ನವದೆಹಲಿ: ಶಓಮಿ ಭಾರತದಲ್ಲಿ ಎರಡು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಗುರುವಾರ ಅನಾವರಣಗೊಳಿಸಿದೆ. 5ಜಿ ತಂತ್ರಜ್ಞಾನ ಮತ್ತು ಅತಿ ವೇಗದ ಚಾರ್ಜಿಂಗ್ ವ್ಯವಸ್ಥೆ ಹೊಂದಿರುವ ಶಓಮಿ 11ಐ ಸರಣಿಯ ಫೋನ್‌ಗಳ ಕುರಿತು ವಿವರ ಇಲ್ಲಿದೆ.

6ಜಿಬಿ ರ್‍ಯಾಮ್ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯದ 'ಶಓಮಿ 11ಐ ಹೈಪರ್‌ಚಾರ್ಜ್ 5ಜಿ' ಫೋನ್‌ಗೆ ₹26,999 ಬೆಲೆ ನಿಗದಿಯಾಗಿದೆ. ಇದೇ ಮಾದರಿಯ 8ಜಿಬಿ ರ್‍ಯಾಮ್ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್ ಬೆಲೆ ₹28,999 ಇದೆ. ಬಿಡುಗಡೆಯಾಗಿರುವ ಮತ್ತೊಂದು ಮಾದರಿ 'ಶಓಮಿ 11ಐ 5ಜಿ' ಹೈಪರ್‌ಚಾರ್ಜ್ ಮಾದರಿಗಿಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ. ಇದರ 6ಜಿಬಿ ರ್‍ಯಾಮ್ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್‌ಗೆ ₹24,999 ಹಾಗೂ 8ಜಿಬಿ ರ್‍ಯಾಮ್ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯದ ಫೋನ್‌ಗೆ ₹26,999 ನಿಗದಿಯಾಗಿದೆ.

ಜನವರಿ 12ರಿಂದ ಎಂಐ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಹಾಗೂ ಕೆಲವು ರಿಟೇಲ್ ಮಳಿಗೆಗಳಲ್ಲಿಯೂ ಈ ಫೋನ್‌ಗಳು ಖರೀದಿಗೆ ಸಿಗಲಿವೆ.

120ವ್ಯಾಟ್ ಹೈಪರ್‌ಚಾರ್ಜ್ ತಂತ್ರಜ್ಞಾನ, 120 ಹರ್ಟ್ಸ್ ರಿಫ್ರೆಷ್ ರೇಟ್‌ನ ಅಮೊಲೆಡ್ ಡಿಸ್‌ಪ್ಲೇ, 108ಎಂಪಿ ಕ್ಯಾಮೆರಾ ಹಾಗೂ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 920 ಪ್ರೊಸೆಸರ್ 'ಶಓಮಿ 11ಐ ಹೈಪರ್‌ಚಾರ್ಜ್ 5ಜಿ' ಫೋನ್‌ನ ವಿಶೇಷ ಎಂದು ಕಂಪನಿ ಹೇಳಿಕೊಂಡಿದೆ. ಈ ಫೋನ್‌ನ ಬ್ಯಾಟರಿ ಕೇವಲ 15 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ.

ಶಓಮಿ 11ಐ ಹೈಪರ್‌ಚಾರ್ಜ್ 5ಜಿ ಫೋನ್‌ನ ಗುಣಲಕ್ಷಣಗಳು:

* 6.67 ಇಂಚು ಫುಲ್ ಎಚ್‌ಡಿ+ಸೂಪರ್ ಅಮೊಲೆಡ್ ಡಿಸ್‌ಪ್ಲೇ
* ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್
* 6ಜಿಬಿ ಅಥವಾ 8ಜಿಬಿ ರ್‍ಯಾಮ್ ಹಾಗೂ 128ಜಿಬಿ ಸಂಗ್ರಹ ಸಾಮರ್ಥ್ಯ
* ಹಿಂಬದಿಯಲ್ಲಿ 3 ಕ್ಯಾಮೆರಾಗಳು: 108 ಎಂಪಿ ಸ್ಯಾಮ್‌ಸಂಗ್ ಎಎಂ2 ಸೆನ್ಸರ್, 8ಎಂಪಿ ಅಲ್ಟ್ರಾವೈಡ್ ಲೆನ್ಸ್ ಹಾಗೂ 2ಎಂಪಿ ಮ್ಯಾಕ್ರೊ ಲೆನ್ಸ್. ಸೆಲ್ಫಿಗಾಗಿ 16ಎಂಪಿ ಕ್ಯಾಮೆರಾ ಇದೆ.
* 4,500ಎಂಎಎಚ್ ಡ್ಯೂಯಲ್ ಸೆಲ್ ಲಿಥಿಯಂ ಪಾಲಿಮರ್ ಬ್ಯಾಟರಿ + 120ವ್ಯಾಟ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ
* ಆ್ಯಂಡ್ರಾಯ್ಡ್ 11 ಒಎಸ್

ಶಓಮಿ 11ಐ 5ಜಿ ಫೋನ್‌ನಲ್ಲಿ ಏನು ಬದಲಾವಣೆ?

ಶಓಮಿ 11ಐ ಹೈಪರ್‌ಚಾರ್ಜ್ 5ಜಿ ರೀತಿಯದ್ದೇ ವಿನ್ಯಾಸ ಮತ್ತು ಬಹುತೇಕ ಒಂದೇ ರೀತಿಯ ಹಾರ್ಡ್‌ವೇರ್ ಇದೆ. ಆದರೆ, ಇದರಲ್ಲಿ 5,160ಎಂಎಎಚ್ ಬ್ಯಾಟರಿ ಮತ್ತು 67ವ್ಯಾಟ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.