ಬೆಂಗಳೂರು: ಐಬಿಎಂ ಕನ್ಸಲ್ಟಿಂಗ್ ಮತ್ತು ಮೈಕ್ರೊಸಾಫ್ಟ್ ಸಹಯೋಗದಡಿ ನಗರದಲ್ಲಿ ಪ್ರಥಮ ಬಾರಿಗೆ ಐಬಿಎಂ-ಮೈಕ್ರೊಸಾಫ್ಟ್ ಅನುಭವ ವಲಯವನ್ನು (ಎಕ್ಸ್ಪೀರಿಯನ್ಸ್ ಝೋನ್) ತೆರೆಯುವುದಾಗಿ ಎರಡು ಕಂಪನಿಗಳು ಜಂಟಿಯಾಗಿ ಘೋಷಿಸಿವೆ.

ಗ್ರಾಹಕರು ಜನರೇಟಿವ್ ಎ.ಐ, ಹೈಬ್ರೀಡ್ ಕ್ಲೌಡ್ ಮತ್ತು ಇತರೆ ಮೈಕ್ರೊಸಾಫ್ಟ್ ಉತ್ಪನ್ನಗಳು ಮತ್ತು ತಂತ್ರಜ್ಞಾನ ಬಳಸಿಕೊಂಡು ತಮ್ಮ ಉದ್ಯಮದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿಕೊಳ್ಳಲು ಈ ವಲಯವು ನೆರವಾಗಲಿದೆ.

ಎಕ್ಸ್ಪೀರಿಯನ್ಸ್ ಜೋನ್ನಲ್ಲಿ ಜಗತ್ತಿನಾದ್ಯಂತ ಇರುವ ಮತ್ತು ವಿವಿಧ ಕೈಗಾರಿಕೆಗಳ ಗ್ರಾಹಕರು ವಿವಿಧ ತಂತ್ರಜ್ಞಾನ ವಲಯಗಳಲ್ಲಿ ಐಬಿಎಂ ಕನ್ಸಲ್ಟಿಂಗ್ ಜೊತೆ ಕೆಲಸ ಮಾಡಬಹುದು.

ಐಬಿಎಂ -ಮೈಕ್ರೊಸಾಫ್ಟ್ ಎಕ್ಸ್ಪೀರಿಯನ್ಸ್ ಝೋನ್ ಗ್ರಾಹಕರಿಗೆ ನೆಕ್ಷ್ಟ್ ಜನರೇಷನ್ ಕೌಶಲ ಒದಗಿಸುತ್ತದೆ. ಅತ್ಯುತ್ತಮ ಕ್ಷೇತ್ರ ಅಧ್ಯಯನಗಳನ್ನು ಒದಗಿಸುತ್ತದೆ. ಆ ಮೂಲಕ ಉದ್ಯೋಗಿಗಳ ಪ್ರತಿಭೆಯನ್ನು ಬೆಳೆಸುವುದು ಹೇಗೆ ಎಂಬುದನ್ನು ತಿಳಿಯಲು ಅವಕಾಶ ಮಾಡಿಕೊಡುತ್ತದೆ.

ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಜನರೇಟಿವ್ ಎ.ಐ ಶಕ್ತಿ ಬಳಸಿಕೊಂಡಿರುವ ವ್ಯಕ್ತಿಗಳ ಜೊತೆ ಸಂಪರ್ಕ ಮತ್ತು ಸಂವಹನ ಸಾಧಿಸುವ ಅವಕಾಶವನ್ನೂ ಗ್ರಾಹಕರು ಇಲ್ಲಿ ಪಡೆಯಬಹುದಾಗಿದೆ.

‘ಇದು ಗ್ರಾಹಕರಿಗೆ ಹೂಡಿಕೆ, ಕಾರ್ಯಾಚರಣೆ ಮತ್ತು ಜಂಟಿ ಉತ್ಪನ್ನಗಳ ವಿತರಣೆಗೆ ಅವಕಾಶ ಒದಗಿಸುವ ಮೂಲಕ ಐಬಿಎಂ ಕನ್ಸಲ್ಟಿಂಗ್ ಮತ್ತು ಮೈಕ್ರೊಸಾಫ್ಟ್ನ ಬದ್ಧತೆಗೆ ಈ ವಲಯವು ಸಾಕ್ಷಿಯಾಗಿದೆ’ ಎಂದು ಐಬಿಎಂ ಕನ್ಸಲ್ಟಿಂಗ್ನ ಗ್ಲೋಬಲ್ ಡೆಲಿವರಿ ವ್ಯವಸ್ಥಾಪಕ ಪಾಲುದಾರ ಅಮಿತ್ ಶರ್ಮಾ ತಿಳಿಸಿದ್ದಾರೆ.

ಈ ವಲಯವು ಗ್ರಾಹಕರಿಗೆ ಎರಡೂ ಸಂಸ್ಥೆಗಳ ಉತ್ಪನ್ನಗಳ ಜಗತ್ತಿಗೆ ಪ್ರವೇಶಿಸಲು ಅವಕಾಶ ಕಲ್ಪಿಸುತ್ತದೆ. ಅವರ ಉದ್ಯಮವನ್ನು ಬೆಳೆಸಲು ನೆರವಾಗಬಲ್ಲ ತಜ್ಞರೊಂದಿಗೆ ಸಂವಾದ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.