ಅರಿವು ಅಗತ್ಯ
ಈ ರೀತಿ ಆನ್‌ಲೈನ್‌ನಲ್ಲಿ ಮೋಸ ಹೋಗುವ ಪ್ರಕರಣಗಳಿಗೆ ಗಂಡು ಹೆಣ್ಣೆಂಬ ಭೇದ ಇರುವುದಿಲ್ಲ. ಬಾಲ್ಯದಲ್ಲಿ ಪ್ರೀತಿ, ವಿಶ್ವಾಸ, ಹೊಗಳಿಕೆಯಿಂದ ವಂಚಿತಗೊಂಡ ಮನಸ್ಸುಗಳು ಬಹುಬೇಗ ಇಂಥ ಮೋಸಕೂಪಕ್ಕೆ ಬಲಿಯಾಗುತ್ತಾರೆ. ಸಣ್ಣ ಪ್ರಶಂಸೆಯನ್ನೂ ಪ್ರೀತಿಯೆಂದು ನಂಬಿ ಬಿಡುತ್ತಾರೆ. ಯಾರಲ್ಲಿ ಎಷ್ಟು ಹಂಚಿಕೊಳ್ಳಬೇಕು ಮತ್ತು ಹಂಚಿಕೊಳ್ಳಬಾರದು ಎಂಬ ರೇಖೆಯನ್ನು ಮರೆಯುತ್ತಾರೆ. ಈಗೀಗಂತೂ ಸಾಮಾಜಿಕ ಜಾಲತಾಣಗಳೇ ಬದುಕಿನ ಭಾಗವಾಗಿಬಿಟ್ಟಿವೆ. ಸಾಮಾಜಿಕ ವ್ಯವಸ್ಥೆಯ ಬದುಕಿನಿಂದ ಬಹುದೂರ ಹೋಗಿಬಿಟ್ಟಿದ್ದೇವೆ. ಸ್ನೇಹಿತರು, ಪ್ರೀತಿಪಾತ್ರರೆಲ್ಲರೂ ವರ್ಚುಯಲ್ ಆಗಿ ಇದ್ದಾರೆ ಹೊರತು ಆಫ್‌ಲೈನ್‌ನಲ್ಲಿ ಕಡಿಮೆಯಾಗಿದ್ದಾರೆ. ಆನ್‌ಲೈನ್ ಡೇಟಿಂಗ್, ಚಾಟಿಂಗ್‌ಗಳ ಜಮಾನದಲ್ಲಿ ಇರುವುದರಿಂದ ವರ್ಚುಯುಲ್ ಜಗತ್ತಿನ ತವಕ ಹಾಗೂ ತಲ್ಲಣಗಳನ್ನು ಅರಿಯುವುದು ಬಹುಮುಖ್ಯ. ವ್ಯವಹಾರಿಕ ಜ್ಞಾನ ಬೆಳೆಸಿಕೊಳ್ಳಬೇಕು. ಯಾವುದೇ ಆ್ಯಪ್ ಇರಲಿ; ಸಾಮಾಜಿಕ ಜಾಲತಾಣಗಳೇ ಇರಲಿ ಅರಿವು ಮೂಡಿಸಿಕೊಳ್ಳುವುದು ಮುಖ್ಯ. ಡಾ.ಅಲೋಕ್ ಕುಲಕರ್ಣಿ, ಹಿರಿಯ ಮನಶಾಸ್ತ್ರಜ್ಞ, ಮಾನಸ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆ್ಯಂಡ್ ನ್ಯುರೋಸೈನ್ಸ್, ಹುಬ್ಬಳ್ಳಿ