ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ಬಳಿಕ ಮಾಸ್ಕ್ ಬಳಕೆ ಅನಿವಾರ್ಯವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ವಿಧವಿಧದ ಮಾಸ್ಕ್ ಕೂಡ ಲಭ್ಯವಿದೆ.

ಎಲ್‌ಜಿ ಎಲೆಕ್ಟ್ರಾನಿಕ್ಸ್, ಅತ್ಯಾಧುನಿಕ ವೈಶಿಷ್ಟ್ಯ ಸಹಿತ ಫೇಸ್‌ಮಾಸ್ಕ್ ಬಿಡುಗಡೆ ಮಾಡಿದೆ. ಏರ್ ಪ್ಯೂರಿಫೈಯರ್, ಬಿಲ್ಟ್ ಇನ್ ಮೈಕ್ ಮತ್ತು ಸ್ಪೀಕರ್ ಇರುವ ಮಾಸ್ಕ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಎಲ್‌ಜಿ ಪ್ಯೂರಿಕೇರ್ ಮಾಸ್ಕ್ ಅನ್ನು ಪೂರ್ತಿ ಚಾರ್ಜ್ ಮಾಡಿದರೆ, ಎಂಟು ಗಂಟೆಗಳ ಕಾಲ ಬಳಕೆ ಮಾಡಬಹುದು. 1000mAh ಬ್ಯಾಟರಿ ಇದರಲ್ಲಿದ್ದು, ಯುಎಸ್‌ಬಿ ಕೇಬಲ್ ಮೂಲಕ ಎರಡು ಗಂಟೆಯಲ್ಲಿ ಚಾರ್ಜ್ ಮಾಡಬಹುದು.

ದೇಶದಲ್ಲಿ ನೂತನ ಮಾಸ್ಕ್ ದರವನ್ನು ಎಲ್‌ಜಿ ಇನ್ನಷ್ಟೇ ಪ್ರಕಟಿಸಬೇಕಿದೆ.

ನೂತನ ಒಪ್ಪೊ 5G ಸ್ಮಾರ್ಟ್ಫೋನ್ ಬಿಡುಗಡೆ: ದೇಶದಲ್ಲಿ ಬೆಲೆ ಎಷ್ಟಿದೆ?

ಹೊಸ ಮಾಸ್ಕ್‌ನಲ್ಲಿ ಮೈಕ್ ಮತ್ತು ಪುಟ್ಟ ಸ್ಪೀಕರ್ ಕೂಡ ಇರುವುದರಿಂದ, ಮಾತನಾಡುವ ಸಂದರ್ಭದಲ್ಲಿ ಮಾಸ್ಕ್ ತೆಗೆಯಬೇಕಾದ ಅಗತ್ಯವಿಲ್ಲ. ಅಲ್ಲದೆ, ಮುಂದೆ ಇರುವ ಕೇಳುಗರಿಗೂ ನಿಮ್ಮ ಮಾತು ಸ್ಪಷ್ಟವಾಗಿ ಕೇಳಲಿದೆ ಎಂದು ಎಲ್‌ಜಿ ತಿಳಿಸಿದೆ.

ಹೆಲಿಕ್ಸ್ ಸ್ಮಾರ್ಟ್ವಾಚ್ 2.0 ಬಿಡುಗಡೆ ಮಾಡಿದ ಟೈಮೆಕ್ಸ್: ಬೆಲೆ ವಿವರ ಇಲ್ಲಿದೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.