ಗೂಗಲ್ ಕಂಪನಿಯು ಮೇ ತಿಂಗಳಲ್ಲಿ ನಡೆದ ಡೆವಲಪರ್ಗಳ ಸಮಾವೇಶದಲ್ಲಿ ಮಾಡಿದ್ದ ಪ್ರಮುಖವಾದ ಕೆಲವು ಘೋಷಣೆಗಳನ್ನು ಕಾರ್ಯರೂಪಕ್ಕೆ ತರಲು ಆರಂಭಿಸಿದೆ. ಅಂದರೆ, ಆ್ಯಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಮಾರ್ಟ್ಫೋನ್ಗಳ ಕಳ್ಳತನ ಆದಾಗ, ಆ ಫೋನ್ನಲ್ಲಿ ಇರುವ ಖಾಸಗಿ ದತ್ತಾಂಶಗಳನ್ನು ಅದರ ಮಾಲೀಕರು ರಕ್ಷಿಸಿಕೊಳ್ಳಲು ಒಂದು ಅವಕಾಶವನ್ನು ಗೂಗಲ್ ಈಗ ಕಲ್ಪಿಸಿದೆ. ಮೇ ತಿಂಗಳಲ್ಲಿ ಗೂಗಲ್ ಹೇಳಿದ್ದ ಹೊಸ ಆಯ್ಕೆಗಳು ಈಗ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿಗೆ ಲಭ್ಯವಾಗಲು ಆರಂಭವಾಗಿದೆ ಎಂದು ವರದಿಗಳು ಹೇಳುತ್ತಿವೆ. ಆ್ಯಂಡ್ರಾಯ್ಡ್ 10 ಹಾಗೂ ಅದರ ನಂತರದ ಆವೃತ್ತಿಗಳು ಇರುವ ಸ್ಮಾರ್ಟ್ಫೋನ್ಗಳಿಗೆ ಈ ವೈಶಿಷ್ಟ್ಯಗಳು ಲಭ್ಯವಾಗಲಿವೆ ಎಂದು ಗೂಗಲ್ ಈ ಹಿಂದೆಯೇ ಹೇಳಿದೆ.

ಸ್ಮಾರ್ಟ್ಫೋನ್ ಕಳ್ಳತನ ಆಗುವುದನ್ನು ಅರಗಿಸಿಕೊಳ್ಳುವುದು ಎಲ್ಲರಿಗೂ ಸುಲಭದ ಸಂಗತಿಯಲ್ಲ. ಕಳ್ಳತನವಾದಾಗ, ಫೋನ್ ಖರೀದಿಸಲು ವಿನಿಯೋಗಿಸಿದ್ದ ಹಣ ವ್ಯರ್ಥವಾಗಿಬಿಡುತ್ತದೆ ಎಂಬುದಷ್ಟೇ ಇಲ್ಲಿ ಗಮನಿಸಬೇಕಾದ ಸಂಗತಿಯಲ್ಲ. ಬದಲಿಗೆ, ಫೋನ್ನಲ್ಲಿ ಇರುವ, ಹಣಕ್ಕಿಂತಲೂ ಅಮೂಲ್ಯವಾದ ದತ್ತಾಂಶಗಳು ಕಳ್ಳನ ಕೈಗೆ ಸಿಗುತ್ತವೆ. ಅದನ್ನು ಆತ ಹೇಗೆ ಬೇಕಿದ್ದರೂ ಬಳಸಿಕೊಳ್ಳಬಲ್ಲ.

ʼಅನುಮಾನಕ್ಕೆ ಎಡೆಮಾಡಿಕೊಡುವ ಸೂಚನೆಗಳನ್ನು ಸ್ವಯಂಚಾಲಿತವಾಗಿ ಗುರುತಿಸಿ, ಫೋನ್ನಲ್ಲಿ ಇರುವ ದತ್ತಾಂಶವನ್ನು ರಕ್ಷಿಸುವ ವೈಶಿಷ್ಟ್ಯಗಳನ್ನು ನಾವು ರೂಪಿಸಿದ್ದೇವೆ. ಫೋನ್ಅನ್ನು ಕಳ್ಳರು ಕಸಿದುಕೊಂಡಾಗ ಫೋನ್ನ ಪರದೆಯನ್ನು ಲಾಕ್ ಮಾಡುವ, ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ವ್ಯವಸ್ಥೆಯೊಂದನ್ನು ರೂಪಿಸಲಾಗಿದೆ. ಗೂಗಲ್ನ ಕೃತಕ ಬುದ್ಧಿಮತ್ತೆಯು, ನಿಜ ಬಳಕೆದಾರರ ಕೈಯಿಂದ ಕಳ್ಳನು ಫೋನ್ ಕಿತ್ತುಕೊಂಡು ಓಡಲು ಆರಂಭಿಸಿದಾಗ, ಬೈಕ್ನಲ್ಲಿ ಪರಾರಿಯಾಗಲು ಯತ್ನಿಸಿದಾಗ ಅದನ್ನು ಗುರುತಿಸುತ್ತದೆ. ಕಳ್ಳತನದ ಜೊತೆ ಹೊಂದಿಕೊಂಡಿರುವ ಸಾಮಾನ್ಯವಾದ ಕೆಲವು ಚಲನೆಗಳು ಕಂಡುಬಂದಾಗ, ಫೋನ್ನ ಪರದೆಯು ತಕ್ಷಣ ಲಾಕ್ ಆಗುತ್ತದೆ. ಆಗ ಕಳ್ಳರಿಗೆ ಫೋನ್ನಲ್ಲಿ ಇರುವ ದತ್ತಾಂಶವನ್ನು ಸುಲಭಕ್ಕೆ ಪಡೆದುಕೊಳ್ಳಲು ಆಗುವುದಿಲ್ಲʼ ಎಂದು ಗೂಗಲ್ ವಿವರಣೆ ನೀಡಿದೆ.

ಕಳ್ಳನು ಫೋನ್ ಸಂಪರ್ಕವನ್ನು ಬಹಳ ಹೊತ್ತಿನವರೆಗೆ ಕಡಿತ ಮಾಡಿ ಇರಿಸಿದ್ದರೆ, ಫೋನ್ನ ಮಾಲೀಕರ ದತ್ತಾಂಶವನ್ನು ರಕ್ಷಿಸುವ ಉದ್ದೇಶದಿಂದ ಫೋನ್ ಪರದೆಯು ತಾನಾಗಿಯೇ ಲಾಕ್ ಆಗಿಬಿಡುತ್ತದೆ. ಹೀಗೆ ಆಗಬೇಕು ಎಂದಾದರೆ ಆ ಫೋನ್ ನೆಟ್ವರ್ಕ್ನಲ್ಲಿ ಇದ್ದಿರಬೇಕು ಎಂಬುದೇನೂ ಇಲ್ಲ. ಫೋನ್ ತನ್ನ ನಿಜವಾದ ಮಾಲೀಕನ ಕೈಯಲ್ಲಿ ಇಲ್ಲ ಎಂಬುದನ್ನು ಆ್ಯಂಡ್ರಾಯ್ಡ್ ಗುರುತಿಸಬಲ್ಲದು ಎಂದು ಕೂಡ ಗೂಗಲ್ ಹೇಳಿದೆ.

ಕಳ್ಳತನ ಆದ ಸಂದರ್ಭಗಳಲ್ಲಿ ಮೊಬೈಲ್ನಲ್ಲಿರುವ ದತ್ತಾಂಶದ ರಕ್ಷಣೆಗೆ ಇನ್ನೂ ಒಂದು ಮಹತ್ವದ ವೈಶಿಷ್ಟ್ಯವನ್ನು ಗೂಗಲ್ ನೀಡುತ್ತಿದೆ. ಇದು ಕೂಡ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಸಿಗಲಾರಂಭಿಸಿದೆ ಎಂದು ವರದಿಗಳು ಹೇಳುತ್ತಿವೆ. ಮೊಬೈಲ್ ಕಳ್ಳತನ ಆದಾಗ ಅಥವಾ ಕಳೆದುಹೋದಾಗ, ಫೈಂಡ್ ಮೈ ಡಿವೈಸ್ ಎಂಬ ಆಯ್ಕೆಯನ್ನು ಬಳಸಿ, ಅದರಲ್ಲಿನ ದತ್ತಾಂಶಗಳನ್ನು ಅಳಿಸುವ ಸೌಲಭ್ಯವು ಈಗಾಗಲೇ ಲಭ್ಯ ಇದೆ. ಅದಕ್ಕೆ ಪೂರಕವಾಗಿ ಈಗ ಗೂಗಲ್ ಇನ್ನೂ ಒಂದು ಸೌಲಭ್ಯವನ್ನು ನೀಡಲು ಆರಂಭಿಸಿದೆ.

ಅಂದರೆ, ಫೋನ್ ಕಳ್ಳತನ ಆದ ನಂತರದಲ್ಲಿ ಯಾವುದೇ ಫೋನ್ ಬಳಸಿ, ನಿಮ್ಮ ಫೋನ್ ನಂಬರ್ ಬಳಸಿ, ಕಳುವಾಗಿರುವ ಫೋನ್ನ ಪರದೆಯನ್ನು ಲಾಕ್ ಮಾಡುವ ಸೌಲಭ್ಯ ಇದು. ಈ ಸೌಲಭ್ಯ ಬಳಸಿಕೊಂಡು, ಫೋನ್ ಪರದೆಯನ್ನು ತಕ್ಷಣಕ್ಕೆ ಲಾಕ್ ಮಾಡಿ, ನಂತರ ಫೈಂಡ್ ಮೈ ಡಿವೈಸ್ ಸೌಲಭ್ಯದ ಮೂಲಕ ಫೋನ್ನಲ್ಲಿ ಇರುವ ಎಲ್ಲ ದತ್ತಾಂಶಗಳನ್ನು ಅಳಿಸಿಹಾಕಬಹುದು ಎಂದು ಗೂಗಲ್ ತನ್ನ ಬ್ಲಾಗ್ನಲ್ಲಿ ವಿವರಿಸಿದೆ. ಆದರೆ ಹೊಸ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳುವ ನಿರ್ದಿಷ್ಟ ಪ್ರಕ್ರಿಯೆಯನ್ನು ಅದು ವಿವರಿಸಿಲ್ಲ. ರಿಮೋಟ್ ಲಾಕ್ ವ್ಯವಸ್ಥೆಯ ಆ್ಯಂಡ್ರಾಯ್ಡ್ 10 ಹಾಗೂ ನಂತರದ ಆವೃತ್ತಿಗಳಿಗೆ ಲಭ್ಯ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.