ಸಂಗಾತಿಗಾಗಿ ಗೂಡು ಕಟ್ಟುವ ಪಕ್ಷಿ!
ಜಗತ್ತಿನಾದ್ಯಂತ ಮರಕುಟಿಗದ ವಿವಿಧ ಪ್ರಬೇಧಗಳನ್ನು ಕಾಣಬಹುದು. ಇವುಗಳಲ್ಲಿ ಸುಮಾರು 200 ಪ್ರಬೇಧಗಳಿವೆ. ಅದರಲ್ಲಿ ಕಪ್ಪು, ಬಿಳಿ, ಹಳದಿ... ಹೀಗೆ ವೈವಿಧ್ಯಮಯ ಬಣ್ಣಗಳಲ್ಲಿ ಕಂಡುಬರುತ್ತವೆ. ಕರ್ನಾಟಕದ ಪಶ್ಚಿಮಘಟ್ಟದಲ್ಲಿ ಸುವರ್ಣಬೆನ್ನಿನ ಮರಕುಟಿಗವನ್ನು ಕಾಣಬಹುದು. ಇವುಗಳಲ್ಲಿ ಕಪ್ಪು ಬೆನ್ನಿನ ಮರಕುಟಿಗ, ಚಿಟ್ಟು ಮರಕುಟಿಗ, ಕಪ್ಪು ಮರಕುಟಿಗ, ಹೆಮ್ಮರ ಮರಕುಟಿಗ ಎಂಬ ವಿಧಗಳಿವೆ. ಇವು ಸುಮಾರು 600 ಗ್ರಾಂ ವರೆಗೂ ತೂಕ ಇರುತ್ತವೆ. ಇವುಗಳು ಸಾಮಾನ್ಯವಾಗಿ ಸುಮಾರು 8 ಸೆಂ.ಮೀ ನಿಂದ 58 ಸೆಂ.ಮೀ ಉದ್ದವಿರುತ್ತವೆ.Last Updated 8 ನವೆಂಬರ್ 2019, 19:45 IST