ಬೆಂಗಳೂರು: ಸ್ಮಾರ್ಟ್‌ಫೋನ್ ತಯಾರಿಸುವ ಪ್ರಮುಖ ಕಂಪನಿ ರಿಯಲ್‌ಮಿ ದೇಶದ ಮಾರುಕಟ್ಟೆಗೆ ಹೊಸ ರಿಯಲ್‌ಮಿ ಎಕ್ಸ್7 ಮ್ಯಾಕ್ಸ್ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಜೂನ್ 4ರಿಂದ ಇದರ ಮಾರಾಟ ಆರಂಭವಾಗಲಿದೆ.

8GB+128GB ಸಾಮರ್ಥ್ಯದ ಹ್ಯಾಂಡ್‌ಸೆಟ್ ಬೆಲೆ ₹ 26,999 ಹಾಗೂ 12GB+256GB ಸಾಮರ್ಥ್ಯದ ಹ್ಯಾಂಡ್‌ಸೆಟ್ ಬೆಲೆ ₹ 29,999.

5ಜಿ ಬೆಂಬಲಿಸುವ ಮೀಡಿಯಾಟೆಕ್ ಡೈಮೆನ್ಸಿಟಿ 12.00 ಚಿಪ್‌ಸೆಟ್ ಹೊಂದಿರುವ ಭಾರತದ ಮೊದಲ ಸ್ಮಾರ್ಟ್‌ಫೋನ್ ಇದು ಎಂದು ಕಂಪನಿ ಹೇಳಿಕೊಂಡಿದೆ. 6.43 ಇಂಚಿನ 120ಹರ್ಟ್ಸ್ ಸೂಪರ್ ಅಮೊಎಲ್‌ಇಡಿ ಫುಲ್ ಸ್ಕ್ರೀನ್, 4,500 ಎಂಎಎಚ್ ಬ್ಯಾಟರಿ, 50ಡಬ್ಲ್ಯು ಸೂಪರ್ ಡಾರ್ಟ್ ಚಾರ್ಜರ್, ಸೋನಿ 64 ಎಂಪಿ ಟ್ರಿಪಲ್ ಕ್ಯಾಮೆರಾ, 16ಎಂಪಿ ಇನ್‌ಡಿಸ್‌ಪ್ಲೇ ಸೆಲ್ಫಿ ಕ್ಯಾಮೆರಾ ಇದರ ಪ್ರಮುಖ ಆಕರ್ಷಣೆ ಆಗಿದೆ.

ಈ ಸ್ಮಾರ್ಟ್‌ಫೋನ್ ಸೂಪರ್‌ಡಾರ್ಟ್ ಚಾರ್ಜ್ ಸೌಲಭ್ಯ ಹೊಂದಿದ್ದು, ಬ್ಯಾಟರಿಯು ಶೇಕಡ 50ರಷ್ಟು ಚಾರ್ಜ್ ಆಗಲು ಕೇವಲ 16 ನಿಮಿಷ ಸಾಕು ಎಂದು ಕಂಪನಿ ತಿಳಿಸಿದೆ.

ಎಕ್ಸ್ ಸರಣಿಯ ಮೂಲಕ ಹಲವು ಹೊಸ ತಂತ್ರಜ್ಞಾನಗಳನ್ನು ಮತ್ತು ಆಕರ್ಷಕ ವಿನ್ಯಾಸದ ಸ್ಮಾರ್ಟ್‌ಪೋನ್‌ಗಳನ್ನುಕಂಪನಿಯು ಪರಿಚಯಿಸಿದೆ. 5ಜಿ ಕ್ಷೇತ್ರದಲ್ಲಿ ಮುಂಚೂಣಿಗೆ ಬರುವ ಗುರಿಯೊಂದಿಗೆ ರಿಯಲ್‌ಮಿ ಎಕ್ಸ್7 ಮ್ಯಾಕ್ಸ್ 5ಜಿ ಬಿಡುಗಡೆ ಮಾಡಲಾಗಿದೆ ಎಂದು ರಿಯಲ್‌ಮಿ ಇಂಡಿಯಾದ ಸಿಇಒ ಮಾಧವ್ ಸೇಠ್ ತಿಳಿಸಿದರು.

ಒನ್ಪ್ಲಸ್ 9 ಪ್ರೊ ವೇಗದಲ್ಲೂ ಚಿತ್ರದಲ್ಲೂ ಸ್ಮಾರ್ಟ್

ಸ್ಮಾರ್ಟ್ ಟಿವಿ: ಕಂಪನಿಯು ‘ರಿಯಲ್‌ಮಿ ಸ್ಮಾರ್ಟ್ ಟಿವಿ 4ಕೆ’ ಸಹ ಬಿಡುಗಡೆ ಮಾಡಿದೆ. 43 ಇಂಚು ಮತ್ತು 50 ಇಂಚುಗಳ ಆಯ್ಕೆಗಳಲ್ಲಿ ಲಭ್ಯವಿದ್ದು, ಬೆಲೆ ₹ 27,999ರಿಂದ ಆರಂಭವಾಗುತ್ತದೆ. ಇದು ಸಹ ಜೂನ್ 4ರಿಂದ ಖರೀದಿಗೆ ಲಭ್ಯವಾಗಲಿದೆ.

ಉತ್ತಮ ಕ್ಯಾಮೆರಾ, ಭರ್ಜರಿ ಬ್ಯಾಟರಿ: ಒಪ್ಪೋ ಎಫ್19

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.