ವಾಟ್ಸ್ಆ್ಯಪ್ ಸಂದೇಶ: ಬ್ಯಾಕ್ಅಪ್ ಮತ್ತು ಹೊಸ ಫೋನ್‌ಗೆ ವರ್ಗಾವಣೆ ಮಾಡುವುದು ಹೇಗೆ?
ಸಂವಹನ ಆ್ಯಪ್ ಅಥವಾ ಸಾಮಾಜಿಕ ಮಾಧ್ಯಮದ ವಾಟ್ಸ್ಆ್ಯಪ್ ಅನ್ನು ಬಳಸುತ್ತಿರುವ ಬಹುತೇಕರಿಗೆ, ಫೋನ್ ಬದಲಾಯಿಸಬೇಕಾದಾಗ ಅದರಲ್ಲಿ ಬಂದಿರುವ ಪ್ರಮುಖ ಸಂದೇಶಗಳು, ಫೊಟೋ ಅಥವಾ ವಿಡಿಯೊಗಳನ್ನು ಕಳೆದುಕೊಳ್ಳಲು ಇಷ್ಟ ಇರುವುದಿಲ್ಲ. ಮುಂದಕ್ಕೂ ಉಪಯೋಗಕ್ಕೆ ಬರುವಂತಹ ಅವುಗಳನ್ನು ಕಾಯ್ದಿಟ್ಟುಕೊಳ್ಳಬೇಕು ಎಂದುಕೊಳ್ಳುವವರಿಗೆ ಇಲ್ಲಿದೆ ಸಲಹೆ. ವಾಟ್ಸ್ಆ್ಯಪ್ ಚಾಟ್‌ಗಳನ್ನು, ಸಂದೇಶಗಳನ್ನು ಹೇಗೆ ಬೇರೆ ಫೋನ್‌ಗೆ ವರ್ಗಾಯಿಸುವುದು ಅಂತ ಹಲವು ಸ್ನೇಹಿತರು ಆಗಾಗ್ಗೆ ಕೇಳುವುದಿದೆ. ಕೆಲವರಿಗೆ ಗೊತ್ತಿದೆ, ಹಲವರಿಗೆ ತಿಳಿದಿಲ್ಲ. ಈಗಷ್ಟೇ ಸ್ಮಾರ್ಟ್‌ಫೋನ್ ತಲುಪುತ್ತಿರುವ ಗ್ರಾಮೀಣ ಬಳಕೆದಾರರಷ್ಟೇ ಅಲ್ಲದೆ, ನಗರದಲ್ಲಿರುವ ಅನೇಕರೂ ಇದು ಹೇಗೆ ಅಂತ ಪ್ರಶ್ನಿಸಿದ್ದಾರೆ. ಅಂಥವರು ಇದನ್ನು ಓದಿ, ಅಗತ್ಯವಿದ್ದವರಿಗೆ ಹೇಳಿಕೊಡಬಹುದು.Last Updated 7 ಜೂನ್ 2022, 12:27 IST