ಅದೊಂದು ಭಾನುವಾರ ಕೆರೆ, ಕಟ್ಟೆ, ಕಾಡು, ಮೇಡು ಎನ್ನದೇ ಮರಕುಟಿಗ ಪಕ್ಷಿಯ ಜಾಡು ಹಿಡಿದು ಹೊರಟೆ. ಆದರೆ ಹಕ್ಕಿಯ ಜಾಡು ಹಿಡಿಯುವುದು ಅಷ್ಟು ಸುಲಭದ ಮಾತಲ್ಲ, ಅದಕ್ಕೆ ನಿರಂತರ ಅಧ್ಯಯನಶೀಲತೆ, ತಾಳ್ಮೆ ಅಗತ್ಯ. ಸವಾಲಾಗಿ ತೆಗೆದುಕೊಂಡರೆ ಮಾತ್ರ ಅವುಗಳ ಜೀವನಶೈಲಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ರಂಗನತಿಟ್ಟು, ನುಗುವನಹಳ್ಳಿ ಹಾಗೂ ಬಂಡಿಪುರ ಅರಣ್ಯದಲ್ಲಿ ಸುತ್ತಾಡಿದಾಗ ಹಲವು ಪ್ರಭೇದಗಳ ಮರಕುಟಿಗಗಳು ಕ್ಯಾಮೆರಾಗೆ ಸೆರೆಯಾದವು.

ಜಗತ್ತಿನಾದ್ಯಂತ ಮರಕುಟಿಗದ ವಿವಿಧ ಪ್ರಬೇಧಗಳನ್ನು ಕಾಣಬಹುದು. ಇವುಗಳಲ್ಲಿ ಸುಮಾರು 200 ಪ್ರಬೇಧಗಳಿವೆ. ಅದರಲ್ಲಿ ಕಪ್ಪು, ಬಿಳಿ, ಹಳದಿ... ಹೀಗೆ ವೈವಿಧ್ಯಮಯ ಬಣ್ಣಗಳಲ್ಲಿ ಕಂಡುಬರುತ್ತವೆ. ಕರ್ನಾಟಕದ ಪಶ್ಚಿಮಘಟ್ಟದಲ್ಲಿ ಸುವರ್ಣಬೆನ್ನಿನ ಮರಕುಟಿಗವನ್ನು ಕಾಣಬಹುದು. ಇವುಗಳಲ್ಲಿ ಕಪ್ಪು ಬೆನ್ನಿನ ಮರಕುಟಿಗ, ಚಿಟ್ಟು ಮರಕುಟಿಗ, ಕಪ್ಪು ಮರಕುಟಿಗ, ಹೆಮ್ಮರ ಮರಕುಟಿಗ ಎಂಬ ವಿಧಗಳಿವೆ. ಇವು ಸುಮಾರು 600 ಗ್ರಾಂ ವರೆಗೂ ತೂಕ ಇರುತ್ತವೆ. ಇವುಗಳು ಸಾಮಾನ್ಯವಾಗಿ ಸುಮಾರು 8 ಸೆಂ.ಮೀ ನಿಂದ 58 ಸೆಂ.ಮೀ ಉದ್ದವಿರುತ್ತವೆ.

ಮರಕುಟಿಗಗಳು ವಿಶಿಷ್ಟವಾದ ದೇಹ ರಚನೆಯನ್ನು ಹೊಂದಿವೆ. ಭರ್ಜಿಯಂಥ ಬಲಿಷ್ಟ, ಚೂಪಾದ ತುದಿಯ ಕೊಕ್ಕು, ಗಟ್ಟಿ ಬಾಲ, ಜೋಡಿ ಬೆರಳುಗಳಿರುವ ಪಾದ, ಎರಡು ಬೆರಳು ಹಿಂದಕ್ಕೆ ಮತ್ತು ಎರಡು ಬೆರಳುಗಳು ಮುಂದಕ್ಕೆ ಇದ್ದು ಮರ ಹತ್ತಲು ಮತ್ತು ಬಿಗಿಯಾಗಿ ಮರವನ್ನು ತಬ್ಬಿ ಹಿಡಿದುಕೊಳ್ಳಲು ಸಹಕಾರಿಯಾಗಿವೆ.

ಪೊಟರೆ ಕೊರೆಯುವಾಗ ಮರದ ಚಕ್ಕೆಗಳನ್ನು ಸ್ವಚ್ಛಗೊಳಿಸಲು ಕೊಕ್ಕಿನ ಮೇಲೆ ವಿಶೇಷ ಗರಿಗಳನ್ನು ಹೊಂದಿವೆ. ಪೊಟರೆ ಕೊರೆಯುವಾಗ ಸೆಕೆಂಡಿಗೆ 20 ಬಾರಿಯಂತೆ ಗಂಟೆಗೆ 18 ಕಿ.ಮೀ ವೇಗದಲ್ಲಿ ಕೊಕ್ಕನ್ನು ಬಡಿಯುತ್ತವೆ.

ಎಷ್ಟೇ ಜೋರಾಗಿ ಕೊಕ್ಕನ್ನು ಕುಟ್ಟಿದರೂ ಅದಕ್ಕೆ ತಲೆನೋವು ಬರುವುದಿಲ್ಲ, ತಲೆಯಲ್ಲಿರುವ ಗಾಳಿಯ ಚೀಲಗಳು ಹೊಡೆತದಿಂದ ಮಿದುಳಿಗೆ ಏಟಾಗದಂತೆ ತಡೆಯುತ್ತವೆ. ದಿನವೊಂದಕ್ಕೆ ಸುಮಾರು 8 ಸಾವಿರದಿಂದ 12 ಸಾವಿರ ಬಾರಿ ಮರಕ್ಕೆ ಕೊಕ್ಕನ್ನು ಬಡಿಯುತ್ತವೆ. ಮರಕುಟಿಗ ಒಣಗಿದ ಮರಗಳಲ್ಲಿ ಮಾತ್ರ ಪೊಟರೆ ಮಾಡುತ್ತವೆ. ಇವು ಪೊಟರೆ ಕೊರೆದ ಬಳಿಕ ಅದು ಹೆಣ್ಣು ಪಕ್ಷಿಗೆ ಇಷ್ಟವಾಗದೆ ಹೋದರೆ ಮತ್ತೊಂದು ಪೊಟರೆ ಕೊರೆಯುತ್ತವೆ. ಪ್ರತಿವರ್ಷವು ಹೊಸ ಹೊಸ ಗೂಡನ್ನು ನಿರ್ಮಿಸುತ್ತವೆ. ಇವು ಬಿಟ್ಟುಹೋದ ಪೊಟರೆಗಳಲ್ಲಿ ಗೂಬೆ, ಇನ್ನು ಮುಂತಾದ ಹಕ್ಕಿಗಳು ವಾಸಮಾಡುತ್ತವೆ.

ಇವುಗಳು ಹವಾಮಾನಕ್ಕೆ ತಕ್ಕಂತೆ ಸುಮಾರು 1 ರಿಂದ 3 ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಇವುಗಳ ಜೀವಿತಾವಧಿ ಸುಮಾರು 4 ರಿಂದ 11 ವರ್ಷ. 10 ರಿಂದ 15 ಮರಗಳಿಗೆ ರಂಧ್ರ ಕೊರೆಯುತ್ತವೆ. ಇವುಗಳನ್ನು ಕಾಂಕ್ರೀಟ್ ಕಾಡಿನಲ್ಲಿ ನೋಡಲಿಕ್ಕೂ ಸಾಧ್ಯವಿಲ್ಲದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.