ಸ್ಮಾರ್ಟ್‌ಸಾಧನಗಳನ್ನು ಮಾರಾಟ ಮಾಡುವ ಬೌಲ್ಟ್ ಕಂಪನಿಯು ಈಚೆಗಷ್ಟೇ ‘ಬೌಲ್ಟ್ ರೋವರ್’ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಸಾಂಪ್ರದಾಯಿಕ ನೋಟವನ್ನು ಹೊಂದಿರುವ ಇದು ಬ್ಲುಟೂತ್ ಕಾಲಿಂಗ್ ಸೇರಿದಂತೆ ಹಲವು ಫಿಟ್‌ನೆಸ್ ಆಯ್ಕೆಗಳನ್ನು ಒಳಗೊಂಡ ಸ್ಮಾರ್ಟ್‌ವಾಚ್ ಆಗಿದೆ. ಬೆಲೆ ₹2,999. ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ಜಾಲತಾಣದಲ್ಲಿ ಖರೀದಿಸಬಹುದು.

ಬೌಲ್ಟ್ ರೋವರ್ ವೃತ್ತಾಕಾರದ ಡಯಲ್ ಹೊಂದಿದ್ದು ಬಲಗಡೆ ಎರಡು ಬಟನ್‌ಗಳಿವೆ. 1.3 ಇಂಚು ಎಚ್‌ಡಿ ಅಮೊಎಲ್‌ಇಡಿ ಪ್ಯಾನಲ್ 600 ನೈಟ್ಸ್ ಬ್ರೈಟ್‌ನೆಸ್ ಹೊಂದಿದೆ. ಕಪ್ಪು, ಆಕಾಶನೀಲಿ ಮತ್ತು ಹಸಿರು ಹೀಗೆ ಮೂರು ಬಣ್ಣಗಳ ಬೆಲ್ಟ್‌ಗಳಿವೆ.

ಬ್ಲುಟೂತ್ 5.2 ಆವೃತ್ತಿ ಹೊಂದಿದ್ದು, ಮೊಬೈಲ್ ಜೊತೆ ಸುಲಭವಾಗಿ ಸಂಪರ್ಕಿಸಬಹುದು. ಕಾಲಿಂಗ್ ಆಯ್ಕೆಗಾಗಿ ಇನ್‌ಬಿಲ್ಟ್ ಸ್ಪೀಕರ್ ಮತ್ತು ಮೈಕ್ರೊಫೋನ್ ಇದೆ. ಕರೆ ಮಾಡಿದವರ ಧ್ವನಿಯು ಸ್ಪಷ್ಟವಾಗಿ ಕೇಳಿಸುತ್ತದೆ. ಫೋನ್ ನಮ್ಮಿಂದ 10 ಮೀಟರ್ ವ್ಯಾಪ್ತಿಯೊಳಗೆ ಎಲ್ಲೇ ಇಟ್ಟಿದ್ದರೂ ಕಾಲ್ ಬಂದಾಗ ವಾಚ್ ಮೂಲಕವೇ ರಿಸೀವ್ ಮಾಡಿ ಮಾತನಾಡಬಹುದು. ಅದೇ ರೀತಿಯಲ್ಲಿ ವಾಚ್ ಮೂಲಕವೇ ಕಾಲ್ ಮಾಡಲು ಸಾಧ್ಯ. ಆ್ಯಪ್ ಜೊತೆ ಸಂಪರ್ಕಿಸಿದ ಬಳಿಕ ಹೆಚ್ಚು ಬಳಸಿದ ಕಾಂಟ್ಯಾಕ್ಟ್ ನಂಬರ್ ಗಳನ್ನು ವಾಚ್‌ಗೆ ಆ್ಯಡ್ ಮಾಡಬಹುದು.

ಪೂರ್ತಿ ಚಾರ್ಜ್ ಆಗಲು 2.5 ಗಂಟೆ ಬೇಕು. ಒಮ್ಮೆ ಚಾರ್ಜ್ ಮಾಡಿದರೆ 10 ದಿನ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಫೋನ್ ಕಾಲ್ ಆಯ್ಕೆಯನ್ನು ಹೆಚ್ಚಾಗಿ ಬಳಸದೇ ಇದ್ದರೆ 15 ದಿನಗಳವರೆಗೆ ಬ್ಯಾಟರಿ ಚಾರ್ಜ್ ಉಳಿಯುತ್ತದೆ. ಯಾವಾಗಲೂ ಡಿಸ್‌ಪ್ಲೇ ಆನ್ ಇರುವಂತೆ ಮಾಡಿದರೆ ಆಗ ಬ್ಯಾಟರಿ ಬಾಳಿಕೆ ಕಡಿಮೆ ಆಗುತ್ತದೆ. ಕೈಯನ್ನು ಮೇಲಕ್ಕೆ ಎತ್ತಿದಾಗ ಡಿಸ್‌ಪ್ಲೇ ಆನ್ ಆಗುವಂತೆ ವ್ಯವಸ್ಥೆಗೊಳಿಸಿದರೆ ಬ್ಯಾಟರಿ ಬಾಳಿಕೆ ಅವಧಿ ಹೆಚ್ಚಿಸಬಹುದು.

ಫೋನ್ ಫೈಂಡರ್, ಮ್ಯೂಸಿಕ್ ಪ್ಲೇಬ್ಯಾಕ್, ಗೂಗಲ್ ಅಸಿಸ್ಟ್, ಸಿರಿ ತರಹದ ಸ್ಮಾರ್ಟ್ ನೋಟಿಫಿಕೇಷನ್ ಇವೆ. 150+ ಕ್ಲೌಡ್ ವಾಚ್ ಫೇಸ್ ಇದೆ. ನೀರು ಮತ್ತು ದೂಳಿನಿಂದ ರಕ್ಷಣೆ ಒದಗಿಸಲು ಐಪಿ68 ರೇಟಿಂಗ್ಸ್ ಹೊಂದಿದೆ.

ಲಾಂಗ್ ಜಂಪ್, ಸಿಟ್ ಅಪ್ಸ್, ವಾಲಿಬಾಲ್... ಹೀಗೆ 100ಕ್ಕೂ ಹೆಚ್ಚಿನ ಸ್ಪೋರ್ಟ್ಸ್ ಮೋಡ್‌ಗಳು ಇದರಲ್ಲಿವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ, ನಿದ್ರೆಯ ಸ್ಥಿತಿ-ಗತಿ, ವ್ಯಾಯಾಮದ ಅವಧಿ, ಉಸಿರಾಟದ ನಿಯಂತ್ರಣ, ಧ್ಯಾನ - ಏಕಾಗ್ರತೆಗೆ ನೆರವು ನೀಡುವ ವೈಶಿಷ್ಟ್ಯ, ನೀರು ಕುಡಿಯಲು ನೆನಪಿಸುವುದು, ಗಂಟೆಗೊಮ್ಮೆ ಕುಳಿತಲ್ಲಿಂದ ಎದ್ದು ದೈಹಿಕ ಚಟುವಟಿಕೆ ನೆನಪಿಡುವುದು, ಋತುಚಕ್ರದ ಮಾಹಿತಿ ಪಡೆಯುವ ಸೌಲಭ್ಯವೂ ಇದರಲ್ಲಿದೆ. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್... ಹೀಗೆ ಹಲವು ಸಾಮಾಜಿಕ ಮಾಧ್ಯಗಳ ಸ್ಮಾರ್ಟ್ ನೋಟಿಫಿಕೇಷನ್ ವಾಚ್ ಮೂಲಕವೇ ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.