ಸ್ಯಾನ್ ಫ್ರಾನ್ಸಿಸ್ಕೊ: ಭಾರತದಲ್ಲಿ 40 ಕೋಟಿಗೂ ಅಧಿಕ ಬಳಕೆದಾರರಿರುವ ಅತ್ಯಂತ ಜನಪ್ರಿಯ ಮೆಸೆಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಹೊಸವರ್ಷದಿಂದ ಕೆಲವು ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಬಹುತೇಕ ಎಲ್ಲಾ ವಯೋಮಾನದವರು ವಾಟ್ಸ್ಆ್ಯಪ್ ಮೆಸೆಜಿಂಗ್ ಆ್ಯಪ್ನ ಗೀಳು ಹಿಡಿಸಿಕೊಂಡಿದ್ದಾರೆ. ಅಪ್ಡೇಟ್ಗಳನ್ನು ಮಾಡುವ ಮೂಲಕ ಇದು ಜನರಿಗೆ ಹತ್ತಿರವಾಗುತ್ತಲೇ ಇದೆ. ಹೀಗಿರುವಾಗ ಡಿಸೆಂಬರ್ 31ರಿಂದ ಕೆಲವು ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸ್ಆ್ಯಪ್ ಸಪೋರ್ಟ್ ಮಾಡುವುದಿಲ್ಲ ಎನ್ನುವುದು ಅನೇಕರಿಗೆ ಶಾಕಿಂಗ್ ಸುದ್ದಿಯಾಗಲಿದೆ.

ಐಒಎಸ್, ಹಳೆಆ್ಯಂಡ್ರಾಯಿಡ್ನಲ್ಲಿಇರಲ್ಲ

ಐಒಎಸ್, ಹಳೆಯ ಆ್ಯಂಡ್ರಾಯಿಡ್ ಫೋನ್ಗಳನ್ನು ಬಳಸುತ್ತಿದ್ದರೆ, ಫೆಬ್ರುವರಿ ನಂತರ ನಿಮ್ಮ ಫೋನ್ಗಳಲ್ಲಿ ವಾಟ್ಸ್ಆ್ಯಪ್ ಕೆಲಸ ಮಾಡುವುದಿಲ್ಲ. ಆ್ಯಂಡ್ರಾಯ್ಡ್ 2.3.7 ಆಪರೇಟಿಂಗ್ ಸಿಸ್ಟಮ್, ಐಒಎಸ್ 8 ಹಾಗೂ ಅದಕ್ಕಿಂತ ಕಡಿಮೆ ಒಎಸ್ ಹೊಂದಿರುವ ಫೋಸ್ಗಳಿಗೆ ವಾಟ್ಸ್ಆ್ಯಪ್ ಸಹಕರಿಸುವುದಿಲ್ಲ.

ವಾಟ್ಸ್ಆ್ಯಪ್ ನವೀಕರಿಸುತ್ತಿರುವುದರ ಜೊತೆಗೆ ಕೆಲವು ಅಪರೇಟಿಂಗ್ ಸಿಸ್ಟಂಗಳಿಗೆ ಸಪೋರ್ಟ್ ಮಾಡುವಂತಹ ಬೆಂಬಲವನ್ನು ವಾಟ್ಸ್ಆ್ಯಪ್ ಹಿಂಪಡೆಯುತ್ತಿದೆ.

ಹೊಸ ಖಾತೆ ರೂಪಿಸಲು ಆಗಲ್ಲ:ಮೇಲೆ ಹೇಳಿರುವ ಹಳೆ ಆವೃತ್ತಿಯ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಫೋನ್ಗಳಲ್ಲಿ ಈಗಾಗಲೇ ಇರುವ ವಾಟ್ಸ್ಆ್ಯಪ್ ಖಾತೆಯನ್ನು ಮರುಪರಿಶೀಲಿಸಲು ಸಾಧ್ಯವಿಲ್ಲ ಮತ್ತು ಹೊಸ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ ಎಂದು ಆ್ಯಪ್ ಪ್ರಶ್ನೋತ್ತರ(FAQ) ವಿಭಾಗದಲ್ಲಿ ವಿವರಿಸಿದ್ದಾರೆ.

ಫೇಸ್ಬುಕ್ ಮಾಲಿಕತ್ವದ ಈ ಮೆಸೆಂಜಿಗ್ ಆ್ಯಪ್ ಜಿಯೊ ಫೋನ್ ಮತ್ತು ಜಿಯೊ ಫೋನ್ 2 ಸೇರಿ KaiOS 2.5.1+ ಒಎಸ್ನಲ್ಲಿ ವಾಟ್ಸ್ಆ್ಯಪ್ ಕಾರ್ಯನಿರ್ವಹಿಸಲಿದೆ.

ವಿಂಡೋಸ್ ಫೋನ್ಗಳಲ್ಲಿ ಡಿ.31ರಿಂದಲೇ ಇಲ್ಲ

ವಿಂಡೋಸ್ ಫೋನ್ಗೆ ನೀಡಿದ್ದ ಬೆಂಬಲವನ್ನು ವಾಟ್ಸ್ಆ್ಯಪ್ ಹಿಂಪಡೆದಿರುವುದರಿಂದ ಜನವರಿ 1 ಲೇ ಈ ಫೋನ್ಗಳಲ್ಲಿ ವಾಟ್ಸ್ಆ್ಯಪ್ ಬಳಸಲು ಸಾಧ್ಯವಿಲ್ಲ.

ಇದೇನು ಸುಲಭದ ನಿರ್ಧಾರವಾಗಿರಲಿಲ್ಲ. ಆದರೆ, ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ಸ್ನೇಹಿತರು, ಕುಟುಂಬದವರು ಮತ್ತು ಪ್ರೀತಿಪಾತ್ರರೊಂದಿಗೆ ಸಂಪರ್ಕ ಹೊಂದಲು ಉತ್ತಮ ಅವಕಾಶನೀಡುವ ಸಲುವಾಗಿ ಇದು ಅನಿವಾರ್ಯ ಎಂದು ವಾಟ್ಸ್ಆ್ಯಪ್ ಹೇಳಿದೆ. ಜೊತೆಗೆಹೆಚ್ಚು ಜನರಿಗೆ ಇದು ತೊಂದರೆಯಾಗುವುದಿಲ್ಲ ಎಂದೂ ತಿಳಿಸಿದೆ.

ಚಾಟ್ ಉಳಿಸಿಕೊಳ್ಳಲು ಹೀಗೆ ಮಾಡಿ

ನಿಮ್ಮ ಬಳಿ ವಿಂಡೊಸ್ ಸ್ಮಾರ್ಟ್ಫೋನ್ ಇದ್ದು, ಈ ಹಿಂದಿನವಾಟ್ಸ್ಆ್ಯಪ್ ಚಾಟ್ಗಳನ್ನು ಕಳೆದುಕೊಳ್ಳಲು ಇಷ್ಟವಿಲ್ಲದವರು ಹೀಗೆ ಮಾಡಬಹುದು.

ಯಾರ ವಾಟ್ಸ್ಆ್ಯಪ್ ಚಾಟ್ ಅನ್ನು ನೀವು ಉಳಿಸಿಕೊಳ್ಳಬೇಕು ಎನ್ನುತ್ತೀರೊ ಅದನ್ನು ತೆರೆದು, ಗ್ರೂಪ್ ಇನ್ಫರ್ಮೇಷನ್ ಮೇಲೆ ಕ್ಲಿಕ್ ಮಾಡಿ. ಆಮೇಲೆ Export Chat ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ download the chat with or without media ಎಂಬ ಆಯ್ಕೆ ಕಾಣುತ್ತದೆ. ನಿಮಗೆ ಯಾವುದು ಬೇಕೊ ಅದನ್ನು ಆಯ್ಕೆ ಮಾಡಿ, export ಮಾಡಿ.

ಇದೇನು ಮೊದಲಲ್ಲ:ಕಳೆದ ವರ್ಷದ ಅಂತ್ಯದಲ್ಲಿಯೂ ವಾಟ್ಸ್ಆ್ಯಪ್,ನೋಕಿಯಾ ಎಸ್40 ಆಪರೇಟಿಂಗ್ ಸಿಸ್ಟಂ ಇರುವ ಫೋನ್ಗಳಿಂದಬೆಂಬಲ ಹಿಂಪಡೆದಿತ್ತು.

ಯಾವೆಲ್ಲ ಫೋನ್ಗಳಲ್ಲಿ ವಾಟ್ಸ್ಆ್ಯಪ್ ಇರಲ್ಲ

* ಆ್ಯಂಡ್ರಾಯ್ಡ್ 2.3.7 ಮತ್ತು ಹಳೆಯ ಆವೃತ್ತಿ

* ಐಒಎಸ್ 8 ಮತ್ತು ಅದಕ್ಕಿಂತ ಹಳೆಯ ಆವೃತ್ತಿ

*ಎಲ್ಲಾ ವಿಂಡೋಸ್ ಫೋನ್ (ಡಿಸೆಂಬರ್ 31ರ ನಂತರ)

ಯಾವೆಲ್ಲ ಫೋನ್ಗಳಿಗೆ ಸಪೋರ್ಟ್ ಮಾಡುತ್ತದೆ

*ಆ್ಯಂಡ್ರಾಯ್ಡ್ 4.0.3+

* ಐಒಎಸ್ 9+

* ಜಿಯೊ ಮತ್ತು ಜಿಯೊ 2 ಸೇರಿದಂತೆ KaiOS 2.5.1+ ಹೊಂದಿರುವ ಫೋನ್ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.