ನವದೆಹಲಿ: ಸೋನಿ ಇಂಡಿಯಾ ಅಲ್ಟ್ (ULT) ಪವರ್ ಸೌಂಡ್ ಸರಣಿಯ 4 ಸಾಧನಗಳನ್ನು ಸೋಮವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಅಲ್ಟಿಮೇಟ್ ಧ್ವನಿಯ ಸರಣಿಯಲ್ಲಿ ವೈರ್ಲೆಸ್ ಸ್ಪೀಕರ್ಗಳಾದ ಯುಎಲ್ಟಿ ಟವರ್ 10, ಯುಎಲ್ಟಿ ಫೀಲ್ಡ್ 7, ಯುಎಲ್ಟಿ ಫೀಲ್ಡ್ 1, ಮತ್ತು ವೈರ್ಲೆಸ್ ಹೆಡ್ಫೋನ್ ಯುಎಲ್ಟಿ ವೇರ್ ಬಿಡುಗಡೆಯಾಗಿವೆ.

ಯುಎಲ್ಟಿ ಟವರ್ 10: ಪ್ರಬಲ ಬೇಸ್ (Bass), 360° ಧ್ವನಿ ಹಾಗೂ ಕರಾವೋಕೆ, ವೈರ್ಲೆಸ್ ಮೈಕ್ ಇದರಲ್ಲಿದ್ದು, ಮನೆಯಲ್ಲಿ ಅಥವಾ ಹಾಲ್ನಲ್ಲಿ ಪಾರ್ಟಿ ಆಯೋಜಿಸಿ ಸಂಗೀತ ಪ್ಲೇ ಮಾಡಲು ಸೂಕ್ತ.

ದೊಡ್ಡ ಗಾತ್ರದ ಈ ಟವರ್ ಸ್ಪೀಕರ್ನಲ್ಲಿ ಯುಎಲ್ಟಿ ಪವರ್ ಸೌಂಡ್ನ ಎರಡು ಮೋಡ್ಗಳಿದ್ದು, ಆಕರ್ಷಕ ಎಲ್ಇಡಿ ಲೈಟ್ಗಳಿವೆ. ಸುತ್ತಮುತ್ತ ಇತರ ಶಬ್ದಗಳಿದ್ದರೂ ಸ್ಪಷ್ಟ ಸಂಗೀತವನ್ನು ಒದಗಿಸಲು ಸ್ವಯಂಚಾಲಿತ ಧ್ವನಿ ವ್ಯವಸ್ಥೆ ಇದೆ.

ಯುಎಲ್ಟಿ ಫೀಲ್ಡ್ 7: ಜಲನಿರೋಧಕ ಮತ್ತು ಧೂಳು ನಿರೋಧಕವಾಗಿರುವ ಈ ಸ್ಪೀಕರ್, ಮನೆಯೊಳಗೆ ಅಥವಾ ಪ್ರವಾಸಕ್ಕೆ ಹೋದಾಗ ಹೊರಾಂಗಣದಲ್ಲೂ ಸಂಗೀತವನ್ನು ಪ್ಲೇ ಮಾಡಲು ಅನುಕೂಲ. ಇದರಲ್ಲೂ ಕರಾವೊಕೆ ಮೈಕ್, ಗಿಟಾರ್ ಇನ್ಪುಟ್ ಇದ್ದು, ಬೇಕಾದಲ್ಲಿಗೆ ಒಯ್ಯಬಹುದು.

30-ಗಂಟೆಯ ಬ್ಯಾಟರಿ ಬಾಳಿಕೆ ಇದ್ದು ವೇಗವಾಗಿ ಚಾರ್ಜ್ ಆಗುತ್ತದೆ.

ಯುಎಲ್ಟಿ ಫೀಲ್ಡ್ 1: ಇದು ಕೂಡ ಜಲನಿರೋಧಕ, ಧೂಳು ನಿರೋಧಕವಾದ ಸಣ್ಣ ವೈರ್ಲೆಸ್ ಸ್ಪೀಕರ್ ಆಗಿದ್ದು ಬೇಕಾದಲ್ಲಿಗೆ ಒಯ್ಯಬಹುದು. 12 ಗಂಟೆ ಬ್ಯಾಟರಿ ಸಾಮರ್ಥ್ಯ ಇದೆ.

ಯುಎಲ್ಟಿ ವೇರ್: ಅತ್ಯುತ್ತಮ ಬೇಸ್ ಮತ್ತು ಪ್ರೀಮಿಯಂ ಆಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ನೊಂದಿಗೆ ಹೊಸ ಯುಎಲ್ಟಿ ವೇರ್ ಹೆಡ್ಫೋನ್ ವೈಯಕ್ತಿಕ ಬಳಕೆಗೆ ಬ್ಲೂಟೂತ್ ಸಂಪರ್ಕಿತ ಹೆಡ್ಫೋನ್.

ನಾಯ್ಸ್ ಕ್ಯಾನ್ಸಲಿಂಗ್ (ಸುತ್ತಮುತ್ತಲಿನ ಸದ್ದು ಕೇಳಿಸದಂತೆ ಮಾಡುವ) ವ್ಯವಸ್ಥೆ, ಅಲ್ಟ್ (ಯುಎಲ್ಟಿ) ಬಟನ್, ಸಂಗೀತದ ಅದ್ಭುತ ಅನುಭೂತಿಗಾಗಿ ಗರಿಷ್ಠ ಬೇಸ್ ಈ ವೈಶಿಷ್ಟ್ಯಗಳೊಂದಿಗೆ ಸೋನಿ ಈ ನಾಲ್ಕು ಉತ್ಪನ್ನಗಳನ್ನು ಮಾರುಕಟ್ಟೆಗಿಳಿಸಿದೆ.

ಬೆಲೆ: ಯುಎಲ್ಟಿ ಟವರ್ 10: ರೂ.89,990.

ಯುಎಲ್ಟಿ ಫೀಲ್ಡ್ 7: ರೂ. 39,990

ಯುಎಲ್ಟಿ ಫೀಲ್ಡ್ 1: ರೂ. 10,990

ಯುಎಲ್ಟಿ ವೇರ್: ರೂ.16,990.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.