರಹ
ಇಡೀ ನಾಡು ತ್ರಸ್ತಗೊಂಡಿದೆ; ಅಸ್ತವ್ಯಸ್ತಗೊಂಡಿದೆ. ಒಂದೆಡೆ ಕ್ರೌರ್ಯದ ಹೇಷಾರವ ಹೆಚ್ಚಾಗಿದ್ದರೆ, ಮತ್ತೊಂದೆಡೆ ಸಂವೇದನಾಶೀಲ ಮನಸುಗಳು ದಿಗ್ಮೂಢವಾಗಿ ಕುಳಿತಿವೆ. ಕೋಮುದ್ವೇಷದ ವಿಷ ದಿನದಿಂದ ದಿನಕ್ಕೆ ‘ವಿಷಮ’ಶೀತ ಜ್ವರದ ಹಾಗೆ ಏರುತ್ತಲೇ ಇದೆ. ವಿಪರ್ಯಾಸವೆಂದರೆ ಕಣ್ಣು–ಹೃದಯಗಳಿಲ್ಲದ ಈ ಹರಿತ ಕತ್ತಿಯ ಬೀಸಿನ ಅಳವಿನಲ್ಲಿರುವವರೆಲ್ಲ ಎಳೆಯ ಕುಡಿಗಳು, ಮುಗ್ಧ ಮನಸ್ಸುಗಳು. ಕಾಲೇಜಿನ ಅಂಗಳದಲ್ಲಿ ಸೃಷ್ಟಿಯಾದ ‘ಹಿಜಾಬ್ ವಿವಾದ’ ಈಗ ಕೋರ್ಟಿನ ಅಂಗಳದಲ್ಲಿದೆ. ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತನ ಕೊಲೆ, ಅದರ ನಂತರ ನಡೆದ ದೊಂಬಿಗಳು ಕೋಮುದ್ವೇಷದ ಅಟ್ಟಹಾಸದ ಕ್ರೂರ ಕೋರೆ–ದಾಡೆಗಳನ್ನು ಕಾಣಿಸಿವೆ. ದೇಶಭಕ್ತಿ, ಧರ್ಮ, ಜಾತಿ ಎಲ್ಲವೂ ಪುರಾವೆಗಳನ್ನು ಬೇಡುತ್ತಿರುವ ಈ ಕಾಲದಲ್ಲಿ, ಮನುಷ್ಯನೆನಿಸಿಕೊಳ್ಳಲು ಅತ್ಯಗತ್ಯವಾದ ಆತ್ಮಸಾಕ್ಷಿಯೇ ಕಾಣೆಯಾಗುತ್ತಿದೆಯೇ? ಮುಗ್ಧ ಯುವಜನರದ ಬಿಸಿರಕ್ತದ ಕಾವಿನಲ್ಲಿ ಚಳಿ ಕಾಯಿಸಿಕೊಳ್ಳುತ್ತಿರುವರಿಗೆ ಈ ನೆಲದ, ಸಾಕ್ಷಿಪ್ರಜ್ಞೆಯ ಅಂತಃಕರಣದ ಧ್ವನಿ ಕೇಳಿಸುವ ಪ್ರಯತ್ನವೊಂದು ಇಲ್ಲಿದೆ...Last Updated 26 ಫೆಬ್ರುವರಿ 2022, 19:30 IST